Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಅಷ್ಟವಿನಾಯಕ ಗಣೇಶ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದ ಸಂಸದೆ ಅಂಗಡಿ ಮತ್ತು ಪೃಥ್ವಿ ಸಿಂಗ್.

localview news

ಬೆಳಗಾವಿ: ಇಂದು ಅಷ್ಟವಿನಾಯಕನಗರ ಯಳ್ಳೂರ,ವಡಗಾಂವ್ ರಸ್ತೆಯಲ್ಲಿರುವ ಅಷ್ಟವಿನಾಯಕ ಗಣೇಶ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಸಂಸದೆ ಮಂಗಳಾ ಅಂಗಡಿ, ಪೃಥ್ವಿ ಸಿಂಗ್ ಫೌಂಡೇಶನ್ ಅಧ್ಯಕ್ಷೆ, ಬಿಜೆಪಿ ಎಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಾಲನೆ ನೀಡಿದರು.

ಬೆಳಗಾವಿ ಜಿಲ್ಲೆಯನ್ನ ಮಾದರಿ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವುದು ನಮ್ಮಲ್ಲೆರ ಆಶಯ ಹಾಗೇಯೆ ಜನರ ಬೇಕು ಬೇಡಿಕೆಗಳನ್ನ ಈಡೇರಿಸುವುದೇ ನಮ್ಮ ಉದ್ದೇಶ ಎಂದು ಸಂಸದೆ ಮಂಗಳಾ ಅಂಗಡಿ ತಿಳಿಸಿದರು.

ಈ ವೇಳೆ ಪಾಲಿಕೆ ಸದಸ್ಯರಾದ ಶಂಕರ ಪಾಟೀಲ,ಗಂಗಾಧರ ಪಾಟೀಲ, ಶ್ರೀಕಾಂತ ಪೋರವಾಲ್, ಬಾಳು ಗೋರಲ್, ಪ್ರಕಾಶ ಗಡ್ಕರಿ, ಮದನ ಕುಡಸ್ಕರ, ಮಹೇಶ ಗುರವ, ಮಹಾದೇವ ಬಸ್ರಿಕಟ್ಟಿ, ಶ್ರವಣ್ ಕುಮಾರ್ ಹೆಗ್ಡೆ, ಅಷ್ಟವಿನಾಯಕ ಗಣೇಶ ಮಂಡಲದ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು