Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಉತ್ತರ ಕರ್ನಾಟಕ ಸಾಹಿತ್ಯ ಕ್ಷೇತ್ರಕ್ಕೆ ಜ್ಞಾನ ಸಂಪತ್ತಿನ ಕೃತಿಗಳನ್ನು ನೀಡಿದ ನೆಲವಿದು : ಮೃತ್ಯುಂಜಯ ದೊಡ್ಡವಾಡ

localview news

ಮೂಡಲಗಿ: ಸದಾ ಕಾಲ ಸಾಹಿತ್ಯ ಕ್ಷೇತ್ರಕ್ಕೆ ತನ್ನದೆ ವಿಶಿಷ್ಠ ಕೊಡುಗೆ ನೀಡುತ್ತಿರುವ ಉತ್ತರ ಕರ್ನಾಟಕದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಐತಿಹಾಸಿಕ, ಜಾನಪದ ಹೀಗೆ ಎಲ್ಲ ಕ್ಷೇತ್ರಗಳಿಗೂ ತನ್ನ ಪತ್ರಿಭೆಗಳನ್ನು ಧಾರೆ ಎರೆದಿದೆ. ಅಪಾರ ಪ್ರಮಾಣದ ವೈವಿಧ್ಯಪೂರ್ಣ ಜ್ಞಾನ ಸಂಪತ್ತಿನ ಕೃತಿಗಳನ್ನು ನಾಡಿಗೆ ನೀಡಿದ ನೆಲವಿದು ಎಂದು ಬೆಂಗಳೂರಿನ ಖ್ಯಾತಗಾಯಕ ಮೃತ್ಯುಂಜಯ ದೊಡ್ಡವಾಡ ಹೇಳಿದರು.

ಬುಧುವಾರ ಸಂಜೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಂಗಳೂರಿನ ಇಂಡಿಯನ್ ಮ್ಯೂಜಿಕ್ ಅನೋಸಿಯೇಷನ್ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಆಶ್ರಯದಲ್ಲಿ ಜರುಗಿದ, “ಭಾವದೀವಿಗೆ ಸುಗಮ ಸಂಗೀತೋತ್ಸವ” ಕಾರ್ಯಕ್ರಮವನ್ನು ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚದಲ್ಲೇ ಕಾವ್ಯ ಪರಂಪರೆಯಲ್ಲಿ ನಮ್ಮ ಕನ್ನಡ ನಾಡು ಶ್ರೀಮಂತ ನಾಡು, ಸಾಕಷ್ಟು ಕವಿಗಳು, ಶರಣರು, ಸಾಹಿತಿಗಳು ಅನೇಕ ಕೃತಿಗಳನ್ನು ರಚಿಸುವ ಮೂಲಕ ಕನ್ನಡಾಂಭೆಯ ವೈಭವವನ್ನು ಹೆಚ್ಚಿವುವಲ್ಲಿ ಶ್ರಮವಹಿಸಿದ್ದಾರೆ.

ಭಾವದೀವಿಗೆ ಎಂಬ ಹೆಸರಿನಲ್ಲಿ ಮನುಷ್ಯನ ನಿಷ್ಕಲ್ಮಶ ಭಾವನೆಯಲ್ಲಿ ಕಾವ್ಯಗಳನ್ನು ಸಂಗೀತ ರೂಪದಲ್ಲಿ ನಾಡಿನ ಜನರಿಗೆ ತಲುಪಿಸುವಂತ ಕಾರ್ಯಕ್ರಮ ಶ್ಲಾಘನೀಯವಾದ್ದು ಎಂದು ಹೇಳಿದರು. ಇಂಡಿಯನ್ ಮ್ಯೂಜಿಕ್ ಅನೋಸಿಯೇಷನ್ ಸಂಸ್ಥಾಪಕ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕ ರವೀಂದ್ರ ಸೊರಗಾಂವಿ ಮಾತನಾಡಿ, ಕನ್ನಡ ನಾಡಿನ ಕುಂವೆಪು, ಬೇಂದ್ರೆ ಸೇರಿದಂತೆ ಅನೇಕ ಕವಿಗಳು ಬರೆದಂತಹ ಕೃತಿಗಳು ಸಾಹಿತಿಗಳು ಜನರಮೆಚ್ಚಿಗೆಗೆ ಪಾತ್ರವಾಗಿದ್ದು, ಅವರು ರಚಿಸಿದಂತಹ ಸಾಹಿತ್ಯವನ್ನು ಸುಗಮ ಸಂಗೀತ ಕಾರ್ಯಕ್ರಮ ಮೂಲಕ ನಮ್ಮ ನಾಡಿನ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.

ಮೂಡಲಗಿಯ ಸಿದ್ದಸಂಸ್ಥಾನ ಮಠದ ಪೂಜ್ಯಶ್ರೀ ಶ್ರೀಧರಬೋಧ ಸ್ವಾಮೀಜಿ, ತಹಶೀಲ್ದಾ ಡಿ ಜಿ ಮಹಾತ್, ಲಯನ್ಸ್ ಕ್ಲಬ್ ಮೂಡಲಗಿ ತಾಲೂಕಾಧ್ಯಕ್ಷ ಬಾಲಶೇಖ ಬಂದಿ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಖಾ ಹಾದಿಮನಿ, ಪುರಸಭೆ ಮುಖ್ಯಾಧಿಕಾರಿ ದೀಪಕ್ ಹರ್ದಿ, ಸಿಪಿಐ ವೆಂಕಟೇಶ ಮುರನಾಳ, ಪಿಎಸ್‌ಐ ಹಾಲಪ್ಪ ಬಾಲದಂಡಿ, ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ಸೋನವಾಲ್ಕರ, ಕಸಪಾ ತಾಲೂಕಾಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ, ನಾಗನೂರಿನ ಹಿರಿಯ ಕಲಾವಿದ ಮಹಾದೇವಪ್ಪ ಬಂಗಿ ಹಾಗೂ ಲಯನ್ಸ್ ಕ್ಲಬ್ ಮತ್ತು ಕಸಪಾದ ಪಾದಾಧಿಕಾರಿಗಳು ಮತ್ತಿತರು ಉಪಸ್ಥಿತಿರಿದ್ದರು.