ತಂದೆಗೆ ತಕ್ಕ ಮಗಳು: ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದ ಅಂಕಿತಾ
ಬೆಳಗಾವಿ: ರಾಷ್ಟ್ರೀಯ ಹೆದ್ದಾರಿಯ ಮೇಲೆ ಕೂಲಿ ಕೆಲಸ ಮಾಡಿಕೊಂಡು ಮಗಳನ್ನು ಚನ್ನಾಗಿ ಓದಿಸಿ ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಟಾಫರ್ ಬಂದ್ ವಿದ್ಯಾರ್ಥಿನಿಯ ಸಾಧನೆಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಚಿಕ್ಕೋಡಿ ತಾಲೂಕಿನ ಸದಲಗಾ ಮುರಾರ್ಜಿ ದೇಸಾಯಿ ಶಾಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಮಾರುತಿ ಮಾಳಗಿ ಅವರ ಮಗಳ ಅಂಕಿತಾ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 616 ಅಂಕ ಪಡೆದು ಶಾಲೆಗೆ ಹಾಗೂ ತಂದೆ ತಾಯಿಗೆ ಗೌರವ ತಂದಿದ್ದಾರೆ.
ಬಡತನದ ನಡುವೆಯೂ ಮಗಳ ಓದಿಗೆ ತೊಂದರೆಯಾಗಬಾರದೆಂದು ತಂದೆ, ತಾಯಿ ಶ್ರಮಪಟ್ಟು ಮಗಳನ್ನು ಸುಶಿಕ್ಷಿತಳನ್ನಾಗಿ ಮಾಡಬೇಕೆಂಬ ಕನಸ್ಸನ್ನು ಅಂಕಿತಾ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ.