Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಡೆಂಗಿ ಬಗ್ಗೆ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು, ಗ್ರಾಪಂ ಸದಸ್ಯರು

localview news

ಬೆಳಗಾವಿ: ವಿಶ್ವ ಡೆಂಗ್ಯೂ ದಿನಾಚರಣೆಯನ್ನು ಡೆಂಗಿ ತಡೆಗಟ್ಟಬಹುದು, ಬನ್ನೀ ಎಲ್ಲರೂ ಕೈ ಜೋಡಿಸೋಣ ಎಂಬ ಘೋಷಣೆಯೊಂದಿಗೆ ಜಾಥಮಾಡುವ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರ ವಂಟಮುರಿ ಗ್ರಾಮೀಣ ಹಾಗೂ ಕಾಕತಿ ಮತ್ತು ಬಿ ಉಪಕೇಂದ್ರವು ಆಚರಿಸಲಾಯಿತು.

ವಿಶ್ವ ಡೆಂಗಿ ದಿನಾಚರಣೆಯ ಜಾಥಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಕಾಕತಿ ಉಪಾಧ್ಯಕ್ಷೆ ವರ್ಷಾ ಮುಚ್ಚಸಿಕರ ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಾ ಅಭಿನಂದನ ವಾಲಿ ವೈದ್ಯಾಧಿಕಾರಿಗಳು , ಮಂಜುನಾಥ್ ಸಾಂಭ್ರನೆ ಹಿರಿಯ ಆರೋಗ್ಯ ಅಧಿಕಾರಿ, ರವಿ ಗುರವನ್ನವರ್ ಹಿರಿಯ ಆರೋಗ್ಯ ಅಧಿಕಾರಿ, ಸುನಂದಾ ಕೋರಿ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳು, ಲಕ್ಷ್ಮಿ ಅಂಬಿ PHO ಇನ್ನಿತರ ಉಪಸ್ಥಿತರಿದ್ದರು.

ಹಾಗೂ ಜಾತಾ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆ ಕಾಕತಿ ಮಕ್ಕಳು ಮತ್ತು ಸಿಬ್ಬಂದಿ ವರ್ಗದವರು ಓಡಿಸಿ ಓಡಿಸಿ ಡೆಂಗು ಓಡಿಸಿ ಎಂಬ ಘೋಷಣೆಯೊಂದಿಗೆ ಭಾಗವಹಿಸಿದ್ದರು . ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಭೂತ್ತಾರಾಮಟ್ಟಿ ಸಮಾಜಕಾರ್ಯ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ಸಮುದಾಯ ಅಭಿವೃದ್ಧಿ ಪ್ರ ಶಿಕ್ಷಣಾರ್ಥಿಗಳು ಡೆಂಗ್ಯೂ ತಡೆಗಟ್ಟುನೂ ಬನ್ನಿ ಎಂಬ ಘೋಷಣೆಯೊಂದಿಗೆ ಕಾಕತಿ ಗ್ರಾಮದಲ್ಲಿ ಜಾಥಾದಲ್ಲಿ ಭಾಗವಹಿಸಿದ್ದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಡೆಂಗ್ಯೂ ಎಂದರೇನು? ಡೆಂಗ್ಯೂ ನ ಲಕ್ಷಣಗಳು, ಪರಿಣಾಮಗಳು ಮತ್ತು ತಡೆಗಟ್ಟುವ ಕ್ರಮಗಳು ಬಗ್ಗೆ ಮಾಹಿತಿ ನೀಡಿದರು . ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳು ಡೆಂಗ್ಯೂ ಹೇಗೆ ಬರುತ್ತದೆ ಅದನ್ನು ಹೇಗೆ ತಡೆಗಟ್ಟಬೇಕು ಎಂಬುವುದನ್ನು ಸಣ್ಣ ಕಿರುನಾಟಕದ ಮೂಲಕ ಗ್ರಾಮದ ಜನರಿಗೆ ಮತ್ತು ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಿದರು . ಗ್ರಾಮದ ಜನರು ಮತ್ತು ಶಾಲಾ ಮಕ್ಕಳು ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.