Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸಾವಯುವ ಕೃಷಿಯಿಂದ ಹೆಚ್ಚಿನ ಲಾಭ ಪಡೆಯಬಹುದು ರೈತರಿಗೆ ಮಾದರಿಯಾದ ಮಾವ ಅಳಿಯ

localview news

ರಾಯಬಾಗ: ತಾಲೂಕಿನ ಕಂಕಣವಾಡಿ ಪಟ್ಟಣದ ಮಾರುತಿ ಅರಭಾಂವಿ, ವಿಠ್ಠಲ ಐನಾಪೂರ, ಮಾವ ಅಳಿಯ ಕೆಂಪು ಮಣ್ಣಿನ ಭೂಮಿಯಲ್ಲಿ ಸಾವಯವ ಕೃಷಿಯಿಂದ ಅರಿಶಿನ ಜೋತೆಗೆ ಬೇರೆ ಬೇರೆ ತರಹದ ತರಕಾರಿಗಳು ಮತ್ತು ಕಲ್ಲಂಗಡಿ ಬೆಳೆದು ಹೆಚ್ಚಿನ ಆದಾಯ ಕಾಣುತ್ತಿದ್ದಾರೆ.

ಸಾಂಪ್ರದಾಯಿಕವಾಗಿ ಕಬ್ಬು ಮೆಕ್ಕೆಜೋಳ ಬೆಳೆಯುತ್ತಿದ್ದ ಅವರು ಅದರಿಂದ ಹೆಚ್ಚಿನ ಆದಾಯ ಸಿಗದಿದ್ದರಿಂದ ಪರ್ಯಾಯವಾಗಿ ಸಾವಯವ ಕೃಷಿಯಿಂದ ಟಮಾಟೋ, ಡಬ್ಬುಮೆಣಸು, ಹೀರೆ, ಸೌತೆ, ಕುಡಚಿ ತಳಿ ಎಂಬ ಬದನೆಕಾಯಿ, ಇದರೊಂದಿಗೆ ಕಲ್ಲಂಗಡಿ, ಬೆಳೆದಿದ್ದಾರೆ.

ಸುಮಾರು 10 ವರ್ಷಗಳಿಂದ (5 ರಿಂದ 10) ಗುಂಟೆಯಲ್ಲಿ ತರಕಾರಿ ಬೆಳೆಯುತ್ತ ಬಂದಿದ್ದ ಇವರು 1 ವರ್ಷಗಳ ಹಿಂದೆ (10) ಗುಂಟೆ ಜಮೀನಿನಲ್ಲಿ ಸಾವಯವ ಗೊಬ್ಬರ ಬಳಸಿ ಸುಮಾರು 1100 ಕುಡಚಿ ತಳಿ ಎಂಬ ಬದನೆ ಸಸಿಗಳ ಜೊತೆಗೆ ಅದರಲ್ಲಿ ಸೌತೆ ನೆಟ್ಟಿದ್ದರು. ನಾಟಿ ಮಾಡಿದ ಎರಡು ತಿಂಗಳಿನಲ್ಲಿಯೇ ಬದನೆ ಫಲ ಕೊಡಲು ಆರಂಭಿಸಿತು ಸತತ 4 ತಿಂಗಳ ಕಾಲ ಫಲ ನೀಡಿತು.

ನಂತರ ಅದೇ ಜಮೀನಿನಲ್ಲಿ ಬದನೆ ತೆಗೆದು ಹೀರೇ ಬೀಜ ನೆಟ್ಟರು ನಾಟಿ ಮಾಡಿದ ಒಂದುವರೆ ತಿಂಗಳಲ್ಲಿ ಫಲ ಕೊಡಲಾರಂಭಿಸಿತು ಸತತ 3 ತಿಂಗಳ ವರೆಗೆ ಫಲ ನೀಡಿತು ಒಂದು ವರ್ಷದಲ್ಲಿ ಖರ್ಚು ವೆಚ್ಚ ತೆಗೆದು ಸುಮಾರು 3.50 ಲಕ್ಷ ಆದಾಯ ಬಂತು.

ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ಆದಾಯ ತೆಗೆಯಬೇಕು ಎಂಬ ನಿರೀಕ್ಷೆಯಿಂದ ಒಂದುವರೆ ಎಕರೆ ಭೂಮಿಯಲ್ಲಿ ಡಬ್ಬುಮೆಣಸು, ಹೀರೇ, ಸೌತೆ, ಟಮಾಟೋ, ಮೂಲಂಗಿ, ಕಲ್ಲಂಗಡಿ, ಕುಡಚಿ ತಳಿ ಎಂಬ ಬದನೆ, ವಿವಿಧ ಸೊಪ್ಪುಗಳನ್ನು ಹಾಕಿದ್ದಾರೆ

ಫಲ ಹೇಗೆ:- ಒಂದುವರೆ ಎಕರೆಯಲ್ಲಿ ಗರಿಷ್ಠ 75 ಟನ್ ಕಬ್ಬು ಬೆಳೆಯುತ್ತದೆ ಟನ್ ಒಂದಕ್ಕೆ ₹ 3 ಸಾವಿರ ದರ ನೀಡಿದರೆ ₹2 ಲಕ್ಷ 25 ಸಾವಿರ ಆದಾಯ ಬರುತ್ತದೆ. ಅದರಲ್ಲಿ ಕಬ್ಬು ಬೆಳೆಯಲು ₹ 75 ಸಾವಿರ ಖರ್ಚಾಗುತ್ತದೆ. ಒಂದು ವರ್ಷಕ್ಕೆ ಒಂದುವರೆ ಎಕರೆಯಲ್ಲಿ ₹ 1.50 ಲಕ್ಷ ಆದಾಯಕ್ಕೆ ಸೇರುತ್ತದೆ.

