ರಾಚವಿ: ಸಮಾಜಕಾರ್ಯ ವಿಭಾಗದ ಗ್ರಾಮೀಣ ಶಿಬಿರ
ಬೆಳಗಾವಿ : ಇಲ್ಲಿನ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗದ ವತಿಯಿಂದ ಖಾನಾಪೂರ ತಾಲೂಕಿನ ಅಶೋಕನಗರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ ಸಮಾಜಕಾರ್ಯ ಗ್ರಾಮೀಣ ಶಿಬಿರವು ಮಾರ್ಚ್ 14 ರಂದು ಉದ್ಘಾಟಿಸಲಾಯಿತು.
ಸಮಾಜಕಾರ್ಯ ಗ್ರಾಮೀಣ ಶಿಬಿರದ ಮೊದಲ ದಿನ ಗ್ರಾಮೀಣ ಸಹಭಾಗಿತ್ವ ಸಮೀಕ್ಷೆಯ ಕುರಿತು ಸಾಮಾಜಿಕ ತಜ್ಞರಾದ ಪ್ರಕಾಶ ಸಿ. ಕೋಷ್ಠಿ ರವರು ಶಿಬಿರಾರ್ಥಿಗಳಿಗೆ ವಿವರಿಸಿದರು.
ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀ ರವೀಂದ್ರನಾಥ ವೀರಪ್ಪ ದೇಮಶೆಟ್ಟಿಯವರು ಮೂಡನಂಬಿಕೆ ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಮೂಲಕ ಜನರಿಗೆ ನೈಜತೆಯ ಅರಿವು ಮೂಡಿಸಿದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ರಾದ ಡಾ. ಅಶೋಕ ಡಿ'ಸೋಜಾ, ನೆರಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಶ್ವಿನಿ ದೇಸಾಯಿ,ಗ್ರಾಮ ಪಂಚಾಯತ ಸದಸ್ಯರಾದ ನಿಂಗಪ್ಪ ಗಸ್ತಿ, ಅಶೋಕನಗರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ .ಎಮ್.ಸಿ ಅಧ್ಯಕ್ಷರಾದ ಬಸವರಾಜ ಬಡಿಗೇರ, ಮುಖ್ಯೋಪಾಧ್ಯಾಯರದ ಐ.ಬಿ.ವಸ್ತ್ರದ ಸಮಾಜಕಾರ್ಯ ಗ್ರಾಮೀಣ ಶಿಬಿರದ ಸಂಯೋಜಕರಾದ ಡಾ. ದೇವತಾ ಡಿ. ಗಸ್ತಿ , ಸಹಾಯಕ ಸಂಯೋಜಕರಾದ ಶ್ರೀ ಕಿರಣ ಎಸ್. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರದ ಡಾ. ಸಂತೋಷ ಪಾಟೀಲ, ಎಸ್.ಎಸ್. ಬಿದರಳ್ಳಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಭುದೇವ ಹಿರೇಮಠ, ಬಾಬುರಾವ್ ಹೊಸಮನಿ, ಗ್ರಾಮಸ್ತರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಶಿಬಿರದ ಮೂಲ ಉದ್ದೇಶ ಸಮಾಜದ ಅಭಿವೃದ್ಧಿ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಮಾರ್ಚ್ 19 ರವರೆಗೆ ಶಿಬಿರ ನಡೆಯಲಿದೆ.