Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಉಚಗಾಂವ್ ಗ್ರಾಮದ ಕುಟುಂಬಕ್ಕೆ ನೆರವಾದ ಪೃಥ್ವಿ ಸಿಂಗ್ .

localview news

ಬೆಳಗಾವಿ: ಹಲವು ವರ್ಷಗಳಿಂದ ಸಾಕಷ್ಟು ತೊಂದರೆ ಅನುಭವಿಸುತ್ತ ಜೀವನ ಸಾಗಿಸುತ್ತಿದ್ದ ಕುಟುಂಬ ಒಂದಕ್ಕೆ ದಿನಬಳಕೆ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದ ಪೃಥ್ವಿ ಸಿಂಗ್ ಫೌಂಡೇಶನ್ ಮತ್ತು ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ಜೊತೆಗೂಡಿ ಸಹಾಯ ಹಸ್ತ ನೀಡಿದೆ.

ಹೌದು ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ಆನಂದಿ ಎನ್ನುವ ಮಹಿಳಿಗೆ ಮತ್ತು ಅವರಿಬ್ಬ ಮಕ್ಕಳಾದ ಮಹದೇವ 39 ವರ್ಷದ ವ್ಯಕ್ತಿಯಾಗಿದ್ದು ಮತ್ತು ಯಲ್ಲಪ್ಪ 28 ವರ್ಷದ ವ್ಯಕ್ತಿಯಾಗಿದ್ದು ಇಬ್ಬರು ಮಕ್ಕಳು ಕೂಡಾ ಬುದ್ದಿ ಮಾಂದ್ಯದಿಂದ ಬಳಲುತ್ತಿದ್ದು ಇದನ್ನ ಗಮನಿಸಿದ ಬೆಳಗಾವಿ ಪೃಥ್ವಿಸಿಂಗ್ ಪೌಂಡೇಶನ ಹಾಗೂ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲನ ಸಹಭಾಗಿತ್ವದಲ್ಲಿ ಇವತ್ತು ದಿನಬಳಕೆ ವಸ್ತುಗಳನ್ನು ನೀಡಿ ಅವರ ಕಷ್ಟಕ್ಕೆ ಸ್ಪಂದಿಸಿದ್ದಾರೆ.

ಆದರೆ ಇವರು ನಿರಾಶ್ರಿತರಾಗಿ ಜೀವನ ನಡೆಸುತ್ತಿದ್ದು. ಮಹಿಳೆಯ ಕುಟುಂಬದ ನಾಲ್ವರು ಕೊರೊನಾ ಮಾಹಾಮಾರಿ ವೈರಸ್‌ಗೆ ಪ್ರಾಣ ಕಳೆದುಕೊಂಡಿದ್ದಾರೆ . ಆದರೆ ಈ ಮಹಿಳೆ ತನಗೆ ಹಾಗೂ ತನ್ನ ಇಬ್ಬರು ಬುದ್ದಿಮಾಂದ್ಯ ಮಕ್ಕಳನ್ನು ಪೋಷಿಸಲು ಆನಂದಿ ಎನ್ನುವ ಮಹಿಳೆ ಇನ್ನೂ ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದು.ಕುಟುಂಬ ತೀವ್ರ ಸಂಕಷ್ಟದಲ್ಲಿದೆ.ಆದ್ದರಿಂದ ಇದನ್ನ ಗಮನಿಸಿದ ಬೆಳಗಾವಿ ಪೃಥ್ವಿಸಿಂಗ್ ಪೌಂಡೇಶನ ಹಾಗೂ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲನ್ ಪದಾಧಿಕಾರಿಗಳು ತಕ್ಷಣ ನಿರಾಶ್ರಿತರ ಕುಟುಂಬಕ್ಕೆ ದಿನಬಳಕೆ ವಸ್ತುಗಳನ್ನು ನೀಡಿ ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ತಿಳಿಸಿ ಬಂದರು

ಈ ಸಂದರ್ಭದಲ್ಲಿ ಪೃಥ್ವಿ ಸಿಂಗ್ ಫೌಂಡೇಶನ್‌ನ ಸಂಸ್ಥಾಪಕರಾದ ಪೃಥ್ವಿ ಸಿಂಗ್,ಪೃಥ್ವಿ ಸಿಂಗ್ ಫೌಂಡೇಶನ್‌ನ ಉಪಾಧ್ಯಕ್ಷ ಜಸ್ವೀರ್ ಸಿಂಗ್, ಫೇಸ್‌ಬುಕ್ ಸ್ನೇಹಿತರ ವಲಯದ ಮುಖ್ಯಸ್ಥ ಸಂತೋಷ್ ಆರ್ ದಾರೇಕರ್ ಮತ್ತು ಅವಧೂತ್ ತುಡವೇಕರ್ ಸಾಮಾಜಿಕ ಕಾರ್ಯಕರ್ತ ಇನ್ನು ಹಲವು ಜನರ ಉಪಸ್ಥಿತರಿದ್ದರು.