ನಾವು ಬೆಳೆದಿರುವ ಡಬ್ಬುಮೆಣಸು, ಹೀರೇ, ಸೌತೆ, ಟಮಾಟೋ, ಮೂಲಂಗಿ, ಕುಡಚಿ ತಳಿ ಎಂಬ ಬದನೆ, ತರಕಾರಿಗಳು 1/5.2 ನೇ ತಿಂಗಳಿನಿಂದ ಫಲ ಆರಂಭಗೊಂಡು ಸತತ 3.4 ತಿಂಗಳವರೆಗೆ ಫಲ ನೀಡುತ್ತವೆ ಅಂದ್ರೆ 6 ತಿಂಗಳನಲ್ಲಿ ಕನಿಷ್ಠ 4 ರಿಂದ 5.50 ಲಕ್ಷ ಆದಾಯ ಸಿಗುತ್ತದೆ. ವರ್ಷದಲ್ಲಿ ಎರಡು ಬಾರಿ ಸಸಿಗಳನ್ನು ಬಿತ್ತನೆ ಮಾಡಲಾಗುತ್ತದೆ ಒಂದು ವರ್ಷ ಕಬ್ಬು ಬೆಳೆಯುವ ಭೂಮಿಯಲ್ಲಿ ವಿವಿಧ ರೀತಿಯ ತರಕಾರಿ ಮತ್ತು ಸೊಪ್ಪುಗಳನ್ನು ಬೆಳೆಯುತ್ತೇನೆ ಇದರಿಂದ ವರ್ಷಕ್ಕೆ ಖರ್ಚು ವೆಚ್ಚ ಕಳೆದು 8 ರಿಂದ 10 ಲಕ್ಷ ರುಪಾಯಿ ಕೈಸೇರುತ್ತದೆ ಎನ್ನುತ್ತಾರೆ ರೈತ ಮಾರುತಿ ಅರಭಾವಿ

ಅವರು ಹನಿ ನೀರಾವರಿ ಘಟಪ್ರಭಾ ಎಡದಂಡೆ ಕಾಲುವೆಯಿಂದ ಅಲ್ಲಿನ ರೈತರು ಸಾಮೂಹಿಕವಾಗಿ ಏತ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ ಮಾರುತಿ ಅರಭಾವಿ ಕೂಡ ಅದರಿಂದ ನೀರು ಪಡೆಯುತ್ತಿದ್ದಾರೆ ಹೊಲದಲ್ಲಿ (ಬಾವಿ) ಕೊಳವೆ ಬಾವಿಯಿಂದ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ ಅವರ ಅಳಿಯ (ವಿಠ್ಠಲ್ ಐನಾಪುರ್) ಅವರು ಸೋದರಮಾವನ ಹೊಲದಲ್ಲಿ ಒಂದುವರೆ ಎಕರೆಯಲ್ಲಿ ಸಾವಯವ ಗೊಬ್ಬರ ಬಳಸಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆದು ಲಕ್ಷ ಲಕ್ಷ ಆದಾಯ ಪಡೆಯುತ್ತಿದ್ದಾರೆ

ಸಾವಯವ ಗೊಬ್ಬರ ಬಳಸುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು ಮತ್ತು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು ರೈತರು ಹೆಚ್ಚಾಗಿ ಸಾವಯವ ಕೃಷಿಯನ್ನು ಬಳಕೆ ಮಾಡುವುದರಿಂದ ಹೆಚ್ಚಿನ ಆದಾಯ ಪಡೆಯಬಹುದು ಎಂದು ವಿಠ್ಠಲ್ ಐನಾಪುರ್ ಅವರು ಕೆಲವು ರೈತರಿಗೆ ಮಾದರಿಯಾಗಿದ್ದಾರೆ.

ಉತ್ಪನ್ನಗಳನ್ನು ದಲ್ಲಾಳಿಗಳ ಮೂಲಕ ಮಾರುವುದಿಲ್ಲ ಖುದ್ದಾಗಿ ಸುತ್ತಮುತ್ತಲಿನ ಪಟ್ಟಣ ಮತ್ತು ಗ್ರಾಮಗಳ ಸಂತೆಗಳಲ್ಲಿ ಮಾರುತ್ತೇನೆ ಇದರಿಂದ ಹೆಚ್ಚಿನ ಲಾಭ ಸಿಗುತ್ತದೆ ಎಂದು ಕಂಕಣವಾಡಿ ರೈತ ವಿಠ್ಠಲ್ ಐನಾಪುರ್ ಹೇಳಿದರು.