ತವರು ಜಿಲ್ಲೆಯ ಜನರ ಪ್ರೀತಿ ಗಳಿಸಿದ ಡಿಸಿ ಹಿರೇಮಠ ವರ್ಗಾವಣೆ
ಬೆಳಗಾವಿ: ಕಳೆದ ಎರಡೂವರೆ ವರ್ಷಗಳಿಂದ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಂ.ಜಿ.ಹಿರೇಮಠ ಅವರಿಗೆ ಕೆಆರ್ ಡಿಎಲ್ಗೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಪಾಟೀಲ ಇಂದೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ತವರು ಜಿಲ್ಲೆ ಬೆಳಗಾವಿಗೆ ಜಿಲ್ಲಾಧಿಕಾರಿಯಾಗಿ ಬಂದ ಎಂ.ಜಿ.ಹಿರೇಮಠ ಸರಕಾರದ ಸೌಲಭ್ಯವನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.
ಇಡೀ ವಿಶ್ವವನ್ನೇ ಕಾಡಿದ್ದ ಕೊರೊನಾ ಆರ್ಭಟದ ನಡುವೆ ಗಡಿ ಭಾಗದ ಚಕ್ ಫೋಸ್ಟ್ ಗಳಿಗೆ ತೆರಳಿ ಹೊರ ರಾಜ್ಯದವರ ಮೇಲೆ ನಿಗಾ ವಹಿಸಿಲು ನಿರಂತರ ಶ್ರಮಿಸಿದರು. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಎಂಬ ಸರಕಾರದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಪಾಲಿಸಿ ಸರಕಾರಕ್ಕೆ ಹೆಸರು ತಂದು ಕೊಟ್ಟರು.
ಅವರ ಎರಡೂ ವರೆ ವರ್ಷದ ಅಧಿಕಾರದಲ್ಲಿ ಬೆಳಗಾವಿಯವರೆ ಆಗಿದ್ದ ಹಿರೇಮಠ ತವರು ಜಿಲ್ಲೆಗೆ ಸಾಕಷ್ಟು ಸರಕಾರದ ಕೆಲಸ ಜನರ ಮನೆಯ ಬಾಗಿಲಿಗೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಹಿರೇಮಠ ಅವರ ಜಾಗೆಗೆ ಧಾರವಾಡದ ಜಿಲ್ಲಾಧಿಕಾರಿಯಾಗಿದ್ದ ನಿತೀಶ್ ಪಾಟೀಲ ಇಂದೇ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.