ಇದು ಕಬ್ಬಿನ ಹಾಲು ಅಲ್ಲ: ಕಲುಶಿತ ನೀರು
ಬೆಳಗಾವಿ: ಅಥಣಿಯ ರೇಣುಕಾ ಶುಗರ್ ಯುನಿಟ್ 4 ನಿಂದ ತನ್ನ ಕಲುಶಿತ ನೀರನ್ನು ಹೊರ ಜಮೀನು, ಕಾಲುವೆಯಲ್ಲಿ ಬಿಡುತ್ತಿರುವುದರಿಂದ ಸುತ್ತ ಮುತ್ತಲಿನ ಜಾನುವಾರುಗಳು ಹಾಗೂ ಮೀನು ಮೃತಪಟ್ಟಿವೆ. ಕೂಡಲೇ ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಕಟನೂರ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಅಥಣಿ ತಾಲೂಕಿನ ಸುತ್ತಮುತ್ತಲಿನ ನಾಲ್ಕೈದು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ರೇಣುಕಾ ಸಕ್ಕರೆ ಕಾರ್ಖಾನೆಯ ಕಲುಷಿತ ನೀರಿನಿಂದ ಸಾಕಷ್ಟು ಸಮಸ್ಯೆಯಾಗಿದೆ ಹತ್ತು ದಿನಗಳಲ್ಲಿ ಈ ಕಾರ್ಖಾನೆಯವರ ಮೇಲೆ ಕ್ರಮ ಕೈಗೊಳ್ಳದಿದ್ದರೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.