Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬೆಳಗಾವಿ ಬಿಜೆಪಿಯಲ್ಲಿ ಭಿನ್ನ ಮತ ಇಲ್ಲ: ಕೇಂದ್ರ ಸಚಿವ ಜೋಶಿ

localview news

ಬೆಳಗಾವಿ: ಬೆಳಗಾವಿ ಜಿಲ್ಲೆಯ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಕೇವಲ ಏಕ್ ಮತ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ನಾನು ಬೆಳಗಾವಿಗೆ ಬಂದಿದ್ದು ಚುನಾವಣೆ ವಿಷಯ ಕುರಿತು ಸಭೆ ನಡೆಸಲು ಬಂದಿದ್ದೇನೆ‌. ಬೆಳಗಾವಿ ಬಿಜೆಪಿಯಲ್ಲಿ ಭಿನ್ನಮತ ಇಲ್ಲವೇ ಇಲ್ಲ ಎಂದರು.

ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿ. ಬಸವರಾಜ ಬೊಮ್ಮಾಯಿ‌ ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಯಿಸಿದರು.

ದೊಡ್ಡ ಪ್ರಮಾಣದಲ್ಲಿ ಕೇಂದ್ರ ‌ಮತ್ತು ರಾಜ್ಯ ಸರಕಾರದಿಂದ ಶಿಕ್ಷಣ ‌ಕ್ಷೇತ್ರದಲ್ಲಿ ಒಟ್ಟಾರೆ ಬೃಹತ್ ‌ಪ್ರಮಾಣದಲ್ಲಿ ಕೆಲಸವಾಗಿರುವುದರಿಂದ ಬಿಜೆಪಿ ಅಭ್ಯರ್ಥಿಗಳು ನೂರಕ್ಕೆ ನೂರು ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನುದಾನ ರಹಿತ ಸಂಸ್ಥೆಗಳನ್ನು ಅನುದಾನಕ್ಕೆ ಸೇರ್ಪಡೆಯಾಗಿದ್ದು, ಹಾಸ್ಟೆಲ್ ಗಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ‌ನಿರ್ಮಾಣ ಮಾಡಿದ್ದು, ಹೊಸ ಶಿಕ್ಷಣ ನೀತಿ‌ ಘೋಷಣೆ ಮಾಡಿ ಕರ್ನಾಟಕದಲ್ಲಿ ಅನುಷ್ಠಾ‌ನವಾಗಿದೆ ಎಂದರು.

ತಾಂತ್ರಿಕ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ‌ಮಹತ್ತರವಾದ ಆಯಾ ಭಾಷೆಯ ಆಧ್ಯತೆಯ ಮೇರೆಗೆ ಅಧ್ಯಯನ ನಡೆಸಲು ಪ್ರಧಾನಿ ನರೇಂದ್ರ ‌ಮೋದಿ ಅವರು ಸೂಚನೆ ನೀಡಿದ್ದಾರೆ‌ ಎಂದು ತಿಳಿಸಿದರು.

ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದೆ. 54 ಸಾವಿರ ಪದವೀಧರರು ಪ್ರತಿ ವರ್ಷ ಹೊರಗೆ ಬರುತ್ತಿದ್ದಾರೆ. ಎಂಜಿನಿಯರಿಂಗ್, ಐಐಟಿ, ಎಮ್ಸ್ ಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಐಐಎಂ ಸೇರಿದಂತೆ ಸಾಕಷ್ಟು ಕಾಲೇಜುಗಳ ಸಂಖ್ಯೆ ಹೆಚ್ಚಳ ಮಾಡಿದ್ದೇವೆ ಎಂದರು.

1ಲಕ್ಷ 4 ಸಾವಿರ ಕೋಟಿ ರೂ.ಗಳನ್ನು ಮೊದಲನೇ ಬಾರಿಗೆ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಲಾಗಿದೆ. ಸ್ವಯಂ ಉದ್ಯೋಗ ಸೃಷ್ಟಿಸಲು ಅವಕಾಶ ಸೇರಿದಂತೆ ಪದವೀಧರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆಯನ್ನು ಕೇಂದ್ರ ‌ಮತ್ತು ರಾಜ್ಯ ಸರಕಾರ ನೀಡಿದೆ ಎಂದರು.

ಧಾರವಾಡ ತಾಲೂಕಿನ ಬಾಡ ಗ್ರಾಮದಲ್ಲಿ ನಡೆದ ಅಪಘಾತದಲ್ಲಿ 9 ಜನ ಮೃತಪಟ್ಟ ಏಳೆಂಟು ಜನ ಗಾಯವಾಗಿದ್ದಾರೆ. ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ. ಗಾಯಾಳುಗಳ ಚಿಕಿತ್ಸೆ ನೋಡಿಕೊಳ್ಳಲು ಸಂಬಂಧಿಸಿದವರಿಗೆ ತಿಳಿಸಿದ್ದೇನೆ. ಅವರಿಗೆ ಅಗತ್ಯ‌ ನೆರವು ನೀಡಲು ಸಿಎಂ ಪ್ರವಾಸದಲ್ಲಿದ್ದಾರೆ ಅವರು ಬಂದ ಬಳಿಕ ಚಿಂತಿಸಲಾಗುವುದು ಎಂದರು.