ಹೊಸ ಹೆಜ್ಜೆ ಇಟ್ಟ ಆಕಾಶ್ ಬೈಜೂಸ್
ಬೆಳಗಾವಿ: ಆಕಾಶ್ ಬೈಜೂಸ್ ಕರ್ನಾಟಕ ಎಂಜಿನಿಯರಿಂಗ್ ಆಕಾಂಕ್ಷಿಗಳಿಗಾಗಿ ಸಿಇಟಿ + ಜೆಇಇ ಕೋಸ್೯ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಸುದೀರ ಕುಮಾರ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಜೆಇಇ ಮೇನ್ ಗಳಿಗೆ ಪ್ರಾದೇಶಿಕ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಬಯಸುವ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಸೇವೆಗಳಲ್ಲಿ ಮಂಚೂಣಿಯಲ್ಲಿರುವ ಆಕಾಶ್ ಬೈಜೂಸ್ ಕರ್ನಾಟಕದಲ್ಲಿ ಸಿಇಟಿ ಕೋಸ್೯ಗಳನ್ನು ಹೊಸದಾಗಿ ಪರಿಚಯಿಸಿದೆ ಎಂದರು.
ಆಕಾಶ್ ಬೈಜೂಸ್ ರಾಜ್ಯ ಮಂಡಳಿಯ ಬೋಡ್೯ ಪರೀಕ್ಷೆಗಳು ನಡೆದ ಬಳಿಕ ಈ ಕೋಸ್೯ಗಳು ಪ್ರಾರಂಭವಾಗಲಿದೆ. ಏ.18 ರಂದು ಈ ಹೊಸ ಕೋಸ್೯ ಆರಂಭವಾಗಲಿದ್ದು, ಈಗಾಗಲೇ 40 ಜನ ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದಾರೆ ಎಂದರು.