Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ರಂಗೇರಿದ ಪರಿಷತ್ ಚುನಾವಣೆಯ ಕಣ

localview news

ಬೆಳಗಾವಿ: ವಾಯುವ್ಯ ಶಿಕ್ಷಕ, ಪದವೀಧರ ಮತಕ್ಷೇತ್ರದ ಚುನಾವಣೆಯ ಕಾವು ಜೋರಾಗಿದ್ದು ಪ್ರಜ್ಞಾವಂತ ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎನ್ನುವುದು ಮಾತ್ರ ನಿಗೂಢವಾಗಿದೆ.

ಶಿಕ್ಷಕ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಕಾಶ ಹುಕ್ಕೇರಿ, ಬಿಜೆಪಿಯಿಂದ ಅರುಣ ಶಹಾಪುರ ಸ್ಪರ್ಧೆ ನಡೆಸಿದ್ದಾರೆ. ಪದವೀಧರ ಮತಕ್ಷೇತ್ರದದಿಂದ ಕಾಂಗ್ರೆಸ್ ನಿಂದ ನ್ಯಾಯವಾದಿ ಸುನಿಲ್ ಸಂಕ, ಬಿಜೆಪಿಯಿಂದ ಹಣಮಂತ ‌ನಿರಾಣಿ ಸ್ಪರ್ಧೆ ನಡೆಸಿದ್ದರೇ, ಪಕ್ಷೇತರ ಅಭ್ಯರ್ಥಿಯಾಗಿ ಈ‌ ಹಿಂದೆ ಕಾಂಗ್ರೆಸ್ ಶಿಕ್ಷಕ‌ ಮತಕ್ಷೇತ್ರದಿಂದ ಸ್ಪರ್ಧೆ ನಡೆಸಿದ್ದ‌ ಎನ್.ವಿ.ಬನ್ನೂರ ಸ್ಪರ್ಧೆ ನಡೆಸಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿರುವ ಅರುಣ ಶಹಾಪುರ‌ ಅವರು ಶಿಕ್ಷಕರ ಬೇಡಿಕೆ ಸ್ಪಂದಿಸಿಲ್ಲ, ಬೆಂಗಳೂರಿನಲ್ಲಿಯೇ ಇರುತ್ತಾರೆ ಎನ್ನುವ ಆರೋಪ ಬೆಳಗಾವಿ ಭಾಗದ ಶಿಕ್ಷಕರದ್ದಾಗಿದೆ. ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಎಲ್ಲ ಕ್ಷೇತ್ರದಲ್ಲಿ ಸೈ ಎನ್ನಿಸಿಕೊಂಡವರು, ಹಿರಿಯ ರಾಜಕಾರಣಿ, ಪ್ರಕಾಶ ಹುಕ್ಕೇರಿ ಅವರ ಹಿರಿತನ ಪ್ರಬಲ ಲಿಂಗಾಯತ ಕಾಂಗ್ರೆಸ್ ಮುಖಂಡರು. ಆದರೆ ಇವರು ಶಿಕ್ಷಕರೇ ಅಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ. ಇನ್ನೂ ಈ ಹಿಂದೆ ಕಾಂಗ್ರೆಸ್ ನಿಂದ ಸ್ಪರ್ಧೆ ನಡೆಸಿದ್ದ ಎನ್.ವಿ.ಬನ್ನೂರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿರುವುದು ಎರಡೂ ಪಕ್ಷಗಳಿಗೆ ಟಕ್ಕರ್ ಕೊಟ್ಟರೂ ಅಚ್ಚರಿ ಪಡಬೇಕಿಲ್ಲ.

ಇನ್ನೂ ಪದವೀಧರ ಮತಕ್ಷೇತ್ರದಲ್ಲಿ ಹಣಮಂತ ನಿರಾಣಿ ಸಾಕಷ್ಟು ಕೆಲಸ ಮಾಡಿದ್ದಾರೆ. ಪಂಚಮಸಾಲಿ ಸಮುದಾಯದವರಾದ ಇವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ನ ಸುನೀಲ ಸಂಕ ಸ್ಪರ್ಧಿಸಿದ್ದಾರೆ. ಸುನಿಲ ಸಂಕ ಪಂಚಮಸಾಲಿ ಸಮುದಾಯದವರೆ ಆಗಿರುವುದರಿಂದ ಪ್ರತಿಸ್ಪರ್ಧೆ ಒಡ್ಡಿದರೂ ಆಶ್ಚರ್ಯ ಪಡಬೇಕಿಲ್ಲ. ಒಟ್ಟಾರೆ, ಚುನಾವಣೆಯ ರಣಕಣ ಜೋರಾಗಿ ನಡೆದಿದ್ದು, ಮತದಾರ ಯಾರ ಕೈ ಹಿಡಿಯುತ್ತಾರೆ ಎನ್ನುವುದು ಮಾತ್ರ ಕೆಲವೆ ದಿನದಲ್ಲಿ ಸ್ಪಷ್ಟವಾಗಲಿದೆ.