Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಧಾರ್ಮಿಕ ವಾತಾವರಣದೊಂದಿಗೆ ಆದರ್ಶ ರೀತಿಯಲ್ಲಿ ಗ್ರಾಮೀಣ ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ

localview news

ಬೆಳಗಾವಿ : ಬೆಳಗುಂದಿ ಗ್ರಾಮದ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದ ರಿಂಗನ್ ಸೋಹಳ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಂಗಳವಾರ ಚಾಲನೆಯನ್ನು ನೀಡಿದರು.

ನಂತರ ಶ್ರೀ ವಿಠ್ಠಲ ರುಕ್ಮಿಣಿ ದೇವರ ದರ್ಶನ ಪಡೆದ ಅವರು, ಗ್ರಾಮೀಣ ಕ್ಷೇತ್ರಾದ್ಯಂತ ಧಾರ್ಮಿಕ ಕಾರ್ಯಕ್ರಮಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಸರಕಾರದಿಂದ, ಶಾಸಕರ ನಿಧಿಯಿಂದ ಹಾಗೂ ವಯಕ್ತಿಕವಾಗಿ ಕೂಡ ಸಾಕಷ್ಟು ಅನುದಾನ ಕೊಡುತ್ತಿದ್ದಾರೆ.

ಇಡೀ ಕ್ಷೇತ್ರದಲ್ಲಿ ನೂರಾರು ದೇವಸ್ಥಾನಗಳು ಜೀರ್ಣೋದ್ಱಾರವಾಗಿ, ಎಲ್ಲೆಡೆ ಧಾರ್ಮಿಕ ವಾತಾವರಣ ನಿರ್ಮಾಣವಾಗಿರುವುದನ್ನು ನೋಡಿದರೆ ಖುಷಿಯಾಗುತ್ತಿದೆ. ಜನರ ಸಹಕಾರ, ಮಾರ್ಗದರ್ಶನದಿಂದ ಶಾಸಕರು ಕ್ಷೇತ್ರವನ್ನು ಆದರ್ಶ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಯಲ್ಲಪ್ಪ ಡೇಕೋಳ್ಕರ್, ದಯಾನಂದ ಗೌಡ, ಸೋನು ಗೌಡ, ಶಿವಾಜಿ ಬೋಕಡೆ, ಗೀತಾ ಡೇಕೋಳ್ಕರ್, ಪ್ರಲ್ಹಾದ್ ಚಿರಮುರ್ಕರ್, ದೇವಸ್ಥಾನದ ಭಕ್ತಾಧಿಗಳು ಉಪಸ್ಥಿತರಿದ್ದರು.