Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸಾಮಾಜಿಕ ಜಾಲತಾಣದಲ್ಲಿ ಆಪ್ ಸಕ್ರಿಯವಾಗಬೇಕು: ಶಾಸ್ತ್ರೀಮಠ

localview news

ಬೆಳಗಾವಿ: ಆಮ್ ಆದ್ಮಿ ಪಕ್ಷ ಜಿಪಂ, ತಾಪಂ ಚುನಾವಣೆ ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವ ಆಕಾಂಕ್ಷಿಗಳು, ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರಬೇಕು ಎಂದು ಆಮ್ ಆದ್ಮಿ ವಲಯ ಸಂಯೋಜಕ ವಿಜಯ ಶಾಸ್ತ್ರೀಮಠ ಹೇಳಿದರು.

ಭಾನುವಾರ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಆಮ್ ಆದ್ಮಿಯ ಬೆಳಗಾವಿ, ಬಾಗಲಕೋಟ ವಲಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

2023ರ ವಿಧಾನ ಸಭಾ ಚುನಾವಣೆಗೆ ಆಪ್ ಸನ್ನದ್ಧವಾಗಬೇಕಿದೆ. ಜೊತೆಗೆ ಜಿಪಂ, ತಾಪಂ ಸಿದ್ದತೆಯೂ ಮಾಡಿಕೊಂಡು ಅತೀ ಹೆಚ್ಚು ಸ್ಥಾನ ಗೆಲ್ಲುವ ಗುರಿ‌ ಹೊಂದಬೇಕು. ಅಂದಾಗ ಮಾತ್ರ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ‌ ಮೀರಿ ಆಪ್ ಅಭ್ಯರ್ಥಿಗಳು ಗೆಲುವು ಸಾಧಿಸಬಹುದು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಚುನಾವಣೆ ಆಕಾಂಕ್ಷಿಗಳು ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಎರಡೂವರೆ ಸಾವಿರ ಜನ ಕೆಲಸ ಮಾಡುವವರಿದ್ದರೇ ಮಾತ್ರ ಚುನಾವಣೆಯ ಅಕಾಡಕ್ಕೆ‌ ದುಮಕಬೇಕು. ಮೊದಲು ಪಕ್ಷ ಸಂಘಟನೆ ಮಾಡಿ ಹೆಚ್ಚು ಕಾರ್ಯಕರ್ತರನ್ನು ಆಪ್ ಗೆ ಸೇರ್ಪಡೆ ಮಾಡಿಸುವ ಅತ್ಯಗತ್ಯ ಇದೆ ಎಂದರು.

ಆಮ್ ಆದ್ಮಿ ಪಕ್ಷದಿಂದ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡುತ್ತದೆ. ಆದರೆ ಚುನಾವಣೆ ಆಕಾಂಕ್ಷಿಗಳಿದ್ದವರು ತಮ್ಮ ಕ್ಷೇತ್ರಗಳಲ್ಲಿ ತೆರಳಿ ಜನರ ಹಾಗೂ ಕ್ಷೇತ್ರದ ಸಮಸ್ಯೆಯನ್ನು ಪಟ್ಟಿ ಮಾಡಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರನಾಳಿಕೆ ಬಿಡುಗಡೆ ಮಾಡಿ ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಆಮ್ ಆದ್ಮಿ ವಿಧಾನಸಭಾ ಚುನಾವಣೆಯಲ್ಲಿ ಆಕಾಂಕ್ಷಿ ಅಭ್ಯರ್ಥಿಗಳು ಪ್ರತಿಯೊಂದ ಜಿಪಂ, ತಾಪಂ ಆಕಾಂಕ್ಷಿಗಳಿಗೆ ಕೆಲಸ ಹಚ್ಚಿ ಅತೀ ಹೆಚ್ಚು ಕ್ಷೇತ್ರ ಗೆಲ್ಲುವ ಯೋಜನೆ ರೂಪಿಸಬೇಕಿದೆ ಎಂದರು.

ಬೆಳಗಾವಿ,‌ ಬಾಗಲಕೋಟ, ಉಸ್ತುವಾರಿ ರಾಜಕುಮಾರ ಟೋಪಣ್ಣವರ ಮಾತನಾಡಿ, ಆಮ್ ಆದ್ಮಿ ಪಕ್ಷ ಸಂಘಟನೆ ಮಾಡಿರುವುದು ಹಾಗೂ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಮುಂಬರುವ ಚುನಾವಣೆ ಆಕಾಂಕ್ಷೆಗಳು ಜನರ ಬಳಿ ಹೋಗಿ ಕಾಂಗ್ರೆಸ್, ಬಿಜೆಪಿ ಮಾಡಿರುವ ಭ್ರಷ್ಟಾಚಾರದ ಬಗ್ಗೆ ಮನವರಿಕೆ ಮಾಡಿಕೊಡುಗ ಅಗತ್ಯ ಇದೆ ಎಂದರು.

ಬಾಗಲಕೋಟ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ಬಾಗಲಕೋಟ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷ ಬಲಿಷ್ಠವಾಗಿ ಬೆಳೆಯುತ್ತಿದೆ. ಭಾರತಕ್ಕೆ ಮೊದಲ ವೈರಿ ಪಾಕಿಸ್ತಾನ ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಭ್ರಷ್ಟಾಚಾರ ದೊಡ್ಡ ವೈರಿ ಎಂದರು.

ರಾಷ್ಟ್ರೀಯ ಪಕ್ಷಗಳ ಭ್ರಷ್ಟಾಚಾರದ ಧೋರಣೆಯಿಂದ ಮನನೊಂದು ನೂರಾರು ರಾಷ್ಟ್ರೀಯ ಪಕ್ಷಗಳ ಮುಖಂಡರು ಆಪ್ ಸೇರ್ಪಡೆಯಾಗುತ್ತಿದ್ದಾರೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಎಲ್ಲರೂ ಕಾರ್ಯನಿರ್ವಹಿಸಬೇಕಿದೆ. ಬೇರು ಮಟ್ಟದಲ್ಲಿ ಆಪ್ ಪಕ್ಷವನ್ನು ಸಂಘಟಿಸುವ ಪ್ರಯತ್ನ ಎಲ್ಲರ ಮೇಲೆ ಇದೆ ಎಂದರು. ಬಸನಗೌಡ ಚಿಕ್ಕನಗೌಡರ,‌ ಬಿಜೆಪಿ ತೊರೆದು ಆಮ್ ಆದ್ಮಿ ಪಕ್ಷ ಸೇರ್ಪಡೆಯಾದರು. ಜತೆಗೆ ಪ್ರವೀಣ, ಶ್ರೀಶೈಲ್ ಸರಿಕಾರ ಸೇರಿದಂತೆ 20ಕ್ಕೂ ಹೆಚ್ಚು ಜನ ಆಪ್ ಸೇರ್ಪಡೆಯಾದರು.

ಬೆಳಗಾವಿ ಆಪ್ ಜಿಲ್ಲಾಧ್ಯಕ್ಷ ವಿಜಯ ಪಾಟೀಲ, ಆಪ್ ಮುಖಂಡರಾದ ಶಂಕರ ಹೆಗಡೆ, ಗಿರೀಶ ಬಾಳೇಕುಂದ್ರಿ, ಅನಿಸ್ ಸೌದಾಗರ, ಸಂಪತಕುಮಾರ ಶೆಟ್ಟಿ, ಅರ್ಜುನ ಹಲಗೇಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.