Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮನುಷ್ಯ ಜನ್ಮ ಸಿಕ್ಕಿದ್ದು ಪುಣ್ಯ, ಸೌಹಾರ್ದತೆಯಿಂದ ಬಾಳೋಣ : ಚನ್ನರಾಜ ಹಟ್ಟಿಹೊಳಿ ಭಾವೈಕ್ಯತೆ ಸಾರಿದ ಇಫ್ತಿಯಾರ್ ಕೂಟ

localview news

ಬೆಳಗಾವಿ : 82 ಲಕ್ಷ ಜೀವ ರಾಶಿಗಳಲ್ಲಿ ಮನುಷ್ಯ ಜನ್ಮ ಸಿಕ್ಕಿರುವುದು ಪುಣ್ಯ. ಅದನ್ನು ಸದುಪಯೋಗಪಡಿಸಿಕೊಳ್ಳೋಣ. ಎಲ್ಲರೂ ಸೌಹಾರ್ದತೆಯಿಂದ ಬಾಳೋಣ ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕರೆ ನೀಡಿದರು.

ಪಂತಬಾಳೆಕುಂದ್ರಿ ಮದರಸಾದಲ್ಲಿ ಭಾನುವಾರ ರಾತ್ರಿ ನಡೆದ ಇಫ್ತಿಯಾರ್ ಕೂಟದಲ್ಲಿ ಅವರು ಸಂದೇಶ ನೀಡುತ್ತಿದ್ದರು. ಜಾತಿ ಯಾವುದೇ ಇದ್ದರೂ ನಾವೆಲ್ಲ ಮನುಷ್ಯರು. ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಬೇಕು. ಸಕಲ ಜೀವರಾಶಿಗಳಲ್ಲಿ ಮೇಲ್ ಸ್ತರದಲ್ಲಿರುವ ಮನುಷ್ಯ ಜನ್ಮವನ್ನು ಸದುಪಯೋಗಪಡಿಸಿಕೊಳ್ಳಬೇಕು. ಜಾತಿ ಜಾತಿ ಮಧ್ಯೆ ವೈಷಮ್ಯ ಹುಟ್ಟುಹಾಕುವುದು ಸರಿಯಲ್ಲ. ಶಾಂತಿ, ಸಹಬಾಳ್ವೆ ಇಂದು ಮುಖ್ಯವಾಗಿದೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.

ಮುತ್ನಾಳದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ನಾವೆಲ್ಲ ಕುಡಿಯುವುದು ಒಂದೇ ನೀರು, ಬದುಕುವುದು ಒಂದೇ ನೆಲದಲ್ಲಿ, ಉಸಿರಾಡುವುದು ಒಂದೇ ಗಾಳಿಯನ್ನು. ಅದಕ್ಕೆ ಬೇರೆ ಬೇರೆ ಭಾಷೆಯಲ್ಲಿ ಬೇರೆ ಬೇರೆ ಹೆಸರಿರಬಹುದು. ನಾವೆಲ್ಲರೂ ಸಹೋದರತ್ವವನ್ನು ಮೈಗೂಡಿಸಿಕೊಂಡು ಬಾಳಬೇಕು. ಎಲ್ಲ ಧರ್ಮಗಳ ಸಂದೇಶವೂ ಅದೇ ಆಗಿದೆ ಎಂದರು.

ನಾಂದೇಡ ಶ್ರೀ ನೀಲಕಂಠ ಲಿಂಗ ಶಿವಾಚಾರ್ಯಸ್ವಾಮಿಗಳು ಸಹ ಭಾವೈಕ್ಯತೆಯ ಸಂದೇಶ ನೀಡಿದರು. ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಗಂಗಣ್ಣ ಕಲ್ಲೂರು ಬಸವರಾಜ ರಾಯಗೋಳ, ಅಬ್ದುಲ್ ಬಾಗವಾನ, ತೌಸಿಫ್ ಪನಿಬಂದ, ಯುನೂಸ್ ಬಾಗವಾನ್, ನೂರ್ ಅಹ್ಮದ್ ಮುಲ್ಲಾ, ಮೀರಾಸಾಬ್ ಮುಲ್ಲಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಮೌಲಾನಾ ಜೈನುಲ್ ಅಬಿದಿನ್ ಸ್ವಾಗತಿಸಿದರು. ಆಸಿಫ್ ಮುಲ್ಲಾ ವಂದಿಸಿದರು.