Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಜನ್ಮ ದಿನದ ಅಂಗವಾಗಿ ಹಿಂದೂ ರಾಷ್ಟ್ರ-ಜಾಗೃತಿ ಅಭಿಯಾನ

localview news

ಬೆಳಗಾವಿ: ನಾಥ ಪೈ ಚೌಕ್ ಶಹಪುರ ದಿಂದ ಶ್ರೀ ಕಪಿಲೇಶ್ವರ ದೇವಸ್ಥಾನದ ತನಕ ಹಿಂದೂ ಐಕ್ಯತಾ ಮೆರವಣಿಗೆಯ ಆಯೋಜನೆ ಮಾಡಲಾಯಿತು. ಸನಾತನ ಸಂಸ್ಥೆಯ ಸಂಸ್ಥಾಪಕರಾಗಿರುವ ಪರಾತ್ಪರ ಗುರು ಡಾಕ್ಟರ್ ಜಯಂತ ಆಠವಲೆಯವರ ಜನ್ಮೋತ್ಸವದ ನಿಮಿತ್ತ, ದೇಶದಲ್ಲೆಡೆ ‘ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂತರ್ಗತ ಜಿಲ್ಲೆಯ ವಿವಿಧೆಡೆಗಳಲ್ಲಿ ಹಿಂದೂ ಐಕ್ಯತಾ ಮೆರವಣಿಗೆಯ ಆಯೋಜನೆ ಮಾಡಲಾಗಿದ್ದು, ನಾಳೆ ಮೇ 23ನೇ ತಾರೀಖು ಸೋಮವಾರ ಮಧ್ಯಾಹ್ನ 3.00 ಕ್ಕೆ ನಾಥ ಪೈ ಚೌಕ್ ಶಹಪುರದಿಂದ ಕಪಿಲೇಶ್ವರ ದೇವಸ್ಥಾನದ ತನಕ ಹಿಂದೂ ಐಕ್ಯತಾ ಮೆರವಣಿಗೆಯು ಸಾಗಲಿದೆ.

ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ಈ ಅಭಿಯಾನವು ಶ್ರೀರಾಮನವಮಿಯಿಂದ ಪ್ರಾರಂಭವಾಗಿ ಅಕ್ಷಯ ತೃತೀಯ ಮತ್ತು ಅಕ್ಷಯ ತೃತೀಯದಿಂದ ಮೇ ತಿಂಗಳ ಕೊನೆಯ ವಾರದವರೆಗೂ ದೇಶದಾದ್ಯಂತ ನಡೆಯಲಿದೆ. ಇದರಡಿಯಲ್ಲಿ ಸಾಧನೆಯ ವಿಷಯದಲ್ಲಿ ಪ್ರವಚನ, ಸಾಮೂಹಿಕ ಪ್ರಾರ್ಥನೆ, ದೇವಸ್ಥಾನಗಳ ಸಾಮೂಹಿಕ ಸ್ವಚ್ಛತೆಯಂತಹ ಹಲವು ಉಪಕ್ರಮಗಳನ್ನು ಸಹ ನಡೆಸಲಾಗುತ್ತಿದೆ.