Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕೆಆರ್ಎಂಎಸ್ಎಸ್ ಬಿಜೆಪಿ ಅಭರ್ಥಿಗಳಿಗೆ ಬೆಂಬಲ

localview news

ಬೆಳಗಾವಿ: ಶಿಕ್ಷಣ ಮತ್ತು ಯುವಕರ ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿಗಳು ಮೇಲ್ಮನೆ ಸದಸ್ಯರಾಗುವುದು ರಾಜ್ಯಕ್ಕೆ ಒಳಿತು. ಹಾಗಾಗಿ ಪ್ರಸಕ್ತ ವಾಯವ್ಯ ಶಿಕ್ಷಕರ ಮತ್ತು ಪಧವೀಧರರ ಮತಕ್ಷೇತ್ರದ ಚುನಾವಣೆ ನಿಮಿತ್ತ ಶಿಕ್ಷಕರ, ಶೈಕ್ಷಣಿಕ ಮತ್ತು ಉದ್ಯೋಗ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಬಿಜೆಪಿ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಮತ್ತು ಮಾಧ್ಯಮಿಕ ಶಿಕ್ಷಕ ಸಂಘವು ಬೆಂಬಲ ನೀಡಿದೆ ಎಂದು ಸಂಘದ ಅಧ್ಯಕ್ಷ ಡಾ. ರಘು ಅಕ್ಮುಂಚಿ ತಿಳಿಸಿದರು.

ನಗರದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಅಭ್ಯರ್ಥಿಗಳಾದ ಅರುಣ ಶಹಾಪುರ, ಹನುಮಂತ ನಿರಾಣಿ ಮತ್ತು ಬಸವರಾಜ ಹೊರಟ್ಟಿ ಬಹಳ ವರ್ಷದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಅಷ್ಟೇ ಅಲ್ಲದೆ ಈ ಅಭ್ಯರ್ಥಿಗಳು ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುತ್ತಾರೆ.

ಹೊಸ ಶಿಕ್ಷಣ ನೀತಿ (ಎನ್ಇಪಿ) ರಾಜ್ಯದಲ್ಲಿ ಜಾರಿಯಾಗಲು ಮತ್ತು ಶಿಕ್ಷಕರ ನೇಮಕಾತಿ ಕುರಿತಂತೆ ಮುತವರ್ಜಿವಹಿಸಿ ರಾಜ್ಯದಲ್ಲಿ ಉತ್ತಮ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅತಿಥಿ ಉಪನ್ಯಾಸಕರ ಕಡಿಮೆ ವೇತನದ ಸಮಸ್ಯೆ ವಿರುದ್ಧ ಬಿಜೆಪಿಯ ಶಿಕ್ಷಕರ ಮತಕ್ಷೇತ್ರದ ಎಂಎಲ್ಸಿಗಳು ಒಗ್ಗೂಡಿ, ಒಕ್ಕೊರಲಿನಿಂದ ಸರ್ಕಾರದ ಮೇಲೆ ಒತ್ತಡ ಹೇರಿ ವೇತನ ಹೆಚ್ಚಳವಾಗುವಂತೆ ಕಾಳಜಿ ವಹಿಸಿದ್ದಾರೆ.

ಅಷ್ಟೇ ಅಲ್ಲದೆ ಪ್ರೌಢ, ಪಿಯು ಮತ್ತು ಪದವಿ ಮಹಾವಿದ್ಯಾಲಯಗಳ ಶಿಕ್ಷಕರ ಮುಂಬಡ್ತಿ, ವಿವಿಧ ಭತ್ಯೆ ಮತ್ತು ಪಿಂಚಣಿ ಸೇರಿದಂತೆ ಎದುರಾಗುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ ಮತ್ತು ಯುಜಿಸಿ ತಿಳಿಸಿದ ನೇಮಕಾತಿಯಲ್ಲಿನ ಪಿಎಚ್.ಡಿ ಅರ್ಹತೆ ಕಡ್ಡಾಯವನ್ನು 2023ರವರೆಗೆ ಮುಂದೂಡಿದ್ದಾರೆ ಎಂದು ತಿಳಿಸಿದರು.

ಅಖಿಲ ಭಾರತೀಯ ರಾಷ್ಟಿoಯ ಶೈಕ್ಷಿಕ ಮಹಾಸಂಘದ(ಎಬಿಆರ್ಎoಎಸ್) ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿದ್ಧನಕೇರಾ ಮಾತನಾಡಿ, ವಾಯವ್ಯ ಶಿಕ್ಷಕರ ಮತ್ತು ಪದವಿಧರ ಮತಕ್ಷೇತ್ರದ ಜೊತೆಗೆನೆ ರಾಷ್ಟçದ 6 ರಾಜ್ಯಗಳ ವಿವಿಧ ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಚುನಾವಣೆ ಜರುಗುತ್ತಿದೆ. ಮೇಲ್ಮನೆ ಚುನಾವಣೆ ಜರಗುತ್ತಿರುವ ಬಹುತೇಕ ಎಲ್ಲ ರಾಜ್ಯಗಳಲ್ಲಿ ಎಬಿಆರ್ಎಂಎಸ್ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದೆ ಎಂದು ತಿಳಿಸಿದರು.

ಕೆಆರ್ಎಂಎಸ್ಎಸ್ ರಾಜ್ಯಾಧ್ಯಕ್ಷ ಸಂದೀಪ ಬೂದಿಹಾಳ, ಎ.ಎಸ್.ಹಸಬಿ, ನವೀನಾ ಶಿಟ್ಟಿಗಾರು, ಉಮೇಶ ಕುಲಕರ್ಣಿ, ಭೀಮಶಿ ಬಡಿಗೇರ, ಗುರುನಾಥ ಬಡಿಗೇರ, ಪಿ.ಎಸ್.ಒಂಟಗೂಡಿ ಹಾಜರಿದ್ದರು.