ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಪೂಜೆ
ಬೆಳಗಾವಿ : ಗಣೇಶಪುರದ ಜ್ಯೋತಿ ನಗರದ ಶ್ರೀ ಸಾಯಬಿನ್ ದೇವಿ ಲಾಖೆ ಸಮಾಜ ಯುವಕ ಮಂಡಳದ ಸಮುದಾಯ ಭವನದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಶಂಕುಸ್ಥಾಪನೆ ನೆರವೇರಿಸಿದರು.
ಶಾಸಕರ ಅನುದಾನದಲ್ಲಿ ಕಟ್ಟಡ ನಿರ್ಮಾಣವಾಗಲಿದ್ದು, ಭೂಮಿ ಪೂಜೆಯನ್ನು ನೆರವೇರಿಸುವ ಮೂಲಕ ಕಟ್ಟಡ ಕಾಮಗಾರಿಗೆ ಚಾಲನೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸಾಗರ ಲಾಖೆ, ಪಪ್ಪು ಶಂಕರ ಲಾಖೆ, ಅಜಿತ ಸಾವಂತ, ಮಹೇಶ ಕೋಲಕಾರ, ಸುಂದರ ಕುರುಬರ್, ಗ್ರಾಮದ ಸಮಸ್ತ ಮುಖಂಡರು ಉಪಸ್ಥಿತರಿದ್ದರು.