Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ದೇಸೂರಿನಲ್ಲಿ ಶ್ರೀರಾಮ ದೇವಸ್ಥಾನ ಉದ್ಘಾಟನೆ

localview news

ಬೆಳಗಾವಿ :ತಾಲೂಕಿನ ದೇಸೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀರಾಮ ದೇವರ ದೇವಸ್ಥಾನದ ಉದ್ಘಾಟನಾ ಸಮಾರಂಭ ಜರುಗಿತು.

ದೇವಸ್ಥಾನ ಸಮಿತಿಯ ವತಿಯಿಂದ ಅತಿಥಿಗಳಿಗೆ ಶಾಲು ಹೊದಿಸಿ ತೆಂಗಿನಕಾಯಿ ಹಾಗೂ ಹಿಂದೂಗಳ ಆರಾಧ್ಯ ದೈವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳನ್ನು ನೀಡಿ ಗೌರವಿಸಲಾಯಿತು. ಬಿಜೆಪಿ ಎಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಮೇಶ್ ಗೋರಲ್, ಪೃಥ್ವಿ ಸಿಂಗ್ ಫೌಂಡೇಶನ್ ನಿರ್ದೇಶಕ ಜಸ್ವೀರ್ ಸಿಂಗ್ ರಿಬ್ಬನ್ ಕತ್ತರಿಸಿ ದೇವಸ್ಥಾನವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಚೇತನ್ ಪಾಟೀಲ್, ರಮೇಶ ಪಾಟೀಲ್, ಬಾಪು, ಸಂಕೇತ್ ಪಾಟೀಲ್, ಯಲ್ಲಪ್ಪ ಸಾವಂತ, ವಿನೋದ ಪಾಟೀಲ್, ರಂಜಿತ್ ಪೋಟೆ ಸೇರಿದಂತೆ ಶ್ರೀರಾಮ ಭಕ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.