Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಅಧಿಕಾರದ ದಾಹಕ್ಕಿಂತ, ಅಭಿವೃದ್ಧಿಯ ದಾಹವಿದ್ದರೆ ಸಮಾಜ ಉನ್ನತ ಮಟ್ಟಕ್ಕೆ - ಲಕ್ಷ್ಮಿ ಹೆಬ್ಬಾಳಕರ್

localview news

ಚಿಕ್ಕೋಡಿ: ರಾಜಕಾರಣಿಗಳಿಗೆ ಅಧಿಕಾರದ ದಾಹಕ್ಕಿಂತ, ಅಭಿವೃದ್ಧಿಯ ದಾಹವಿದ್ದರೆ ನಮ್ಮ ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು. ನಾವು ರಾಜಕಾರಣಿಗಳು ಕೇವಲ ಅಧಿಕಾರದ ಆಸೆಗೆ ಮಾತ್ರ ಸೀಮಿತವಾಗದೇ ನಾಡು, ನುಡಿ, ನಮ್ಮ ಸಂಸ್ಕ್ರತಿಗಳ ಬಗ್ಗೆ ತಿಳಿದುಕೊಂಡು ಮುನ್ನಡೆಯಬೇಕು ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯಪಟ್ಟರು.

ಚಿಕ್ಕೋಡಿ ತಾಲೂಕಿನ ನಾಗರಾಳಕೋಡಿ - ನಾಗರಮುನ್ನೋಳಿಯ ಶ್ರೀ ಗುತ್ಯೆಪ್ಪ ದೇವರ ಜಾತ್ರಾ ಮಹೋತ್ಸವಕ್ಕೆ ಗುರುವಾರ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಅಧಿಕಾರ ಶಾಶ್ವತವಲ್ಲ. ಮಾಡುವ ಕಾರ್ಯಗಳು ಶಾಶ್ವತವಾಗಬೇಕು. ಯಾವುದೇ ಅಹಂಕಾರವನ್ನು ಬೆಳೆಸಿಕೊಳ್ಳದೇ ಸ್ವಯಂ ಪ್ರೇರಿತರಾಗಿ ಸಾಮಾಜಿಕ, ಧಾರ್ಮಿಕ ಹಾಗೂ ಇನ್ನಿತರ ಅಭಿವೃದ್ಧಿಯ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಆತ್ಮತೃಪ್ತಿ ಲಭಿಸುತ್ತದೆ ಎಂದರು.

ರಾಯಬಾಗ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳ್ಳಿ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದರು.

ಈ ಭಾಗದ ಜನರು ಹೃದಯವಂತರು. ಇಲ್ಲಿನ ಜನರು ಮಾತು ಕೊಟ್ಟರೆ ಅವರು ಅದನ್ನು ತಪ್ಪದೆ ನಡೆಸಿಕೊಡುತ್ತಾರೆ ಎಂಬ ನಂಬಿಕೆ ಇದೆ. ನನ್ನ ಸಹೋದರನಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ, ಅಧಿಕ ಮತಗಳನ್ನು ನೀಡಿ ಈ ಜಿಲ್ಲೆಯ ಜನರು ಆರ್ಶಿವಾದ ಮಾಡಿದ್ದಾರೆ. ಈ ಭಾಗದ ಜನರ ಸೇವೆಯನ್ನು ಮಾಡಲು ಪ್ರಾಮಾಣಿಕವಾದ ಪ್ರಯತ್ನಮಾಡಲಾಗುವುದು ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ಚಿಂಚಣಿ ಸಿದ್ದಸಂಸ್ಥಾನ ಮಠದ ಶ್ರೀ ಅಲ್ಲಮಪ್ರಭು ಸ್ವಾಮಿಜಿ ಮಾತನಾಡಿ, ಹಾಲುಮತದ ಸಮಾಜ ಬಾಂಧವರಲ್ಲಿ ಅಭಿಮಾನ ಉಕ್ಕುತ್ತಿದೆ ಎಂದರು. ಲಕ್ಷ್ಮೀ ಹೆಬ್ಬಾಳಕರ ಅವರು ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಲು ಹೋರಾಟ ನಡೆಸಬೇಕು ಎಂದು ಆಗ್ರಹಿಸಿದರು.

ಗಡಿ ಪ್ರದೇಶದಲ್ಲಿ ಹಾಲುಮತ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶ್ರದ್ದಾ ಭಕ್ತಿಯನ್ನು ಹಾಲುಮತದ ಸಮಾಜದವರು ಹೊಂದಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿದ್ದಪ್ಪಾ ಮರ್ಯಾಯಿ ಮಾತನಾಡಿ ನಾಗರಮುನ್ನೋಳ್ಳಿ ಗ್ರಾಮದಲ್ಲಿ ಕುಸ್ತಿ ಮೈದಾನ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ನಾಗರಮುನ್ನೋಳ್ಳಿ ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ,ಭೂ ನ್ಯಾಯ ಮಂಡಳಿ ಸದಸ್ಯ ದಾನಪ್ಪಾ ಕೋಟಬಾಗಿ, ಡಾ. ಎಮ್ ಬಿ ಕುಂಬಾರ, ರಾಜು ಪಾಟೀಲ ಧೂಳಗೌಡ ಪಾಟೀಲ,ಮಲ್ಲಪ್ಪಾ ಟೋನಪೆ,ರಾಜು ಕೋಟಗಿ,ಶಂಕರ ನೇರ್ಲಿ,ಎಂ.ಕೆ.ಪೂಜಾರಿ,ಅನೀಲ ಈಟಿ,ಶಿವು ಮರ್ಯಾಯಿ,ಲಕ್ಷ್ಮೀಸಾಗರ ಈಟಿ,ಬೀರಪ್ಪಾ ನಾಗರಾಳೆ ಉಪಸ್ಥಿತರಿದ್ದರು.