Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮರಾಠಾ ಸಮಾಜಕ್ಕೆ ಆಶಾದಾಯಕವಾದ ಕಿರಣ ಜಾಧವ

localview news

ಬೆಳಗಾವಿ: ಕರ್ನಾಟಕದಲ್ಲಿ ಮರಾಠಾ ಸಮಾಜ 70 ಲಕ್ಷ ಜನಸಂಖ್ಯೆ ಇದೆ. ಈ ಸಮಾಜಕ್ಕೆ 2 ಎ ಮೀಸಲಾತಿ ಸಿಗಬೇಕೆಂಬ ನಮ್ಮ ಬೇಡಿಕೆ ಇದೆ. ಸರಕಾರ ಕೂಡಲೇ ಅದನ್ನು ನೀಡಬೇಕೆಂದು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಆಗ್ರಹಿಸಿದರು.

logintomyvoice

ಭಾನುವಾರ ವಡಗಾವಿಯ ಆದರ್ಶ ವಿದ್ಯಾಮಂದಿರದಲ್ಲಿ ಸಕಲ ಮರಾಠಾ ಸಮಾಜ ಬೆಳಗಾವಿ ಸಂಘಟನೆಯ ವತಿಯಿಂದ ಶೋಭಾಯಾತ್ರೆ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಆರ್ಥಿಕವಾಗಿ ಮರಾಠಾ ಸಮಾಜ ಮುಂದೆ ಬರುವ ಅಗತ್ಯ ಇದೆ. ಮರಾಠಾ ಸಮಾಜದಲ್ಲಿರುವ ಸಣ್ಣ, ಸಣ್ಣ ಗುಂಪಿನಲ್ಲಿ ವಿಭಜನೆಯಾಗಿದೆ. ಎಲ್ಲರನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕಿದೆ. ಛತ್ರಪತಿ ಶಿವಾಜಿ ಮಹಾರಾಜರು ಎಲ್ಲ ಜಾತಿಯನ್ನು ಒಗ್ಗೂಡಿಸಿಕೊಂಡು ಹಿಂದವಿ ಸ್ವರಾಜ್ ಸ್ಥಾಪನೆ ಮಾಡಿದ್ದರು. ರಾಜಕೀಯದಲ್ಲಿರುವ ನಮ್ಮ ಸಮುದಾಯದವರಿಗೆ ಸಚಿವ ಸ್ಥಾನ ನೀಡಲು ಒತ್ತಾಯ ಮಾಡಲು ಬಂದಿಲ್ಲ. ನಮ್ಮ ಹಕ್ಕುನ್ನು ಸರಕಾರ ಈಡೇರಿಸಲು ಒತ್ತಾಯಿಸಲು ಬಂದಿದ್ದೇನೆ ಎಂದರು.

logintomyvoice

ಕರ್ನಾಟಕ ಸರಕಾರ ಮರಾಠಾ ನಿಗಮ ಮಂಡಳ ನಿರ್ಮಾಣ ಮಾಡಿ 50 ಕೋಟಿ ಅನುದಾನ ಮಿಸಲಿಟ್ಟಿದೆ. ಆದರೆ ಇದು ಏತಕ್ಕೂ ಸಾಲುತ್ತಿಲ್ಲ. ಇದರ ಬದಲಿಗೆ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

logintomyvoice

ಮರಾಠಾ ಸಮಾಜದ ರೈತ ಮಕ್ಕಳು ಉನ್ನತ ಹುದ್ದೆಗಳಲ್ಲಿ ಕುಳುತು ಸಮಾಜದ ಉದ್ಧಾರಕ್ಕೆ ಶ್ರಮಿಸುವ ಕೆಲಸ ಮಾಡುವಂತಾಗಬೇಕು. ನಿಪ್ಪಾಣಿ, ಕಾಗವಾಡ, ಖಾನಾಪುರ ರೈತರ ಮಕ್ಕಳಿಗಾಗಿ ಪಕ್ಷ,ಜಾತಿ, ಧರ್ಮ ಬದಿಗೊತ್ತಿ ಎಲ್ಲರೂ ಒಗ್ಗೂಡಿಕೊಂಡು ರೈತರ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಎಲ್ಲರ ಕರ್ತವ್ಯ ಇದೆ. ಅಂದಾಗ ಮಾತ್ರ ಮರಾಠಾ ಸಮಾಜದ ಅಭಿವೃದ್ಧಿ ಆಗಬೇಕು ಎಂದು ಕರೆ ನೀಡಿದರು.

