Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸಂಪುಟ ವಿಸ್ತರ್ಣೆಯಲ್ಲಿ ಎಲ್ಲ ಜಿಲ್ಲೆಗೂ ಪ್ರಾತಿನಿದ್ಯ: ಸಿಎಂ

localview news

ವಿಜಯಪುರ: ಸಚಿವ ಸಂಪುಟ ವಿಸ್ತರಣೆಯಾದಲ್ಲಿ ರಾಜ್ಯದ ಎಲ್ಲಾ ಭಾಗಗಳಿಗೆ ಆದಷ್ಟೂ ಪ್ರಾತಿನಿಧ್ಯ ನೀಡಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಜಯಪುರದ ಕೊಡಗಾನೂರ ಹೆಲಿಪ್ಯಾಡ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರು ಕರೆದಿಲ್ಲ. ದೆಹಲಿಯಲ್ಲಿ ನಿರ್ಣಯವಾದಾಗ ತಿಳಿಸಲಾಗುವುದು ಎಂದರು. ವಿಜಯಪುರದಲ್ಲಿ ಮೂರು ಶಾಸಕರಿದ್ದಾರೆ. ಯಾರಿಗೂ ಪ್ರಾತಿನಿಧ್ಯ ದೊರೆತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಎಲ್ಲಾ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡಬೇಕು ಎಂದಿದೆ. ರಾಜಕೀಯ ಸ್ಥಿತಿಗತಿಯ ಮೇಲೆ ಕೆಲವು ನಿರ್ಣಯಗಳಾಗುತ್ತವೆ ಎಂದರು.