Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಅಬೇಧದಿಂದ ಜಿಲ್ಲೆ ಗೆದ್ದ ಡಿ.ಸಿ. ಎಮ್.ಜಿ.ಹಿರೇಮಠ. ಕುಮಾರಸ್ವಾಮಿ ಬಡಾವಣೆಯ ಸನ್ಮಾನ ಕಾರ್ಯಕ್ರಮದಲ್ಲಿ ಹುಕ್ಕೇರಿ ಶ್ರೀ ಅಭಿಮತ

localview news

ಬೆಳಗಾವಿ: ಅತ್ಯಂತ ಕಡಿಮೆ ಅವಧಿಯಲ್ಲಿ ಮಾಡಿದ ಕೆಲಸದಿಂದ ಬೃಹತ್ ಜಿಲ್ಲೆ ಜನಮನ ಗೆದ್ದು ಜನಮಾನಸದಲ್ಲಿ ಶಾಶ್ವತ ಬೆರೆತವರು ಎಮ್.ಜಿ.ಹಿರೇಮಠರು. ಆಡಳಿತದ ಅಬೇಧದಿಂದ ಎಲ್ಲರ ಮನ ಗೆದ್ದ ಡಿ.ಸಿ.ಇವರು ಎಂದು ಹುಕ್ಕೇರಿ ಹಿರೇಮಠ ದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಅವರು ಶನಿವಾರ ಸಂಜೆ ನಗರದ ಎಲ್ಲ ಇಲಾಖೆಗಳು, ಕುಮಾರಸ್ವಾಮಿ ಬಡಾವಣೆಯ ರಹವಾಸಿ ಸಂಘ , ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ, ಮತ್ತು ಸ್ನೇಹಿತರಿಂದ ಕುಮಾರ ಸ್ವಾಮಿ ರಾಯಲ್ ಗಾರ್ಡನ್ ನಲ್ಲಿ ಆಯೋಜಿಸಿದ ಡಿ.ಸಿ.ಎಮ್.ಜಿ.ಹಿರೇಮಠ ಅವರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಹಿರೇಮಠ ಅವರು ತಮ್ಮ ಆಡಳಿತ ಚಾತುರ್ಯದಿಂದ ಎಲ್ಲ ಇಲಾಖೆಗಳ ಪ್ರೀತಿ, ಗೆದ್ದು ಕಾರ್ಯ ಸಾಧಿಸಿಕೊಂಡವರು.. ಕಚೇರಿಯಲ್ಲಿ ಎಲ್ಲ ಸಿಬ್ಬಂದಿಗೆ ಹಿರಿಯಣ್ಣನಂತೆ ನಿಂತು ಮನೆಯ ವಾತಾವರಣ ಕಲ್ಪಸಿ ಕೊಟ್ಟವರಲ್ಲದೆ, ಇವರಲ್ಲಿಯ ಸಮಯ ಪ್ರಜ್ಞೆ, ಕಾರ್ಯತತ್ಪರತೆ, ಸಮಾನತೆ, ದೀನ,ದಲಿತರ ಬಗೆಗಿನ ಕಳಕಳಿ ಬಗ್ಗೆ ಹೇಳಲು ನನ್ನಲ್ಲಿ ಪದಗಳಿಲ್ಲ ಎಂದರು.

ಅವರನ್ನು ವರ್ಗವಾದದ್ದಕ್ಕೆ ಗೌರವಿಸಲು ನಾನು ಬಂದಿಲ್ಲ. ಅವರಲ್ಲಿಯ ವಿಶಿಷ್ಟ ಗುಣಗಳಿಗಾಗಿ ನಾನು ಗೌರವಿಸಲು ಬಂದಿದ್ದೇನೆ. ಅಂಥವರಂಥ ಗುಣ ವಿಶೇಷತೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ, ನಾಡು, ನುಡಿ,ದೇಶ ಎಲ್ಲವೂ ಸಂಪನ್ನಗೊಳ್ಳಲು ಸಾಧ್ಯ. ಎಂದರಲ್ಲದೆ, ಎಲ್ಲ ಸಂಘಟನೆ ಗಳ ಪರ ವರ್ಗಗೊಂಡ ಎಮ್.ಜಿ.ಹಿರೇಮಠರನ್ನು ಸನ್ಮಾನಿಸಿದರು. ಸನ್ಮಾನಕ್ಕುತ್ತರವಾಗಿ ಮಾತನಾಡಿದ ಎಮ್.ಜಿ ಹಿರೇಮಠ ಅವರು ಬೆಳಗಾವಿ ನನ್ನ ಮಾತೃ ಜಿಲ್ಲೆಯಾದುದ್ದರಿಂದಾಗಿ ಇಲ್ಲಿಯ ಸೇವೆ ನನಗೆ ಅತೀ ಹೆಚ್ಚು ತೃಪ್ತಿ ತಂದಿದೆ.

