ಗ್ರಾಮೀಣ ಕ್ಷೇತ್ರದ ದೇವಸ್ಥಾನಗಳಿಗೆ ಇತಿಹಾಸದಲ್ಲೇ ಗರಿಷ್ಟ ಅನುದಾನ - ಲಕ್ಷ್ಮಿ ಹೆಬ್ಬಾಳಕರ್
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಇತಿಹಾಸದಲ್ಲೇ ಪ್ರಸ್ತುತ ಅವಧಿಯಲ್ಲಿ ಗರಿಷ್ಟ ಪ್ರಮಾಣದ ಅನುದಾನವನ್ನು ನೀಡಲಾಗಿದೆ ಎಂದು ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ. ಸೋಮವಾರ, ಬೆಳಗುಂದಿ ಗ್ರಾಮದ ಶ್ರೀ ರವಳನಾಥ್ ಮಂದಿರದ ಮುಖ್ಯದ್ವಾರದ ಚೌಕಟ್ಟಿನ ಪ್ರತಿಷ್ಟಾಪನೆಯ ಪೂಜೆಯಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕ್ಷೇತ್ರದ ಪ್ರತಿ ಊರಿಗೂ ದೇವಸ್ಥಾನಗಳ ಜೀರ್ಣೋದ್ಧಾರದ ಸಲುವಾಗಿ ನೆರವು ಒದಗಿಸಲಾಗಿದೆ. ಜೊತೆಗೆ ದೆವಸ್ಥಾನಕ್ಕೆ ಸಂಬಂಧಿಸಿದ ಸಮುದಾಯ ಭವನಗಳಿಗೂ ಅನುದಾನ ನೀಡಲಾಗಿದೆ. ಹಿಂದೆಂದೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ನೀಡಲಾಗಿರಲಿಲ್ಲ ಎಂದು ಅವರು ಹೇಳಿದರು. ದೇವಸ್ಥಾನ ಅಷ್ಟೇ ಅಲ್ಲ, ರಸ್ತೆ, ನೀರಾವರಿ, ಶಾಲೆಗಳಿಗೂ ಸಾಕಷ್ಟು ಹಣಕಾಸಿನ ನೆರವು ನೀಡಲಾಗುತ್ತಿದೆ.
ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನ ಪ್ರತಿನಿಧಿಗಳು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಸುರೇಶ ಕೀಣೆಕರ್, ಶಿವಾಜಿ ಬೋಕಡೆ, ಯಲ್ಲಪ್ಪ ಡೇಕೋಳ್ಕರ್, ಮೃಣಾಲ ಹೆಬ್ಬಾಳಕರ್, ದಯಾನಂದ ಗೌಡ, ಅಶೋಕ ಗೌಡ, ಬಾಬು ಜಾಧವ್, ರೆಹಮಾನ್ ತಹಶಿಲ್ದಾರ, ಗೀತಾ ಡೇಕೋಳ್ಕರ್, ರಂಜನಾ ಗೌಡ, ಸೋಮನಗೌಡ, ನಿಂಗುಲಿ ಚೌಹಾನ್, ಭುಜಂಗ ಸಾವಗಾಂವ್ಕರ್, ಶಿವಾಜಿ ಬೆಟಗೇರಿಕರ್, ಪ್ರಸಾದ ಬೋಕಡೆ, ಪ್ರಲ್ಹಾದ್ ಚಿರಮುರ್ಕರ್, ಶಕುಂತಲಾ ಚಿರಮುರ್ಕರ್, ರವಳನಾಥ್ ಮಂದಿರದ ಭಕ್ತಾಧಿಗಳು, ಟ್ರಸ್ಟ್ ಕಮೀಟಿಯವರು ಮುಂತಾದವರು ಉಪಸ್ಥಿತರಿದ್ದರು.