Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಯುಗಾದಿ ಹಬ್ಬಕ್ಕೆ ಶುಭಾಶಯ ಕೋರಿದ ಹುಕ್ಕೇರಿ ಶ್ರೀಗಳು

localview news

ಬೆಳಗಾವಿ : ಹಿಂದೂಗಳಿಗೆ ಹೊಸ ವರ್ಷ ಇದು. ಹಿಂದೂಗಳ ಪಾಲಿಗೆ ಅತಿ ಮಹತ್ವದ ದಿನ ಇದು. ಉದರಕ್ಕೆ ಸಿಹಿಯಾದ ಬೇವು, ಅದರಕ್ಕೆ ಸಿಹಿಯಾದ ಬೆಲ್ಲ ಎರಡನೂ ಸೇವಿಸಿ ಕಷ್ಟ, ಸುಖ, ನೋವು, ನಲಿವು ಎಲ್ಲವನ್ನೂ ಸಮನಾಗಿ ಸ್ವೀಕರಿಸುವ ಅಪರೂಪದ ದಿನ. ಬೇವುವನ್ನು ತಲೆಯ ಮೇಲೆ ಹಾಕಿಕೊಂಡು ಹೊಸ ವರ್ಷವನ್ನು ಸ್ವಾಗತಿಸುವ ವಿಶೇಷವಾದ ಹಬ್ಬ ಯುಗಾದಿ.

ನಾವೆಲ್ಲರೂ ಸಂತೋಷದಿಂದ ಇರೋಣಾ‌. ನಮ್ಮಿಂದ ಯಾರಿಗಾದರೂ ನೋವಾಗಿದ್ದರೆ ಭಗವಂತ ನಾವು ಮಾಡಿರುವ ತಪ್ಪನ್ನು ಕ್ಷಮಿಸು ಎಂದು ಭಗವಂತನಲ್ಲಿ ಕೇಳೋಣ. ನಮಗೆ ಯಾರಿಂದಲಾದರೂ ನೋವಾಗಿತ್ತು ಎಂದರೆ ಅವರ ಎಲ್ಲಾ ತಪ್ಪುಗಳನ್ನು ಕ್ಷಮಿಸಿ ಬಿಡೋಣ. ಮತ್ತೊಬ್ಬರ ತಪ್ಪನ್ನು ನಾವು ಕ್ಷಮಿಸಿದೇವು ಎಂದರೆ ಭಗವಂತ ನಮ್ಮ ತಪ್ಪನ್ನು ಕ್ಷಮಿಸುತ್ತಾನೆ.

ಇವತ್ತು ಎಲ್ಲರೂ ಸಂತೋಷವಾಗಿರುವುದು ಮುಖ್ಯ. ಜೀವನದಲ್ಲಿ ಏನೇ ಬರಲಿ ಅವುಗಳನ್ನು ತಾಳ್ಮೆಯಿಂದ ಎದುರಿಸುವ ತಾಖತ್ತು ಭಗವಂತ ನಮಗೆ ನೀಡಲಿ. ಎಲ್ಲರೂ ಖುಷಿ, ಖುಷಿಯಿಂದ ರಾಗ, ಧ್ವೇಷ ಎಲ್ಲವನ್ನು ಮರೆತು ಪ್ರೀತಿಯಿಂದ ಇರೋಣ. ನಮ್ಮತನವನ್ನು ನಾವು ಎಂದಿಗೂ ಬಿಡುವುದು ಬೇಡ.

ಎಲ್ಲರನ್ನೂ ಪ್ರೀತಿಸಿ. ಆದರೆ ಪ್ಲೀಸ್ ಮಾಡುವ ಸಂಸ್ಕೃತಿ ಒಳಿತಲ್ಲ ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ. ಯುಗಾದಿಯ ಹಬ್ಬ ವಿಶೇಷವಾಗಿರುವುದು. ನೀವು ಮಾಡಬೇಕಾಗಿರುವ ಅಪರೂಪದ ಕಾರ್ಯ ಎಂದರೆ ತಂದೆ, ತಾಯಿಯರಿಗೆ ನಮಸ್ಕರಿಸಿ ಅವರು ಪ್ರತಿಯೊಬ್ಬರಿಗೂ ಬಹಳ ಪ್ರಮುಖರು. ಅವರಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆಯಿರಿ.

ನಿಮ್ಮ ಮನೆಯಲ್ಲಿರುವ ಅತಿಥಿಗಳು ಎಂದರೆ ಹಿರಿಯರು, ಸಂಬಂಧಿಕರು, ಹಿತೈಷಿಗಳು ಅವರಿಗೆ ದೂರವಾಣಿ ಕರೆ ಮಾಡಿ ಆಶೀರ್ವಾದ ಪಡೆಯಿರಿ. ಬಳಿಕ ನಿಮ್ಮ ಗುರುಗಳು ನಿಮಗೆ ದೀಕ್ಷೆ, ವಿದ್ಯೆ ಕೊಟ್ಟವರನ್ನು ಸಂಪರ್ಕಿಸಿ ಆಶೀರ್ವಾದ ಪಡೆಯಿರಿ. ಎಲ್ಲರಿಗೂ ಭಗವತ್ ಕೃಪೆ ಸದಾ ಇರಲಿ. ನಿಮಗೆ ಏನಾದರೂ ಉತ್ತರ ಸಿಗಬೇಕು ಎಂದಾದರೆ ನಾಳೆ ಎದ್ದ ತಕ್ಷಣ ಯಾರೊಂದಿಗೂ ಮಾತನಾಡದೆ ಹತ್ತು ನಿಮಿಷಗಳ ಕಾಲ ಪ್ರಾರ್ಥನೆ ಮಾಡಿ ಭಗವಂತನಲ್ಲಿ ನಾನು ಮಾಡುವುದು ಸರಿಯೇ ಎಂದು ಕೇಳಿದಾಗ ಖಂಡಿತವಾಗಿ ಹೇಳುತ್ತಾನೆ.

ಯಾವುದು ಸರಿ, ತಪ್ಪು ಎಂದು. ನಾಳೆಯಿಂದಲಾದರೂ ನಮ್ಮನ್ನು ನಾವು ಕೇಳಿ ಮುಂದೆ ಹೋಗೊಣ.ನಮಗೆ ನಾವು ಉತ್ತವಾಗಿ ನಿಲ್ಲೋಣ, ಎತ್ತರಕ್ಕೆ ಬೆಳೆಯೋಣ. ಎಲ್ಲರೂ ಸಂತೋಷವಾಗಿರಿ ನಿಮ್ಮೊಂದಿಗೆ ಯಾವಾಗಲೂ ಇರುವ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ‌ಶಿವಾಚಾರ್ಯ ಸ್ವಾಮೀಜಿ. ಬೇವು, ಬೆಲ್ಲ ತಿಂದು ನಮ್ಮ ಪವಿತ್ರ ಹಬ್ಬವನ್ನು ಆಚರಿಸೋಣ.