Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮೇಯರ್ ಇಲ್ಲದೆ ಬಜೆಟ್ ಮಂಡಣೆ ಮಾಡಿದ್ದು ಖಂಡನೀಯ: ಟೋಪಣ್ಣವರ

localview news

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಬಜೆಟ್ ಮೇಯರ್ ನೇತೃತ್ವದಲ್ಲಿ ನಡೆಸುವ ಬದಲು ಆಡಳಿತಾಧಿಕಾರಿ ಮಂಡಿಸಿದ್ದು ಖಂಡನೀಯ ಎಂದು ಆಮ್ ಆದ್ಮಿ ಪಕ್ಷದ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಹೇಳಿದರು.

ಬುಧವಾರ ನಗರದ ಕನ್ನಡ ಸಾಹಿತ್ಯ‌ ಭವನದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದರು.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮುಗಿದು ಆರು ತಿಂಗಳು ಕಳೆದರೂ ನೂತನ ಸದಸ್ಯರಿಗೆ ಪದಗ್ರಹಣ ಮಾಡಲು ಜನಪ್ರತಿನಿಧಿಗಳು ಅವಕಾಶ ಕಲ್ಪಿಸಿಕೊಟ್ಟಿಲ್ಲ. ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿದ್ದರೂ ಅವರನ್ನು ಹೊರಗಿಟ್ಟು ಪಾಲಿಕೆ ಬಜೆಟ್ ಮಂಡಣೆ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ದೊಡ್ಡ ಕಳಂಕ ಎಂದು ಮನವಿಯಲ್ಲಿ ದೂರಿದ್ದಾರೆ.

ವಿವಿಧ ಕಾರಣಗಳಿಂದ ಮೊದಲೇ ಮಹಾನಗರ ಪಾಲಿಕೆ ಚುನಾವಣೆ ಎರಡೂವರೆ ವರ್ಷಗಳ ಕಾಲ ಮುಂದೂಡಲ್ಪಟ್ಟಿತ್ತು. ಆದರೆ ಈಗ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿದ್ದರೂ ಸಹ ಅವರು ಇಲ್ಲಿಯವರೆಗೆ ಪ್ರಮಾಣ ವಚನ ಸ್ವೀಕಾರ ಮಾಡಿಲ್ಲ. ಇದರಿಂದ ನಗರದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಅಲ್ಲದೆ, ಪ್ರಸಕ್ತ ಬಜೆಟ್ ನಲ್ಲಿ ಮೇಯರ್, ಉಪಮೇಯರ್ ಇಲ್ಲದೆ ಮಂಡಿಸಿರುವುದು ಬೆಳಗಾವಿ ನಗರದ ದುರಂತವೆ ಆಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಬೆಳಗಾವಿ ನಗರ ವೇಗವಾಗಿ ಬೆಳೆಯುತ್ತಿದೆ. ಕಳೆದ 16 ವರ್ಷಗಳಿಂದ ಇಲ್ಲಿ ಹೊಸ ಬಡಾವಣೆ ನಿರ್ಮಾಣವಾಗಿಲ್ಲ. ಪ್ರಾಮಾಣಿಕವಾಗಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ನಿವೇಶನ ಹಂಚಿಕೆ ಮಾಡಬೇಕಿತ್ತು. ಆದರೆ ತರಾತುರಿಯಲ್ಲಿ ಸರ್ಕಾರಿ ರಜೆ ಇದ್ದ ಸಂದರ್ಭದಲ್ಲಿ ಪ್ಲಾಟ್ ಹರಾಜು ಕಡತಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಬುಡಾ ಅಧಿಕಾರಿಗಳು ಪ್ಲಾಟ್ ಹರಾಜಿನಲ್ಲಿ ಅವ್ಯವಹಾರ ಮಾಡಿದ್ದಾರೆ ಅಲ್ಲದೆ, ಮಾ.18ಕ್ಕೆ ಮ್ಯಾನವಲ್ ಆಪ್ಸನ್ ಮಾಡಿದ್ದಾರೆ. ಎನ್ನುವ ಅನುಮಾನ ವ್ಯಕ್ತವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ‌.

ಕೂಡಲೇ ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸಿ ಅವ್ಯವಹಾರದಿಂದ ಹರಾಜು ಆಗಿರುವ ಪ್ಲಾಟ್ ಗಳ ಬಗ್ಗೆ ಸಮಗ್ರ ತನಿಖೆ ನಡೆಸುವವರೆಗೂ ಪ್ಲಾಟ್ ಹಂಚಿಕೆ ಮಾಡಬಾರದು. ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಪ್ರಭಾವ ಬೆಳೆಸಿ ಪ್ಲಾಟ್ ಹಂಚಿಕೆ ಮಾಡಿದರೆ ಆಮ್ ಆದ್ಮಿ ಪಕ್ಷದಿಂದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಆಮ್ ಆದ್ಮಿ ಜಿಲ್ಲಾಧ್ಯಕ್ಷ ವಿಜಯ ಪಾಟೀಲ, ಅನಿಸ್ ಸೌದಾಗರ, ಅರಣು ಟಕ್ಕಣ್ಣವರ, ಶಂಕರ ಹೆಗಡೆ, ಸಾದೀಕ ಮುಲ್ಲಾ, ಪ್ರದೀಪ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.