Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕೆಪಿಎಸ್ ಸಿ, ಪಿಎಸ್ ಐ ನೇಮಕಾತಿಯಲ್ಲಿ ಭ್ರಷ್ಟಾಚಾರ: ತನಿಖೆಗೆ ಆಪ್ ಆಗ್ರಹ

localview news

ಬೆಳಗಾವಿ: ಕೆಪಿಎಸ್ ಸಿಮತ್ತು ಪಿಎಸ್ ಐ ನೇಮಕಾತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿರುವ ಅಧಿಕಾರಿಗಳು ಹಾಗೂ ಸದಸ್ಯರ ಅಕ್ರಮ ಆಸ್ತಿ ತನಿಖೆ ನಡೆಸುವಂತೆ ಒತ್ತಾಯಿಸಿ ಶುಕ್ರವಾರ ಆಮ್ ಆದ್ಮಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ‌ ಸಲ್ಲಿಸಿದರು.

ಕೆಪಿಎಸ್ ಸಿ ಮತ್ತು ಪಿಎಸ್ಐ ನೇಮಕದಲ್ಲಿ ಭ್ರಷ್ಟಾಚಾರದಿಂದ ನೇಮಕ ಮಾಡಿರುವ ಕುರಿತು ಪ್ರತಿಭಾವಂತರು ಸರಕಾರ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ಪ್ರಾಮಾಣಿಕವಾಗಿ ನೇಮಕ ಮಾಡಬೇಕಿದ್ದ ಕೆಪಿಎಸ್ ಸಿ ಭ್ರಷ್ಟಾಚಾರದ ಕೇಂದ್ರವಾಗಿರುವುದು ದುರಂತದ ಸಂಗತಿ ಎಂದು ಮನವಿಯಲ್ಲಿ ದೂರಿದ್ದಾರೆ.

ಕೆಪಿಎಸ್ ಸಿಯಲ್ಲಿ ಆಡಳಿತಾತ್ಮಕವಾಗಿ ಸುಧಾರಣೆ ಮಾಡಬೇಕು ಅಥವಾ ಕೆಪಿಎಸ್ ಸಿಯನ್ನು ವಜಾಗೊಳಿಸಿ ಹೊಸ ವ್ಯವಸ್ಥೆ ಕಲ್ಪಿಸಬೇಕು. ಕೆಪಿಎಸ್ ಸಿಯಲ್ಲಿನ ಸದಸ್ಯರು ಹಾಗೂ‌ ಮಾಜಿ ಸದಸ್ಯರ ಅಕ್ರಮ ಆಸ್ತಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕೆಪಿಎಸ್ ಸಿಯಲ್ಲಿ ಒಬ್ಬೊಬ್ವ ಸದಸ್ಯರು ಕೋಟ್ಯಂತರ ರೂ. ಭ್ರಷ್ಟಾಚಾರ ನಡೆಸಿರುವ ಅನುಮಾನ‌ ಇದ್ದು, ಇದರ ಬಗ್ಗೆ ಇಲ್ಲಿಯವರೆಗೂ ತನಿಖೆಯಾಗಿಲ್ಲ. ಇದರ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಅಲ್ಲದೆ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಪ್ಲಾಟ್ ಹಂಚಿಕೆಯಲ್ಲಿ ಮ್ಯಾನವಲ್ ಆಕ್ಷನ್ ಮೂಲಕ ಸಾಕಷ್ಟು ಭ್ರಷ್ಟಾಚಾರ ನಡೆಸಿ 91 ಪ್ಲಾಟ್ ಮಾರಾಟ ಮಾಡಿದ್ದಾರೆ. ಇದರ ಬಗ್ಗೆ ಮಾಹಿತಿ ಕೇಳಿದರೆ ಅಧಿಕಾರಿಗಳು ನೀಡುತ್ತಿಲ್ಲ. ಇದರಲ್ಲಿ ದೊಡ್ಡ ಅವ್ಯವಹಾರವಾಗಿದ್ದು ಸರಕಾರ ಇದರ ಬಗ್ಗೆ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಆಪ್ ಉತ್ತರ ವಲಯದ ಉಸ್ತುವಾರಿ ರಾಜಕುಮಾರ ಟೋಪಣ್ಣವರ, ಜಿಲ್ಲಾಧ್ಯಕ್ಷ ವಿಜಯ ಪಾಟೀಲ ಆಪ್ ಮುಖಂಡರಾದ ಶಂಕರ ಪಾಟೀಲ ಸಂಧ್ಯಾ ಧರ್ಮದಾಸ, ಮುಸ್ಕಾನ ಮಿರ್ಚಿವಾಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.