Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬಿದಿ ಬದಿ ವ್ಯಾಪರಿಗಳಿಗೆ ಗುರುತಿನ ಚೀಟಿ ನೀಡಿ, ಆರ್ಥಿಕ ನೆರವು : ಉಪ ಆಯುಕ್ತೆ ಭಾಗ್ಯಶ್ರೀ ಹುಗ್ಗಿ

localview news

ಬೆಳಗಾವಿ : ದೀನದಯಾಳ್ ಅಂತ್ಯೋದಯ ಯೋಜನೆಯಡಿ ಬಿದಿ ಬದಿ ವ್ಯಾಪಾರಿಗಳನ್ನು ಗುರುತಿಸಬೇಕು. ಬಿದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿಯನ್ನು ಒದಗಿಸುವುದರ ಜೊತೆಗೆ ಬ್ಯಾಂಕ್ ಮೂಲಕ ಪಿ.ಎಂ.ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯವನ್ನು ಕಲ್ಪಿಸುವ ವ್ಯವಸ್ಥೆ ಇದೆ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಉಪ ಆಯುಕ್ತ(ಆಡಳಿತ)ರಾದ ಭಾಗ್ಯಶ್ರೀ ರಾ. ಹುಗ್ಗಿ ಅವರು ತಿಳಿಸಿದರು.

 

ಬೆಳಗಾವಿಯ ಬಸವರಾಜ ಕಟ್ಟಿಮನಿ ಪ್ರತಿಷ್ಠನ ಸಭಾಂಗಣದಲ್ಲಿ ಬುಧವಾರ( ಮಾರ್ಚ್ 22) ರಂದು ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ನಗರದ ಬೀದಿ ಬದಿ ವ್ಯಾಪಾರಿಗಳ ಬೆಂಬಲ ಉಪಘಟಕದಡಿ ಬೀದಿ ಬದಿ ವ್ಯಾಪಾರಿಗಳಿಗೆ ಅಧಿನಿಯಮ, ನಿಯಮ ಮತ್ತು ಯೋಜನೆಗಳ ಕುರಿತು ೨ ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮತ್ತು ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಪಟ್ಟಣ ಮರಾಟ ಸಮೀತಿ ಜವಾಬ್ದಾರಿಗಳು, ಸೌಲಭ್ಯಗಳ ವ್ಯವಸ್ಥೆ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟಿçÃಯ ನಗರ ಜೀವನೋಪಾಯ ಅಭಿಯಾನದ ಅಡಿಯಲ್ಲಿ 264 ಬೀದಿ ಬದಿ ವ್ಯಾಪಾರಿಗಳಿಗೆ ಹಂತ ಹಂತವಾಗಿ ತರಬೇತಿಯನ್ನು ಆಯೋಜಿಸಬೇಕೆಂದು ಸರ್ಕಾರದ ನಿರ್ದೇಶನವಾಗಿದ್ದು, ಅದರಂತೆ ಆಯೋಜಿಸುತ್ತೇವೆ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಆಡಳಿತ)ರಾದ ಭಾಗ್ಯಶ್ರೀ ರಾ. ಹುಗ್ಗಿ ಅವರು ತಿಳಿಸಿದರು.

ಸುವರ್ಣ ವಿಧಾನಸೌಧ ಜಿಲ್ಲಾ ಕೌಶಲ್ಯ ಮಿಷನ್ ನ ಅಭಿಯಾನ ವ್ಯವಸ್ಥಾಪಕರು ರಮೇಶ ಭೈರಾಜಿ ಮತ್ತು ಡಾ.ಸಂಜೀವ ತಿಗಣಿ, ವಕೀಲರಾದ ಯು.ವಿ.ಶೃತಿ, ಜಿಲ್ಲಾ ಅಗ್ರಣಿ ವ್ಯವಸ್ಥಾಪಕರಾದ ರಾಹುಲ್ ವಿ. ಇವರು ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದರು.

ಮಹಾನಗರ ಪಾಲಿಕೆ ಡೇ-ನಲ್ಮ್ ಶಾಖೆಯ ಕಚೇರಿ ವ್ಯವಸ್ಥಾಪಕರಾದ ಬಿ.ಎಲ್. ಆಲದಕಟ್ಟಿ, ಮಹಾನಗರ ಪಾಲಿಕೆ ಡೇ-ನಲ್ಮ್ ಶಾಖೆಯ ಸಮುದಾಯ ಸಂಘಟನಾಧಿಕಾರಿಗಳಾದ ಗೀತಾ.ರಾ. ಪಾಟೀಲ, ಸಮುದಾಯ ಸಂಘಟಕರಾದ ರೇಖಾ. ಕೆ. ಕುಲಕರ್ಣಿ, ಸವಿತಾ.ಪಿ.ಹಲಗತ್ತಿ, ಶೋಭಾ.ಮೋಹಿತೆ ಮತ್ತು ಪಟ್ಟಣ ವ್ಯಾಪಾರ ಸಮಿತಿಯ ಸರ್ಕಾರೇತರು ಸದಸ್ಯರಾದ ಸಂಗೀತಾ. ಅ. ಖೋತ, ಇಮಾಮ್ಹುಸೇನ್. ನದಾಫ್, ಪ್ರಸಾದ. ರಾ. ಕವಳೇಕರ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು