Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ದೈವೀಸ್ಥಾನವಾಗಿರುವ ಗ್ರಾಮೀಣ ಪ್ರದೇಶದ ಸೇವೆಗೈಯ್ಯುವುದೇ ಒಂದು ಸುದೈವ - ಲಕ್ಷ್ಮೀ ಹೆಬ್ಬಾಳಕರ್

localview news

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸರೀಕಟ್ಟಿ ಗ್ರಾಮದ ಶ್ರೀ ಲಕ್ಷ್ಮೀದೇವಿ ಮಂದಿರದ ಉದ್ಘಾಟನೆ ನೆರವೇರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಕಳಶದ ಪೂಜೆ ನೆರವೇರಿಸಿದರು.

ದೇವಸ್ಥಾನಗ ನಿರ್ಮಾಣದಿಂದಾಗಿ ಹಳ್ಳಿಗಳ ಚಿತ್ರಣವೇ ಬದಲಾಗುತ್ತದೆ. ಜನರಲ್ಲಿ ನೆಮ್ಮದಿಯ ಭಾವನೆ, ಒಗ್ಗಟ್ಟು, ಶಾಂತಿಯನ್ನು ಕಾಣಬಹುದು. ಹಾಗಾಗಿ ದೇವಸ್ಥಾನ ನಿರ್ಮಾಣ ಹಾಗೂ ಜೀರ್ಣೋದ್ಧಾರವನ್ನೂ ಇನ್ನಿತರ ಕೆಲಸಗಳಿಗೆ ನೀಡಿದಷ್ಟೇ ಆದ್ಯತೆ ಮೇಲೆ ಕೈಗೊಳ್ಳಲಾಗುತ್ತಿದೆ. ದೈವೀಸ್ಥಾನವಾಗಿರುವ ಗ್ರಾಮೀಣ ಪ್ರದೇಶದ ಸೇವೆ ಗೈಯ್ಯುವುದೇ ಒಂದು ಸುದೈವ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಟ್ರಸ್ಟ್ ಕಮೀಟಿಯವರು, ಸಿದ್ದರಾಯಿ ನಾಗರೊಳಿ, ರಾಮಾ ಹಿರೊಜಿ, ವಿಕ್ರಮ ದೇಸಾಯಿ, ಮಾರುತಿ‌ ಕೊಂಡಸಕೊಪ್ಪ, ಬಸವಣ್ಣಿ ಕೊಂಡಸಕೊಪ್ಪ, ದಿಲೀಪ್ ಕೊಂಡಸಕೊಪ್ಪ ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.