ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹುಚ್ಚಾಟಕ್ಕೆ ಬ್ರೇಕ್
ಪಾಕ್ ಅಧ್ಯಕ್ಷರು ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜನೆ ಮಾಡಿದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ್ ಡಿ-ನೋಟಿಫೈ ಮಾಡಿದ್ದಾರೆ.
ಪಾಕಿಸ್ತಾನದ ಸಂವಿಧಾನದ 224 ನೇ ವಿಧಿಯ ಅಡಿಯಲ್ಲಿ, ಅವರು ಹಂಗಾಮಿ ಪ್ರಧಾನಿಯನ್ನು ನೇಮಿಸುವವರೆಗೆ 15 ದಿನಗಳವರೆಗೆ ಇಮ್ರಾನ್ ಖಾನ್ಪ್ರಧಾನಿಯಾಗಿ ಮುಂದುವರಿಯಬಹುದು ಎಂದು ತಿಳಿದುಬಂದಿದೆ.
ಇಮ್ರಾನ್ ಖಾನ್ ನಿಯಾಜಿ ಇನ್ನು ಮುಂದೆ ಪಾಕಿಸ್ತಾನದ ಪ್ರಧಾನಿ ಅಲ್ಲ ಎಂದು ಪಾಕಿಸ್ತಾನ ಸರ್ಕಾರದ ಅಧಿಕೃತ ಅಧಿಸೂಚನೆಯನ್ನು ನಿನ್ನೆ ಘೋಷಿಸಿತ್ತು . ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಉಚ್ಛಾಟಿತ ಪಿಟಿಐ ಮತ್ತು ವಿರೋಧ ಪಕ್ಷಗಳೆರಡೂ ಪಟ್ಟು ಬಿಡುತ್ತಿಲ್ಲ.