Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮೆರವಣಿಗೆಗೆ : ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ

localview news

ಬೆಳಗಾವಿ : ಕಿಣಿಯೆ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಆನಗೋಳ ಗ್ರಾಮದಿಂದ ಆರಂಭವಾದ ಮೆರವಣಿಗೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶನಿವಾರ ಚಾಲನೆ ನೀಡಿದರು.

ಕಿಣಿಯೆ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಸಲುವಾಗಿ ಅನಗೊಳ ಗ್ರಾಮದದಿಂದ ಕಿಣಿಯೆ ಗ್ರಾಮದವರೆಗೆ ಎರಡು ದಿನಗಳ ಕಾಲ ಮೆರವಣಿಗೆ ಜರುಗಲಿದ್ದು, ಮೇ 2ರಂದು ಪ್ರತಿಷ್ಠಾಪನೆಗೊಳ್ಳಲಿದೆ.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜ ಪಾಟೀಲ, ಯುವರಾಜಣ್ಣ ಕದಂ, ಮಾರುತಿ ಡುಕರೆ, ಮಹೇಶ ಡುಕರೆ, ನಾಮದೇವ ಡುಕರೆ,ಸಂತೋಷ ಪಾಟೀಲ, ಅನಿಲ ಪಾಟೀಲ, ರಾಮನಿಂಗ ದಳವಿ, ಸಾತೇರಿ ಹಾಗೂ ಗ್ರಾಮಸ್ಥರು, ಶಿವಾಜಿ ಮಹಾರಾಜರ ಭಕ್ತಾಧಿಗಳು ಹಾಗೂ ಮುಂತಾದವರು ಉಪಸ್ಥಿತರಿದ್ದರು.