Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮಹಾಂತ ದೇವರಿಗೆ ಪಿಎಚ್‌ಡಿ ಪದವಿ

localview news

ಬೆಳಗಾವಿ : ಶೇಗುಣಸಿ ವಿರಕ್ತಮಠದ ಮಹಾಂತ ದೇವರಿಗೆ ರಾಣಿಚನ್ನಮ್ಮ ವಿಶ್ವ ವಿದ್ಯಾಲಯದಲ್ಲಿ, ಇಂಗ್ಲೆಂಡಿನ ರಾಷ್ಟ್ರಕವಿ ವಿಲಿಯಮ್ ವರ್ಡ್ಸವರ್ಥ ಹಾಗೂ ಕನ್ನಡದ ಮೊದಲ ಕವಯತ್ರಿ ಅಕ್ಕಮಹಾದೇವಿಯವರ ಸಾಹಿತ್ಯದಲ್ಲಿ ಅನುಭಾವವು ಹೇಗೆ ಚಿತ್ರವಾಗಿದೆ ಎಂಬ ಮಹಾಪ್ರಬಂಧಕ್ಕೆ ಪಿ.ಹೆಚ್.ಡಿ ಪದವಿ ದೊರಕಿದೆ.

ಪೂಜ್ಯರ ಈ ಪ್ರಬಂಧದಲ್ಲಿ 12 ನೇ ಶತಮಾನದ ಅಕ್ಕಮಹಾದೇವಿಯವರ ಸಾಹಿತ್ಯ ಹಾಗೂ ಇಂಗ್ಲೆಂಡಿನ ಕವಿ ವಿಲಿಯಂ ವರ್ಡ್ಸವರ್ಥ ಅವರ ಸಾಹಿತ್ಯ ಆ ಕಾಲಘಟ್ಟದಲ್ಲಿ ಯಾವೆಲ್ಲ ಸಾಮಾಜಿಕ ಚಿಂತನೆಗೆ ದಾರಿಯಾಗಿತ್ತು ಹಾಗೂ ಅಕ್ಕಮಹಾದೇವಿಯವರ ಭಾರತೀಯ ಅನುಭಾವವು ಹೇಗೆ ಚಿತ್ರವಾಗಿದೆ ಎನ್ನುವ ಆಯಾಮವು ವಿದ್ವಾಂಸರ ಗಮನ ಸೆಳೆದರಿರುವ ಅಂಶವಾಗಿದೆ.

ಭಾರತೀಯ ಮತ್ತು ಪಾಶ್ಚಿಮಾತ್ಯ ಅನುಭಾವದ ತೌಲನಿಕ ಅಧ್ಯಯನವು ಹೆಚ್ಚು ಮಹತ್ವ ಪಡೆದುಕೊಂಡಿದೆ. ಇವರಿಗೆ ಡಾ. ಗುರುದೇವಿ ಹುಲ್ಲೆಪ್ಪನವರಮಠ ಮಾರ್ಗದರ್ಶನ ಮಾಡಿದ್ದಾರೆ.