ಅಭಿವೃದ್ಧಿ ಕೆಲಸಗಳ ಮೂಲಕ ಜನರ ಋುಣ ತೀರಿಸುವ ಪ್ರಯತ್ನ ಮಾಡುತ್ತಿದ್ದೇನೆ - ಲಕ್ಷ್ಮಿ ಹೆಬ್ಬಾಳಕರ್
ಮರಡಿ ನಾಗಲಾಪುರ: ಬುಧವಾರ ರಂದು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಮರಡಿ ನಾಗಲಾಪುರ ಗ್ರಾಮದಲ್ಲಿ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವ ಅತ್ಯಂತ ಸಡಗರ, ಸಂಭ್ರಮ, ಹಾಗೂ ವಿಜ್ರಂಭಣೆಯಿಂದ ನಡೆಯಿತು. ಈ ಜಾತ್ರೆಯ ಕಾರ್ಯಕ್ರಮಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನಪ್ರಿಯ ಶಾಸಕೀಯರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮರಡಿ ನಾಗಲಾಪುರ ಗ್ರಾಮದ ಗುರು-ಹಿರಿಯರ ಹಾಗೂ ಗ್ರಾಮಸ್ಥರ ಗೌರವಾದರಗಳನ್ನು ಕಂಡು ನಾನು ಮೂಕವಿಸ್ಮಿತ ಆಗಿದ್ದೇನೆ. ಗ್ರಾಮದ ಜನರು ಮಹಿಳೆಯರಿಗೆ ಕೊಡುವ ಗೌರವನ್ನು ಕಂಡು ನನಗೆ ತುಂಬಾ ಖುಷಿಯಾಯಿತು.
ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಚಿರಋಣಿ ಯಾಗಿರುತ್ತೇನೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಸವತತ್ವದಲ್ಲಿ ನಂಬಿಕೆ ಇಟ್ಟವಳು ನಾನು ನನಗೆ ಯಾವುದೇ ಜಾತಿ ಧರ್ಮದ ಮೇಲೆ ನಂಬಿಕೆ ಇಲ್ಲ. ನನಗೆ ಧರ್ಮ ಒಂದೇ ಅದು ಮನುಷ್ಯ ಧರ್ಮ. ನನಗೆ ಜಾತಿ ಎರಡೇ ಅದು ಹೆಣ್ಣು ಹಾಗೂ ಗಂಡು ಮಾತ್ರ. ಕುಡಿಯುವ ನೀರಿಗೆ, ಬೀಸುವ ಗಾಳಿಗೆ,ಬೆಳಕಿಗೆ, ಯಾವುದೇ ಜಾತಿ ಮತ ಇಲ್ಲ ಅಂದಮೇಲೆ ನಾವು ಯಾಕೆ ಜಾತಿ ಭೇದಭಾವ ಮಾಡಬೇಕು. ನಾವೆಲ್ಲರೂ ಮನುಷ್ಯ ಜಾತಿಯವರು.
ನಾವು ಹುಟ್ಟಿದ್ದು ಸಮಾಜಸೇವೆ ಮಾಡಲು ಇನ್ನೊಬ್ಬರಿಗೆ ಒಳಿತನ್ನು ಮಾಡಲು ಎಂದು ಮಾರ್ಮಿಕವಾಗಿ ಹೇಳಿದರು. ಶ್ರೀ ಗ್ರಾಮದೇವಿ ಜಾತ್ರೆಯಲ್ಲಿ ಪಾಲ್ಗೊಂಡು ಗ್ರಾಮಸ್ಥರ ಸನ್ಮಾನ ಸ್ವೀಕರಿಸಿದರು. ಗ್ರಾಮದ ಜಗನ್ಮಾತೆ ಶ್ರೀ ಅಕ್ಕನಾಗಲಾಂಬಿಕೆ ದೇವಸ್ಥಾನ, ಶ್ರೀ ಗ್ರಾಮದೇವಿ (ದ್ಯಾಮವ್ವನ) ದೇವಸ್ಥಾನ ಹಾಗೂ ಶ್ರೀ ಬೀರಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರುಗಳ ದರ್ಶನ ಆಶೀರ್ವಾದ ಪಡೆದರು.
ಶ್ರೀ ಗ್ರಾಮದೇವಿ ಜಾತ್ರೆ ಇಂದು ಗ್ರಾಮದಲ್ಲಿ ಸಕಲ ವಾದ್ಯ ಮೇಳದೊಂದಿಗೆ ಹಾಗೂ ಮುತ್ತೈದೆಯರ ಆರತಿಗಳೊಂದಿಗೆ ಶ್ರೀ ಗ್ರಾಮದೇವಿ (ದ್ಯಾಮವನ) ಪಲ್ಲಕ್ಕಿ, ಶ್ರೀ ರುದ್ರಸ್ವಾಮಿ ಪಲ್ಲಕ್ಕಿ ಹಾಗೂ ಶ್ರೀ ಬಸವೇಶ್ವರ ಪಲ್ಲಕ್ಕಿ ಉತ್ಸವಗಳು ಅತ್ಯಂತ ವಿಜೃಂಭಣೆಯಿಂದ ವೈಭವೋಪೇತವಾಗಿ ಗ್ರಾಮದಲ್ಲಿ ಜರುಗಿದವು. ಈ ಕಾರ್ಯಕ್ರಮಕ್ಕೆ ಸಹಸ್ರಾರು ಜನರು ಪಾಲ್ಗೊಂಡು ದೇವರ ದರ್ಶನ ಆಶೀರ್ವಾದ ಪಡೆದು ಶ್ರೀ ಗ್ರಾಮ ದೇವಿ ಕೃಪೆಗೆ ಪಾತ್ರರಾದರು.
ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಮುಗಿಸಿಕೊಂಡು ಶ್ರೀ ಗ್ರಾಮ ದೇವಿ ದೇವಸ್ಥಾನಕ್ಕೆ ಗ್ರಾಮದ ಎಲ್ಲ ಭಕ್ತಾದಿಗಳು ಬಂದು ಸಾವಿರಕ್ಕೂ ಅಧಿಕ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.ನಂತರ ಮಹಾಪ್ರಸಾದ ನೆರವೇರಿತು. ಈ ಕಾರ್ಯಕ್ರಮಕ್ಕೆ ಊರಿನ ಎಲ್ಲ ಗುರು ಹಿರಿಯರು, ಗ್ರಾಮಸ್ಥರು, ಮಹಿಳೆ ಮಕ್ಕಳಾದಿಯಾಗಿ ಪ್ರತಿಯೊಬ್ಬರೂ ಪಾಲ್ಗೊಂಡಿದ್ದರು.
ವರದಿ: ಬಾಬು ಎo ಚಂದರಗಿ