Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮಹಾಲಕ್ಷ್ಮಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

localview news

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶೆಗನಮಟ್ಟಿ ಹಾಗೂ ಚಂದನಹೊಸೂರ ಗ್ರಾಮಗಳ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ‌ ಮಹೋತ್ಸವದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾಗಿಯಾಗಿದ್ದರು.

ಗ್ರಾಮದ ಇಂತಹ ಸಂಭ್ರಮದಲ್ಲಿ ಪಾಲ್ಗೊಳ್ಳುವುದೇ ಖುಷಿಯ ಸಂಗತಿ. ಜಾತ್ರಾ ಮಹೋತ್ಸವ ಶಾಂತಿಯುತವಾಗಿ ನಡೆಯಲಿ.

ದೇವಿಯು ಗ್ರಾಮದ ಜನರಿಗೆ ಆಯುಷ್ಯ, ಆರೋಗ್ಯ ಸೇರಿದಂತೆ ಸಕಲ ಸೌಭಾಗ್ಯಗಳನ್ನು ನೀಡಲಿ. ಕ್ಷೇತ್ರದ ಅಭಿವೃದ್ಧಿ ಮಾಡಲು ತಮಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಹೆಬ್ಬಾಳಕರ್ ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.

ದೇವಸ್ಥಾನ ಟ್ರಸ್ಟ್ ಕಮೀಟಿ ವತಿಯಿಂದ ಶಾಸಕರನ್ನು ಸನ್ಮಾನಿಸಿ, ದೇವಿಯ ಆಶಿರ್ವಾದ ಸದಾ ಶಾಸಕರ ಮೇಲಿರಲಿ ಎಂದು ಹಾರೈಸಲಾಯಿತು.

ಲಕ್ಷ್ಮೀತಾಯಿ ಫೌಂಡೇಷನ್‌ ವತಿಯಿಂದ ಟ್ರಸ್ಟ್ ಕಮೀಟಿಗಳಿಗೆ ದೇಣಿಗೆಯನ್ನು ಅರ್ಪಿಸಲಾಯಿತು.