Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ನಗರದಲ್ಲಿ ಇರುವ ನಿರಾಶ್ರಿತ ವ್ಯಕ್ತಿಯ ಸೇವೆ ಮಾಡಿದ ಸಮಾಜ ಸೇವಕರು.

localview news

ಬೆಳಗಾವಿ: ಇತ್ತಿಚಿನ ದಿನಗಳಲ್ಲಿ ಬೆಳಗಾವಿಯಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ವಿವಿಧ ಸಂಘಟನೆಗಳಿಂದ ಅವರನ್ನ ನಿರಾಶ್ರಿತರ ವಸತಿ ಗೃಹಕ್ಕೆ ಸ್ಥಾಳಾಂತರ ಮಾಡುತ್ತಾ ಬಂದಿದ್ದವು ಆದರೆ ಇವತ್ತು ಒಬ್ಬ ನಿರಾಶ್ರಿತ ವ್ಯಕ್ತಿಯನ್ನ ಕೂಡಾ ಸ್ವಚ್ಚಗೊಳಿಸಿ ಆರೋಗ್ಯ ವಿಚಾರಿಸಿ ವಸತಿ ಆಶ್ರಯಕ್ಕೆ ಬಿಡಲಾಯಿತು.

ಬೆಳಗಾವಿ ಸುತಗಟ್ಟಿ ಕ್ರಾಸನ ರಾಷ್ಟ್ರೀಯ ಹೆದ್ದಾರಿ ಬಳಿ ವಾಸವಾಗಿದ್ದ ನಿರಾಶ್ರಿತ ವ್ಯಕ್ತಿಯನ್ನ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್ ಮತ್ತು ಪೃಥ್ವಿ ಸಿಂಗ್ ಫೌಂಡೇಶನ್ ಹಾಗೂ ಒನ್ ಟಚ್ ಫೌಂಡೇಶನ್ ಮತ್ತು ಬೆಳಗಾವಿ ಪೊಲೀಸ್ ಡಿಸಿಪಿ ಅವರ ನೇತೃತ್ವದಲ್ಲಿ ನಿರಾಶ್ರಿತ ವ್ಯಕ್ತಿಗೆ ಸಹಾಯ ಮಾಡಿದ ಸಮಾಜ ಸೇವಕರು.

ಬೆಳಗಾವಿ ತಾಲೂಕಿನ ರಾಮ್ ಧಾಬಾ ರಾಷ್ಟ್ರೀಯ ಹೆದ್ದಾರಿ ಬಳಿ ನಿರಾಶ್ರಿತ ವ್ಯಕ್ತಿ ಇದ್ದು ಆ ವ್ಯಕ್ತಿ 2 ತಿಂಗಳಿನಿಂದ ಸರಿಯಾಗಿ ಆಹಾರ ಮತ್ತು ನೀರಿಲ್ಲದೆ ಗುಡ್ಡದ ಬಳಿ ವಾಸವಾಗಿದ್ದನು ತಕ್ಷಣ ಆ ವ್ಯಕ್ತಿಯನ್ನ ಗಮನಿಸಿದ ಪೃಥ್ವಿ ಸಿಂಗ್ ಪೌಂಡೇಶನ ಸಂಸ್ಥಾಪಕ ಪೃಥ್ವಿ ಸಿಂಗ್ ಅವರು ಆ ವ್ಯಕ್ತಿಯನ್ನ ಸ್ವಚ್ಛಗೊಳಿಸುವ ಮೂಲಕ ಆತನಿಗೆ ಆಹಾರ ಕೊಡಿಸಿ ನಂತರ ಆ ವ್ಯಕ್ತಿಯನ್ನ ಅಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತು.

ಸಹಾಯ ಮತ್ತು ಬೆಂಬಲ ನೀಡಿದ DCP ರವೀಂದ್ರ ಗಡಾದಿ ಮತ್ತು ಕಾಕತಿ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಧನ್ಯವಾದಗಳನ್ನ ತಿಳಿಸಿದ ಸಮಾಜ ಸೇವಕರು

ಈ ಸಂದರ್ಭದಲ್ಲಿ ಪೃಥ್ವಿ ಸಿಂಗ್ ಫೌಂಡೇಶನ್‌ನ ಮುಖ್ಯಸ್ಥ ಪೃಥ್ವಿ ಸಿಂಗ್ ,ಜಸ್ವೀರ್ ಸಿಂಗ್, ಫೇಸ್‌ಬುಕ್ ಸ್ನೇಹಿತರ ವಲಯದ ಮುಖ್ಯಸ್ಥ ಸಂತೋಷ್ ದಾರೆಕರ್,ಒನ್ ಟಚ್ ಫೌಂಡೇಶನ್‌ನ ಮುಖ್ಯಸ್ಥ ಉಪಸ್ಥಿತರಿದ್ದರು.