ಮಚ್ಚೆ ಹೆದ್ದಾರಿಯ ಕಾಮಗಾರಿ ಆರಂಭ ಡಿಸಿಗೆ ಮನವಿ ನೀಡಿದ ರೈತರು
ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಗ್ಗಿದೆ. ನಾಲ್ಕನೇ ಅಲೆಯ ಮನ್ಸೂಚನೆಯನ್ನು ಸರಕಾರ ನೀಡಿದ್ದು ಕೋವಿಡ್ ನಿಯಮಾವಳಿಯನ್ನು ಸಾರ್ವಜನಿಕರು ಪಾಲಿಸಬೇಕೆಂದು ಡಿಸಿ ಎಂ.ಜಿ.ಹಿರೇಮಠ ಹೇಳಿದರು.
ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ನಾಲ್ಕನೇ ಅಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಲಸಿಕಾ ಕರಣ ಮಾಡಲಾಗಿದೆ. ಬುಸ್ಟರ್ ಡೋಸ್ ಸಹ ನೀಡಲಾಗುತ್ತಿದೆ. ಸರಕಾರದಿಂದ ಮತ್ತೆ ಯಾವ ನಿಯಮಾವಳಿಗಳು ಬರುತ್ತವೆ. ಆ ರೀತಿ ಜನರು ನಡೆದುಕೊಳ್ಳಬೇಕು ಎಂದರು.
ಕೊರೊನಾಗೆ ಜನರು ಆತಂಕ ಪಡುವ ಅಗತ್ಯ ಇಲ್ಲ. ಮುಂಜಾಗ್ರತಾ ಕ್ರಮ ವಹಿಸಿದರೆ ಸಾಕು. ಗಡಿಭಾಗದಲ್ಲಿ ಚಕ್ ಪೋಸ್ಟ್ ನಿರ್ಮಾಣ ಮಾಡುವುದು ಸರಕಾರದ ಸೂಚನೆ ನೀಡಿದ ಮೇಲೆ. ಯಾರು ಭಯ ಪಡುವ ಅವಶ್ಯಕತೆ ಇಲ್ಲ ಎಂದರು. ಮಚ್ಚೆ ಹಲಗಾ ಹೆದ್ದಾರಿ ಕಾಮಗಾರಿಯ ತಡೆಯಾಜ್ಞೆ ಇದ್ದಾಗಲೂ ಕಾಮಗಾರಿ ಆರಂಭಿಸಿರುವುದಾಗಿ ರೈತರು ಹೇಳಿದ್ದಾರೆ ಅದನ್ನು ಪರಿಶೀಲಿಸಲಾಗುವುದು ಎಂದರು.
ಹಲಗಾ ಮಚ್ಚೆ ಹೆದ್ದಾರಿಯ ಕಾಮಗಾರಿ ಪ್ರಾರಂಭಿಸಲಾಗಿದೆ. ಹಿಂದೆ ಜಿಲ್ಲಾ ಕೋಟ್೯ ನಿಂದ ತಡೆಯಾಜ್ಞೆ ಬಂದಿತ್ತು. ಬಳಿಕ ಧಾರವಾಡ ಹೈಕೋರ್ಟ್ ಗೆ ಮೊರೆ ಹೋದ ಮೇಲೆ 4-2-2022 ರಂದು ಕೆಲಸ ಮಾಡಲು ಅನುಮತಿ ಕೋರಿದ್ದರು.
ಕೆಲಸ ಮಾಡಲು ನಾವು ಯಾವುದೇ ನಿರ್ಬಂಧ ಹಾಕಿಲ್ಲ ಎಂದು ಕೋರ್ಟ ಹೇಳಿದೆ. ಆದರೆ ಮಚ್ಚೆ ರೈತರು ತಡೆಯಾಜ್ಞೆ ತೆರವು ಆಗಿಲ್ಲ. ಮತ್ತೆ ಕಾಮಗಾರಿ ಆರಂಭಿಸಿದ್ದಾರೆ ಎಂದು ಮನವಿ ಕೊಟ್ಟಿದ್ದಾರೆ. ಅದನ್ನು ಪರಿಶೀಲಸಿಲಾಗುವುದು ಎಂದರು