ಬಸವಮಂಟಪ ಸುಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಲಕ್ಷ್ಮಿ ಹೆಬ್ಬಾಳಕರ್
ಬೆಳಗಾವಿ : ಬಾಳೇಕುಂದ್ರಿ(ಖುರ್ದ)ಯ ಬಸವದಳ ಲಿಂಗಾಯತ ಧರ್ಮ ಸೇವಾ ಸಂಘದ ವಿಶ್ವಗುರು ಬಸವ ಮಂಟಪ ಸಮುದಾಯಭವನಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಬಸವಮಂಟಪ ಸಮುದಾಯ ಭವನದ ಕಟ್ಟಡಕ್ಕಾಗಿ 25 ಲಕ್ಷ ರೂ, ಮಂಜೂರಾಗಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಕಲ್ಮಠದ ರಾಜಗುರು ಸಂಸ್ಥಾನದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ಬೆಳಗಾವಿ ಬಸವ ಮಂಟಪದ ಶ್ರೀ ಸದ್ಗುರು ಬಸವಪ್ರಕಾಶ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ನಮಸಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಕರವಿನಕೊಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬಸವದಳ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.