Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ರಂಭಾಪುರಿ ಪೀಠಕ್ಕೆ ಗೋಡಚಿ ಕ್ಷೇತ್ರದಿಂದ ವೀರಭದ್ರೇಶ್ವರ ರಥಯಾತ್ರೆ

localview news

ರಾಮದುರ್ಗ : ಗೊಡಚಿ ಶ್ರೀ ವೀರಭದ್ರೇಶ್ವರ ಕ್ಷೇತ್ರದಿಂದ ವೀರಭದ್ರೇಶ್ವರ ಉತ್ಸವ ಮೂರ್ತಿ ರಥಯಾತ್ರೆಯು ಇಂದು ಆರಂಭವಾಯಿತು. ದಿನಾಂಕ 15 ರಂದು ಜರಗುವ ಜಗದ್ಗುರು ರೇಣುಕಾಚಾರ್ಯ ಜಯಂತಿ ಉತ್ಸವದಲ್ಲಿ ವೀರಭದ್ರೇಶ್ವರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಈ ರಥ ತಲುಪಲಿದೆ.

ವೀರಭದ್ರೇಶ್ವರ ಉತ್ಸವಮೂರ್ತಿ ರಥಯಾತ್ರೆಯ ಚಾಲನೆ ನೀಡಿ ಮಾತನಾಡಿದ, ಕಟಕೋಳ ಎಂ ಚಂದರಗಿ ಗುರುಗಡದೇಶ್ವರ ಹಿರೇಮಠದ ಶ್ರೀ ಷ ಬ್ರ ತಪೋಭೂಷಣ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳವರು ಮಾತನಾಡುತ್ತಾ, ರಂಭಾಪುರಿ ಜಗದ್ಗುರುಗಳ ಆದೇಶದಂತೆ ಗೊಡಚಿ ಕ್ಷೇತ್ರದಿಂದ ವೀರಭದ್ರೇಶ್ವರ ಉತ್ಸವಮೂರ್ತಿಯ ರಥಯಾತ್ರೆಯನ್ನು ಇಂದು ನಾವೆಲ್ಲರೂ ಆರಂಭಿಸಿದ್ದೇವೆ.

ವೀರಭದ್ರೇಶ್ವರ ತತ್ವವನ್ನು ನಾವೆಲ್ಲಾ ಅರಿತು ಆಚರಿಸುವುದು ಮುಖ್ಯ ಎಂದರು. ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿ ಭಾರತದಲ್ಲಿ ವೀರಶೈವ ಲಿಂಗಾಯತರು ಸುಮಾರು ನೂರಕ್ಕೆ ತೊಂಬತ್ತರಷ್ಟು ವೀರಭದ್ರೇಶ್ವರ ಭಕ್ತರೆ ಇದ್ದಾರೆ.

ವೀರಭದ್ರ ಮಹಾಸ್ವಾಮಿ ರಂಭಾಪುರಿ ಪೀಠದ ಗೋತ್ರ ಪುರುಷ. ಇವತ್ತು ರಂಭಾಪುರಿ ಪೀಠಕ್ಕೆ ಗೊಡಚಿಯ ಕ್ಷೇತ್ರದಿಂದ ವೀರಭದ್ರೇಶ್ವರ ರಥಯಾತ್ರೆ ನಡೆಯುತ್ತಿರುವುದು ನಮಗೆ ಅತೀವ ಸಂತೋಷ ತಂದಿದೆ ಎಂದರು. ಕಿಲ್ಲಾತೋರಗಲ್ ಗಚ್ಚಿನಮಠದ ಶ್ರೀ ಷ ಬ್ರ ಚನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ವೀರಭದ್ರೇಶ್ವರರ ತತ್ವಗಳು ಉಳಿಯಬೇಕು, ಬೆಳೆಯಬೇಕು ಎನ್ನುವ ದೃಷ್ಟಿಕೋನದಿಂದ ಈ ರಥಯಾತ್ರೆಯನ್ನು ಮಾಡುತ್ತಿದ್ದೇವೆ.

ಇದಕ್ಕೆ ಮೂಲ ಕಾರಣ ರಂಭಾಪುರಿ ಜಗದ್ಗುರುಗಳು ಎಂದರು. ಬಾಗೋಜಿಕೊಪ್ಪ ಹಿರೇಮಠದ ಶ್ರೀ ಷ ಬ್ರ ಡಾ. ಶಿವಲಿಂಗ ಮುರುಗರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವ ಲಿಂಗಾಯತರೆಲ್ಲ ಒಂದಾಗಬೇಕು ಎಂದರೆ ಅದಕ್ಕೆ ವೀರಭದ್ರನೇ ಮೂಲ ಕಾರಣನಾಗುತ್ತಾನೆ. ನಾವೆಲ್ಲರೂ ವೀರಭದ್ರೇಶ್ವರ ಕೃಪೆಯನ್ನು ಪಡೆಯುವ ಅವಶ್ಯಕತೆ ಇದೆ ಎಂದರು.

ಈ ಸಂದರ್ಭದಲ್ಲಿ ಮಲ್ಲಣ್ಣ ಯಾದವಾಡ ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ, ರಾಜೇಶ ಬೀಳಗಿ ಅದ್ಯಕ್ಷ ವೀರಶೈವ ಲಿಂಗಾಯತ ವೇದಿಕೆ, ಬಸಯ್ಯ ಬನ್ನೂರಮಠ, ಗಂಗಾಧರ ಹಿರೇಮಠ, ಸಂಗಯ್ಯ ಯರನೂರಮಠ, ವೀರನಗೌಡ ಪಾಟೀಲ, ಸಜನಂದ ಬಾವನ್ನವರ, ಪತ್ರೆಪ್ಪ ಮಲ್ಲಾಪೂರ, ಶಿವನಗೌಡ ಪಾಟೀಲ, ಕಲ್ಲನಗೌಡ ಪಾಟೀಲ, ಈರಣ್ಣ ಕಾಮನ್ನವರ, ಈರಣ್ಣ ಗುರವ, ಬಾಲಾಜಿ, ಟಿ ಪಿ ಮುನವಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.