ಚಾಂಗಲೇಶ್ವರಿ ದೇವಿ ಜಾತ್ರಾ ನಿಮಿತ್ಯ ಬೃಹತ್ ಕುಸ್ತಿ ಆಯೋಜನೆಗೆ ಚಾಲನೆ ನೀಡಿದ ಲಖನ್ ಜಾರಕಿಹೊಳಿ.
ಬೆಳಗಾವಿ: ಹಬ್ಬ ಹರಿದಿನಗಳಿಗೆ ಬ್ರೇಕ್ ಹಾಕಿದ್ದ ಕೋರೊನಾ ಮಹಾಮಾರಿಯಿಂದ ಜನರು ಕಂಗೆಟ್ಟು ಹೋಗಿದ್ದರು ಆದರೆ ಇವತ್ತು ಅದೇ ಹಬ್ಬಗಳನ್ನ ಅತೀ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿರುವುದು ಕಂಡು ಬಂದಿದೆ.
ಹೌದು ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಚಾಂಗಲೇಶ್ವರಿ ದೇವಿ ಜಾತ್ರಾ ನಿಮಿತ್ಯ ಬೃಹತ್ ಕುಸ್ತಿ ಆಯೋಜನೆ ಹಿನ್ನಲೆಯಲ್ಲಿ ಎಮ್ಎಲ್ ಸಿ ಲಖನ್ ಜಾರಕಿಹೊಳಿ ಅವರಿಂದ ಬೃಹತ್ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡುವುದರ ಮೂಲಕ ಕುಸ್ತಿ ಪಟುಗಳಿಗೆ ಹುರುದುಂಬಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕುಸ್ತಿ ಪಟುಗಳು ಆಗಮಿಸಿದ್ದರು ಅದ್ದರಿಂದ ಊರಿನ ಗ್ರಾಮಸ್ಥರು ಕೂಡಾ ಸಾಕಷ್ಟು ಸಂಭ್ರಮ ಸಡಗರದ ಜೊತೆಗೆ ಕುಸ್ತಿ ಪಂದ್ಯಾವಳಿ ವೀಕ್ಷಣೆ ಮಾಡಲು ಆಗಮಿಸಿದ್ದರು.
ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ್ ಮುಖ್ಯ ಅತಿಥಿಗಳಾಗಿ ಹಾಗೂ ಊರಿನ ಗ್ರಾಮಸ್ಥರು,ಹಿರಿಯರು ಉಪಸ್ಥಿತರಿದ್ದರು.