logintomyvoice

ಶಾಸಕ ಅನಿಲ್ ಬೆನಕೆ ಮಾತನಾಡಿ, ಸಮಾಜ ಹಾಗೂ ಹಿಂದೂ ರಕ್ಷಣೆಗಾಗಿ ಛತ್ರಪತಿ ಶಿವಾಜಿ ಮಹಾರಾಜರು ಹೋರಾಟ ನಡೆಸಿದರು. ಎಲ್ಲ ಸಮಾಜದ ನೋಡಬೇಕಾದರೆ, ಎಷ್ಟು ಶಿಕ್ಷಣ ಇದೆ ಎಂದು ನೋಡುತ್ತಾರೆ. ನಮಗೆ ಅಭಿಮಾನ ಇದೆ. ಹಿಂದೂ ಸಂಸ್ಕೃತಿ ಉಳಿಯಲು ಮರಾಠಾ ಸಮಾಜದ ಕೊಡುಗೆ ಸಾಕಷ್ಟಿದೆ ಎಂದರು.

logintomyvoice

ಮರಾಠಾ ಸಮಾಜದ ಸ್ವಾಮೀಜಿಗೆ ಗುರುವಂದನಾ ಕಾರ್ಯಕ್ರಮ ಆಯೋಜನೆ ಮಾಡಿ ಬೆಳಗಾವಿ ನಗರದಲ್ಲಿ ಭಾಗವ್ ಧ್ವಜ ಹಾರಾಡುತ್ತಿದೆ. ಇದು ಸಕಲ ಮರಾಠಾ ಸಮಾಜ ಬೆಳಗಾವಿ ಕಾರ್ಯಕ್ಕೆ ಬಿಜೆಪಿ ಪಕ್ಷದಿಂದ ಶುಭಾಶಯ ತಿಳಿಸುತ್ತೇನೆ ಎಂದರು.

ಬಲಮಹಾರಾಷ್ಟ್ರದಲ್ಲಿ ಆಚರಣೆ ಮಾಡುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಬೆಳಗಾವಿಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡುತ್ತಿರುವುದು ಮರಾಠಾ ಸಮಾಜ ಎಂದು ತಿಳಿಸಿದರು.

ಮರಾಠಾ ಸಮಾಜ ಮೀಸಲಾತಿ ಸಿಗಬೇಕಿದೆ. ಈಗ 3ಎ ಇದ್ದು 2 ಎಗೆ ಮೀಸಲಾತಿ ಸಿಗಬೇಕಿದೆ. ಬೆಳಗಾವಿ ನಗರದಲ್ಲಿ ಮರಾಠಾ ಸಮಾಜದ ಸಲುವಾಗಿ ಸರಕಾರ ನೀಡುತ್ತಿರುವ ಅನುದಾನ ಇನ್ನೂ ಹೆಚ್ಚಿಗೆ ನೀಡಬೇಕೆಂದು ಬೆಳಗಾವಿ ಶಾಸಕ ಎಲ್ಲರೂ ಸೇರಿಕೊಂಡು ಮುಖ್ಯಮಂತ್ರಿಗೆ ನಿಯೋಗ ಬೇಟಿಯಾಗಲಿದೆ. ನಮ್ಮ ಸಮಾಜ ಉದ್ದಾರ ಆಗಲು ಸರಕಾರ ನೂರು ಕೋಟಿ ಅನುದಾನ ನೀಡಬೇಕೆಂದು ಈಗಾಗಲೇ ಮುಖ್ಯಮಂತ್ರಿಗೆ ವಿನಂತಿಸಿಕೊಳ್ಳಲಾಗಿದೆ ಎಂದರು.

