Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕಸಾಪ ನಾಡು ಕಟ್ಟುವಲ್ಲಿ ಪ್ರಮುಖ ಕೆಲಸ ಮಾಡಿದೆ: ಮಹಾದೇವ

localview news

ಮೂಡಲಗಿ: ‘ಕನ್ನಡ ಸಾಹಿತ್ಯ ಪರಿಷತ್‌ವು ಕನ್ನಡ ಭಾಷಿಕ ಹಾಗೂ ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಮೂಲಕ ಕನ್ನಡ ನಾಡು ಕಟ್ಟುವಲ್ಲಿ ಪ್ರಮುಖ ಕಾರ್ಯಮಾಡಿದೆ’ಎಂದು ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ಹೇಳಿದರು.

ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ಏಕೀಕರಣದ ಹೋರಾಟಕ್ಕೆ ಸಾಹಿತ್ಯ ಪರಿಷತ್‌ವು ಪ್ರೇರಣಾ ಶಕ್ತಿಯಾಗಿ ಕಾರ್ಯಮಾಡಿತ್ತು ಎಂದರು.

ಸಾಹಿತಿ ಬಾಲಶೇಖರ ಬಂದಿ ‘ಕನ್ನಡ ಮನಸ್ಸುಗಳು ಮೇಲೆ ಕನ್ನಡ ಸಾಹಿತ್ಯ ಪರಿಷತ್ತ ಬೀರಿದ ಪ್ರಭಾವ’ ಕುರಿಗು ಉಪನ್ಯಾಸ ನೀಡಿದ ಅವರು ನಾಲ್ವಡಿ ಕೃಷ್ಣರಾಜ ಒಡೆಯರ ಹಾಗೂ ಎಂ. ವಿಶ್ವೇಶ್ವರಯ್ಯ ಅವರ ಪ್ರೇರಣೆಯಿಂದ ಕನ್ನಡ ಸಾಹಿತ್ಯ ಪರಿಷತ್‌ವು ೧೯೧೫ರಲ್ಲಿ ಹುಟ್ಟಿಕೊಂಡು ಇಲ್ಲಿಯವರೆಗೆ ಕನ್ನಡ ಮನಸ್ಸುಗಳನ್ನು ಜಾಗೃತಿಗೊಳಿಸುವ ಮತ್ತು ಸಂಗಮಿಸುವ ಕಾರ್ಯವನ್ನು ಮಾಡುತ್ತಲಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ವು ಸಾಹಿತ್ಯ ಸಮ್ಮೇಳನ, ದತ್ತಿನಿಧಿ, ಸಾಹಿತ್ಯ ಪರೀಕ್ಷೆ, ೧೮೦೦ ಶೀರ್ಷೆðಕೆಯಷ್ಟು ಗ್ರಂಥಗಳ ಪ್ರಕಟಣೆ, ಜಿಲ್ಲಾ, ತಾಲ್ಲೂಕು ಘಟಕಗಳ ಸ್ಥಾಪನೆ, ಕನ್ನಡ ನುಡಿ ಪತ್ರಿಕೆ ಹಾಗೂ ೪ ಲಕ್ಷದಷ್ಟು ಸದಸ್ಯರನ್ನು ನೊಂದಾಯಿಸಿಕೊಳ್ಳುವುದರ ಮೂಲಕ ಪರಿಷತ್‌ವು ಸದೃಢವಾಗಿ ಕನ್ನಡ ಸೇವೆಗಾಗಿ, ಕನ್ನಡ ಮನಸ್ಸು ಬೆಸೆಯುವ ಕೈಂಕರ್ಯವನ್ನು ವಿಶ್ವದಾದ್ಯಂತ ಮಾಡುತ್ತಲಿದೆ ಎಂದು ಬಾಲಶೇಖರ ಬಂದಿ ಪರಿಷತ್‌ದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು.

ಕನ್ನಡ ನಾಡಿನ ಪ್ರತಿಯೊಬ್ಬರು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ರಕ್ಷಣೆಗೆ ಬದ್ಧರಾಗಬೇಕು ಎಂದರು. ಕವಿಗೋಷ್ಠಿ ಅಧ್ಯಕ್ಷತೆವಹಿಸಿದ್ದ ಪ್ರೊ. ಬಿ.ಸಿ. ಹೆಬ್ಬಾಳ, ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ರಾಮ್ ದ್ಯಾಗಾನಟ್ಟಿ ಮಾತನಾಡಿದರು. ಅಧ್ಯಕ್ಷತೆವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಶಾನೂರಕುಮಾರ ಗಾಣಿಗೇರ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್‌ವು ಕನ್ನಡ ಸಾಹಿತ್ಯ, ಸಂಸ್ಕೃತಿ ಬೆಳೆಸುವಲ್ಲಿ ಮಾಡುತ್ತಿರುವ ಕಾರ್ಯವು ಶ್ಲಾಘನೀಯವಾಗಿದೆ.

ಪರಿಷತ್‌ದ ಎಲ್ಲ ಕಾರ್ಯಚಟುವಟಿಕೆಗಳಿಗೆ ಮಹಾವಿದ್ಯಾಲಯವು ನಿರಂತರ ಸಹಕಾರ ನೀಡುತ್ತದೆ ಎಂದರು. ಕಸಪಾ ಕಾರ್ಯದರ್ಶಿ ಅಣ್ಣಪ್ಪ ಒಂಟಗೋಡಿ, ಬಿ.ಆರ್. ತಕರಾರ, ಕೋಶಾಧ್ಯಕ್ಷ ಬಿ.ವೈ. ಶಿವಾಪುರ, ಚಿದಾನಂದ ಹೂಗಾರ, ಶಾಂತಾ ಜಿನಗಿ, ಸಂತೋಷ ಪಾಟೀಲ, ಮಹಾವೀರ ಸಲ್ಲಾಗೋಳ ಇದ್ದರು. ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಪ್ರಾಸ್ತಾವಿಕ ಮಾತನಾಡಿದರು, ಸುರೇಸ ಕೋಪರ್ಡೆ ಸ್ವಾಗತಿಸಿದರು, ಡಾ. ಮಹಾದೇವ ಪೋತರಾಜ ನಿರೂಪಿಸಿದರು.