Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಟೆಂಡರ್ ದಿನಾಂಕ ಮುಗಿದೇ ಇಲ್ಲ ಅಬ್ಬಾ ಸ್ಪೋರ್ಟ್ಸ್ ಹತೋಟಿಗೆ ತೆಗೆದುಕೊಂಡಿದೆ: ಟೋಪಣ್ಣವರ ಆರೋಪ

localview news

ಬೆಳಗಾವಿ : ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಬೆಳಗಾವಿಯಲ್ಲಿ ಮೌಕೀಕ ಆದೇಶಗಳು ಜಾಲ್ತಿಯಲ್ಲಿವೆ. ಬಸವೇಶ್ವರ ವೃತ್ತದ ಬಳಿ ಇರುವ ಸ್ವಿಮಿಂಗ್ ಫೂಲ್ ಟೆಂಡರ್ ದಿನಾಂಕ ಮುಗಿದೇ ಇಲ್ಲ ಅಬ್ಬಾ ಸ್ಪೋರ್ಟ್ಸ್ ಅಕ್ರಮವಾಗಿ ಹತೋಟಿಗೆ ತೆಗೆದುಕೊಂಡಿದೆ ಎಂದು ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ‌ಆರೋಪಿಸಿದರು.

ಶುಕ್ರವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಬಸವೇಶ್ವರ ವೃತ್ತದಲ್ಲಿ 1978ರಲ್ಲಿ ಪಾಲಿಕೆಯ ಜಾಗೆಯಲ್ಲಿ ರೋಟರಿ ಕ್ಲಬ್ ನವರು ನಿರ್ಮಾಣ ಮಾಡಿಕೊಂಡರು. 1992ರಲ್ಲಿ ಸಂಭಾಜಿ ಪಾಟೀಲ ಮೇಯರ್ ಇದ್ದ ವೇಳೆ ಅದನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ‌ ಎಂದು ಮತ್ತೇ ಲೀಸ್ ನಲ್ಲಿ ರೋಟರಿ ಕ್ಲಬ್ ನವರಿಗೆ ನೀಡಿದರು. ಅಲ್ಲಿಂದ ಇಲ್ಲಿಯವರೆಗೂ ರೋಟರಿ ಕ್ಲಬ್ ನಿರ್ವಹಣೆ ಮಾಡಿದ್ದಾರೆ. ಅಲ್ಲದೆ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಸ್ಕೇಟಿಂಗ್ ಸೇರಿದಂತೆ ಇನ್ನಿತರ ಕ್ರೀಡಾಚಟುವಟಿಕೆಗಳಿಗೆ ಸಾಕಷ್ಟು ಕ್ರೀಡಾಪಟುಗಳು ಸಿದ್ದಗೊಂಡಿದ್ದಾರೆ ಎಂದರು.

ರೋಟರಿ ಕ್ಲಬ್ ನವರ ಅವಧಿ ಮುಗಿದ ಬಳಿಕ ಟೆಂಡರ್ ಇನ್ನೂ ಮುಗಿದಿಲ್ಲ. ಪಾಲಿಕೆಯವರು ಲೀಜ್ ಕೊಡುವ ಬದಲು ನಿರ್ವಹಣೆ ನೀಡುವ ಟೆಂಡರ್ ಕರೆದಿರುವುದು ಹಾಸ್ಯಾಸ್ಪದ ಎಂದರು.

ಟೆಂಡರ್ ಕರೆದಿದ್ದು ಕೊನೆಯ ದಿನಾಂಕ ಏ.6 ಕ್ಕೆ ಆದರೆ ಅಬ್ಬಾ ಸ್ಪೋಟ್ಸ್ ಕ್ಲಬ್ ಬೆಳಗಾವಿ ಅವರು ಟೆಂಡರ್ ಅವಧಿ ಇನ್ನೂ ‌ಮುಗಿದಿಯೇ ಇಲ್ಲ. ಶಾಸಕರ ಫೋಟೊ ಹಾಕಿಕೊಂಡು ತಮ್ಮ ಹತೋಟಿಗೆ ತೆಗೆದುಕೊಂಡಿದ್ದಾರೆ ಎಂದರು.

ಕಳೆದ 30 ವರ್ಷದಿಂದ ರೋಟರಿ ಕ್ಲಬ್ ಸಮರ್ಪಕವಾಗಿ ಬಸವೇಶ್ವರ ವೃತ್ತದ ಬಳಿಯ ಸ್ವಿಮಿಂಗ್ ಫೂಲ್ ನಿರ್ವಹಣೆ ಮಾಡುತ್ತಿತ್ತು. ಅದು ಈಗ ಎನ್ ಜಿಓ ಸಂಸ್ಥೆಯಾಗಿರುವುದರಿಂದ ಅದಕ್ಕೆ ಪಾಲಿಕೆ ಕರೆದಿರುವ ಟೆಂಡರ್ ಹಾಕಲು ಬರುವುದಿಲ್ಲ ಎಂದರು.

ಬೆಳಗಾವಿ ಸ್ಮಾರ್ಟ್ ಸಿಟಿಯ ಮಂಡೋಳಿ ರಸ್ತೆಯ ಗುತ್ತಿಗೆದಾರರಿಗೆ ಅಧಿಕಾರಿಗಳು ಮಾಡಿರುವ ತಪ್ಪಿನಿಂದ ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ. ಸರಕಾರ‌ ಈ ಕುರಿತು ಕ್ರಮ ಕೈಗೊಳ್ಳದಿದ್ದರೇ ಆಮ್ ಆದ್ಮಿ ಹೋರಾಟ ನಡೆಸಲಾಗುವುದು ಎಂದರು.

ಬುಡಾ ಅಧಿಕಾರಿಗಳು ಕಣಬರಗಿ ಹೊಸ ಬಡಾವಣೆ ಮಾಡಲು ಸಿದ್ಧರಿಲ್ಲ. ಕಣಬರಗಿಯ ಸುತ್ತಮುತ್ತಲಿನಲ್ಲಿ ಬಿಜೆಪಿ ನಾಯಕರ ಜಮೀನು ಇರುವುದರಿಂದ ಇದಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬುಡಾ ಸಭೆಯಲ್ಲಿ ಆಪ್ ಲೈನ್ ಆಕ್ಷನ್ ಮಾಡಿರುವ ಪ್ರಸ್ತಾಪ ಬುಡಾ ಅಧಿಕಾರಿಗಳು ಮಾಡಿದ್ದಾರೆ. ಹೋಳಿ ಹಬ್ಬದ ದಿನದಂದು ಬುಡಾದಿಂದ 113 ಪ್ಲಾಟ್ ಹರಾಜು ಪ್ರಕ್ರಿಯೆಯಲ್ಲಿ 91 ಪ್ಲಾಟ್ ಗಳನ್ನು ಮಾರಾಟ ಮಾಡಿದ್ದಾರೆ. ಇದರಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಆಮ್ ಆದ್ಮಿ ಜಿಲ್ಲಾಧ್ಯಕ್ಷ ವಿಜಯ ಪಾಟೀಲ, ಶಂಕರ‌ ಹೆಗಡೆ, ಅನಿಸ್ ಸೌದಾಗರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.