ಸಕಲ ಮರಾಠಾ ಸಮಾಜ ಬೆಳಗಾವಿ ಮುಖಂಡ ಕಿರಣ ಜಾಧವ ಮಾತನಾಡಿ, ಮರಾಠಾ ಸಮಾಜ ಎಲ್ಲ ಕಡೆ ಇದೆ. ನಮ್ಮ ಸಮಾಜ ಉದ್ಧಾರವಾಗಬೇಕು ಎನ್ನುವ ನಿಟ್ಟಿನಲ್ಲಿ ಸಕಲ ಮರಾಠಾ ಸಮಾಜ ಬೆಳಗಾವಿ ನಿರ್ಮಾಣ ಮಾಡಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ನೆರವಿನಲ್ಲಿ ಬೆಳೆದ ವೀರತ್ವದ ಸಮಾಜ ಮರಾಠಾ ಸಮಾಜವಾಗಿದೆ. ಶತಮಾನಗಳಿಂದಲೂ ಈ ಸಮಾಜ ರಾಷ್ಟ್ರ ಪ್ರೇಮ, ಸ್ವಾಭಿಮಾನ, ಸ್ವಾವಲಂಬನೆ, ತ್ಯಾಗ ಮನೋಭಾವನೆಯಿಂದ ಮುನ್ನಡೆದಿದೆ. ಬೆಳಗಾವಿಯಲ್ಲಿ ಅಷ್ಟೆ ಅಲ್ಲ ಕರ್ನಾಟಕದ ತುಂಬ ಮರಾಠಾ ಸಮುದಾಯ ಚದುರಿಕೊಂಡಿದೆ. ಅದರಂತೆ ಮಹಾರಾಷ್ಟ್ರದಲ್ಲಿಯೂ ಕರ್ನಾಟಕದ ಕನ್ನಡಿಗರು ವ್ಯಾಪ್ತಿಸಿಕೊಂಡಿದ್ದಾರೆ ಎಂದರು.

ಮರಾಠಾ ಸಮಾಜದ ಸಲುವಾಗಿ ಸಕಲ ಮರಾಠಾ ಸಮಾಜ ಬೆಳಗಾವಿ ಮರಾಠಿಗರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಲಿದ್ದಾರೆ. ಮರಾಠಿಗರನ್ನು ಆರ್ಥಿಕ,ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಮತ್ತು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿಗಳನ್ನಾಗಿಸುವ ಗುರಿಯನ್ನು ಸಕಲ ಮರಾಠಾ ಸಮಾಜ ಬೆಳಗಾವಿ ಉದ್ದೇಶವಾಗಿದೆ ಎಂದರು. ಇದಕ್ಕೂ ಮುನ್ನ ಕಪಿಲೇಶ್ವರ ಮಂದಿರದಿಂದ ವಡಗಾವಿಯವರೆಗೆ ಮರಾಠಾ ಸಮುದಾಯದ ಸ್ವಾಮೀಜಿಯಾದ ಶ್ರೀ ಮಂಜುನಾಥ ಸ್ವಾಮೀಜಿಯವರ ಶೋಭಾಯಾತ್ರೆ ಜರುಗಿತು.

ಶ್ರೀ ಮಂಜುನಾಥ ಸ್ವಾಮೀಜಿ, ಛತ್ರಪತಿ ಸಂಭಾಜಿ ರಾಜೆ ಬೋಸಲೆ ಕೊಲ್ಲಾಪುರದ ಶ್ರೀಮಂತ ಯುವರಾಜ, ಕಾಶಿ ವೇದಾಂತಚಾರ್ಯ ಸ್ವಾಮಿ ಸ್ವಹಂ ಚೈತನ್ಯ ಪುರಿ, ರಾಷ್ಟ್ರೀಯ ಧರ್ಮಾಚಾರ್ಯ ರಾಜಮನೆತನದ ರಾಜಶ್ರೀ ಶ್ರೀ ಭಗವಾನ್ ಗಿರಿ ಮಹಾರಾಜರು ನೂಲ್, ಮಾಜಿ ಮೇಯರ್ ಶಿವಾಜಿ ಸುಂಟ್ಕರ್, ರತನ್ ಪಾಟೀಲ, ರಮಾಕಾಂತ ಕೊಂಡಸ್ಕರ್, ರಮೇಶ ಗೋರಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.