Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಚುನಾವಣೆ ಒಂದು ಕಲೆ: ಜಾರಕಿಹೊಳಿ

localview news

ಬೆಳಗಾವಿ: ಚುನಾವಣೆ ಎನ್ಜುವುದು ಕಲೆ ಅದನ್ನು ಸದ್ಬಳಕೆ ಮಾಡಿಕೊಂಡು ಗೆಲವು ಸಾಧಿಸುವುದೊಂದೆ ಮುಖ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.

ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಮೇ.25ಕ್ಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದೇವೆ. ಜಿಲ್ಲಾ ಮುಖಂಡರು ಮಾತ್ರ ಆಗಮಿಸಲಿದ್ದಾರೆ. ಚುನಾವಣೆಯ ಪ್ರಚಾರಕ್ಕೆ ರಾಜ್ಯ ನಾಯಕರು ಬರುತ್ತಾರೆ ಎಂದರು.

ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಪ್ರಯತ್ನ ಮಾಡುತ್ತೇವೆ. ಕಾರ್ಯಕರ್ತರು ಕಾರ್ಯತಂತ್ರ ಮಾಡುತ್ತಾರೆ ಎಂದು ಹೇಳಿದರು.

ಬಂಡಾಯದಿಂದ ಯಾವುದೇ ತೊಂದರೆ ಕಾಂಗ್ರೆಸ್ ಗೆ ಆಗುವುದಿಲ್ಲ. ಬನ್ನೂರ ಅವರನ್ನು ಕರೆದು ಮಾತನಾಡಲಾಗುವುದು ಎಂದರು.

ನಾವು ನೇರವಾಗಿ ಶಿಕ್ಷಕ ಸಂಘಟನೆಯೊಂದಿಗೆ ಗುರುತಿಸಿಕೊಂಡಿಲ್ಲ. ಶಿಕ್ಷಕ ಹಾಗೂ ಪದವೀಧರ ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ ಎಂದರು. ಶಿಕ್ಷಕ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ, ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಸುನೀಲ ಸಂಕ, ಶಾಸಕರಾದ ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ, ಮಾಜಿ ಶಾಸಕ ಫಿರೋಜ್ ಸೇಠ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.