ಇಲ್ಲಿಯ ನನ್ನ ಕಲಿತ , ಆಡಿದ, ಅನುಭವಗಳು ನನ್ನಿಂದ ಮಾಸಿಲ್ಲ. ಸ್ನೇಹಿತರೊಂದಿಗಿನ ಸಂಬಂಧಗಳು ಮರೆತಿಲ್ಲ. ನನ್ನ ಇಲ್ಲಿಯ ಸೇವಾವಧಿ ಅತೀ ಹೆಚ್ಚು ಆನಂದ ಕೊಟ್ಟಿದೆ. ಅವಕಾಶ ಕೊಟ್ಟ ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುವೆ. ಆಡಳಿತಕ್ಕೆ ಸಹಕಾರ ಕೊಟ್ಟ ಎಲ್ಲ ಜನಪ್ರತಿನಿಧಿಗಳು, ಮುಖಂಡರುಗಳು,ಶಾಸಕರು, ಸಚಿವರು ಜಿಲ್ಲೆ ಸ್ನೇಹಿತರು, ಸಂಘ, ಸಂಸ್ಥೆಗಳನ್ನು ನನ್ನಿಂದ ಮರೆಯಲಾಗದು.

ಕೋವಿಡ್ ಸಂದರ್ಭದಲ್ಲಿ ಸಹಕರಿಸಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದವರೆಲ್ಲ ನನ್ನ ಸಾಧನೆಗೆ ಮತ್ತಷ್ಟು ಇಂಬು ಕೊಟ್ಟವರೆಂದರಲ್ಲದೆ ಸನ್ಮಾನಿಸಿದ್ದಕ್ಕೆ ಧನ್ಯವಾದ ಹೇಳಿದರಲ್ಲದೆ,. ಸೇವಾವಧಿಯಲ್ಲಿಯ ಅಪರೂಪದ ಅನುಭವಗಳನ್ನು ಹಂಚಿಕೊಂಡರು.

ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಮಾತನಾಡಿ, ಡಿ.ಸಿ ಹಿರೇಮಠ ಅವರು ಮಾಡಿದ ಕೆಲಸದಿಂದಾಗಿ ಮಾನವೀಯ ಗುಣದ ಮಹಾಪುರುಷರು ಎಮ್.ಜಿ.ಹಿರೇಮಠ ಎಂದರಲ್ಲದೆ, ಸೇವಾವಧಿಯಲ್ಲಿಯ ಹಿರೇಮಠ ಅವರ ಸಹಾಯ, ಸಹಕಾರ ಸ್ಮರಿಸಿದರು. ನಗರ ಯೋಜನಾಧಿಕಾರಿ ಬಿ.ವ್ಹಿ.ಹಿರೇಮಠ, ಚಂದ್ರಶೇಖರಯ್ಯಾ ಸವಡಿ, ಪ್ರುಥ್ವಿ ನೀರಲಗಿಮಠ ಎಂಜನೀಯರ್ ಸಂಘದ ಪಿ.ಎಸ್.ಹಿರೇಮಠ ಜಿಲ್ಲಾಧಿಕಾರಿಗಳ ಕುರಿತು ಗುಣಗಾನ ಮಾಡಿ, ಶ್ಲಾಘಿಸಿದರು.

ನಗರದ ಜಂಗಮ ಸಮಾಜ, ಕುಮಾರಸ್ವಾಮಿ ರಹವಾಸಿಗಳ ಸಂಘ, ಸಹಪಾಠಿ ಸಹೃದಯರ ಸಂಘ, ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ, ಡಿ.ಸಿ.ಕಾರ್ಯಾಲಯ ಸಿಬ್ಬಂದಿ ಮತ್ತು ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ ಬೆಳಗಾವಿ ಗಳ ಸಂಘಟನೆಗಳು ಎಮ್.ಜಿ.ಹಿರೇಮಠ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ಪಂಚ ಕಮೀಟಿ ಅಧ್ಯಕ್ಷ, ಅರವಿಂದ ಜೋಶಿ, ಎಂಜನೀಯರ್ ರಾದ ಎಮ್.ವ್ಹಿ.ಹಿರೇಮಠ, ಮುಂತಾದವರಿದ್ದರು.

ಸಮಾರಂಭದಲ್ಲಿ ಎಂಜನೀಯರ್ ರಾದ ಎಸ್.ಸಿ.ನಾಯಕ, ಜಿ.ಎಸ್.ಹಿರೇಮಠ, ರುದ್ರಣ್ಣಾ ಚಂದರಗಿ, ಪಿ.ಐ.ಪಾಟೀಲ, ವನ್ಯಜೀವಿ, ಪರಿಸರ ವೇದಿಕೆಯ ಅಧ್ಯಕ್ಷ, ಸುರೇಶ ಉರಬಿನಹಟ್ಟಿ, ಉಪಾಧ್ಯಕ್ಷ, ಶ್ರೀಶೈಲ ಮಠದ, ಜಗದೀಶ ಮಠದ, ಪ್ರೊ.ಮಾರುತಿ ಕದಮ್, ರವೀಂದ್ರ ಕುಲಕರ್ಣಿ, ಎಸ್.ಜಿ.ಕಲ್ಯಾಣಿ, ಬಸವರಾಜ ಗೌಡಪ್ಪಗೋಳ, ಹುಲಕುಂದ ಸೇರಿದಂತೆ, ಕುಮಾರಸ್ವಾಮಿ ಬಡಾವಣೆಯ ಮಹಿಳೆಯರು, ಹಿರಿಯರು, ಸಂಘಟನೆಗಳ ಸದಸ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.

ಡಿ.ಸಿ.ಎಮ್.ಜಿ.ಹಿರೇಮಠ ಅವರ ಆಪ್ತ ಸ್ನೇಹಿತ, ಬಂಧು ವಿರುಪಾಕ್ಷಯ್ಯಾ ನೀರಲಗಿಮಠ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.