Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಹವ್ಯಕ ಮಂಡಳ ಸರ್ವಸಾಧಾರಣ ಸಭೆ: ನೂತನ ಕಾರ್ಯಕಾರಿ ಸಮಿತಿ ರಚನೆ

localview news

ಬೆಳಗಾವಿ : ಇಲ್ಲಿಯ ಹವ್ಯಕ ಮಂಡಳದ ವಾರ್ಷಿಕ ಸರ್ವಸಾಧಾರಣ ಸಭೆ ಭಾನುವಾರ ಶ್ರೀಕೃಷ್ಣ ದೇವರಾಯ ವೃತ್ತದ ಗೀತ-ಗಂಗಾ ಕಟ್ಟಡದಲ್ಲಿ ನಡೆಯಿತು.

ನಿವೃತ್ತ ಪ್ರಾಚಾರ್ಯ ಪ್ರೊ.ಎಂ.ಐ.ಹೆಗಡೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಪರಮೇಶ್ವರ ಹೆಗಡೆ, ಸುಬ್ರಹ್ಮಣ್ಯ ಭಟ್, ದತ್ತಾತ್ರಯ ಭಟ್, ಪೂರ್ಣಿಮಾ ಹೆಗಡೆ, ವಿದ್ಯಾವತಿ ಹೆಗಡೆ, ಸರಸ್ವತಿ ಹೆಗಡೆ, ಸೀತಾರಾಮ ಭಾಗ್ವತ, ಬಾಲಕೃಷ್ಣ ಬರವಣಿ, ವಿಭಾ ಕಟ್ಟಿಗೆ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು.

ಸಂಘದ ಚಟುವಟಿಕೆಯನ್ನು ಇನ್ನಷ್ಟು ವಿಸ್ತರಿಸಬೇಕು ಎನ್ನುವ ತೀರ್ಮಾನವನ್ನು ಕೈಗೊಳ್ಳಲಾಯಿತು. ಸಂಘದ ವಾರ್ಷಿಕ ವರದಿಯನ್ನು ನಿಕಟಪೂರ್ವ ಕಾರ್ಯದರ್ಶಿ ಎನ್.ಎಂ.ಶಾಂತಾರಾಮ ಮಂಡಿಸಿದರು. ವಿ.ಎನ್.ಹೆಗಡೆ ವೇದಿಕೆಯಲ್ಲಿದ್ದರು. ಪರಮೇಶ್ವರ ಹೆಗಡೆ, ಶ್ರೀಧರ ಗುಮ್ಮಾನಿ ಮೊದಲಾದವರು ಮಾತನಾಡಿದರು.

ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ಮಹಿಳೆಯರು ಶ್ರೀರಾಮ ರಕ್ಷಾ ಸ್ತ್ರೋತ್ರ ಪ್ರಸ್ತುತಪಡಿಸಿದರು.