Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬರಗೂರು ರಾಮಚಂದ್ರಪ್ಪನವರು ಮಾಡಿದ್ದು ಏನು: ರಾಜೀವ ಪ್ರಶ್ನೆ

localview news

ಬೆಳಗಾವಿ: ದೇಶಕ್ಕೆ ಮತ್ತು ರಾಜ್ಯ ಸಾಹಿತಿಗಳು ಮತ್ತು ಚಿಂತಕರ ಕೊಡುಗೆ ಅಪಾರವಾಗಿದೆ. ಸೃಜನಶೀಲತೆಯನ್ನು ಹೊಂದಿರುವ ಸಾಹಿತಿಗಳು ಭಾವುಕ ಮನಸ್ಸಿನವರು ಮತ್ತು ಜನಪರ ಸಂವೇದನ ಶೀಲರು ಎಂದು ಕುಡುಚಿ ಶಾಸಕ ಪಿ. ರಾಜೀವ ಹೇಳಿದರು.

ಅವರು ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು‌. ಕೇವಲ ಸುಳ್ಳನ್ನೇ ನೂರಾರು ಬಾರಿ ಹೇಳುವುದರ ಮೂಲಕ ಅದನ್ನೇ ಸತ್ಯವೆಂಬಂತೆ ಜನರನ್ನು ದಾರಿ ತಪ್ಪಿಸುವುದು ಕಾಂಗ್ರೆಸ್ಸಿನ ಟೂಲ್‌ಕಿಟ್‌ನ ಒಂದು ಭಾಗವಾಗಿದೆ ಎಂದರು.

ಈ ನಾಡಿನ ಸಾಹಿತಿಗಳು, ಚಿಂತಕರು ಮತ್ತು ಸ್ವಾಮಿಜಿಗಳಿಗೆ ಪಠ್ಯ ಪುಸ್ತಕ ಕೇಸರೀಕರಣ ಎಂಬ ಆಧಾರ ರಹಿತ ಅತೀ ಸುಳ್ಳನ್ನು ಹುಟ್ಟು ಹಾಕುವುದರ ಮೂಲಕ ತನ್ನ ಕೀಳು ರಾಜಕಾರಣವನ್ನು ಮುಂದುವರೆಸಿದೆ. ಕಾಂಗ್ರೆಸ್ಸಿನ ಈ ಟೂಲ್‌ಕಿಟ್‌ ಭಯೋತ್ಪಾದನೆಗೆ ಬಲಿಯಾಗದೇ ಸತ್ಯಾಸತ್ಯತೆಯನ್ನು ಅರಿತುಕೊಳ್ಳಬೇಕೆಂದು ಈ ನಾಡಿನ ಎಲ್ಲ ಜನರಲ್ಲಿ ವಿನಂತಿಸುತ್ತೇನೆ.

2014-I5 ರಲ್ಲಿ ಬಡಂಬಡಿಪ್ಪಾಯ್ ಪಠ್ಯ ಮಸ್ತಕ ಪರಿಷ್ಕರಣಾ ಸಮಿತಿ ಪಠ್ಯಕ್ರಮವನ್ನು ನೀಡಿತ್ತು. ನಂತರದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಬರಗೂರು ರಾಮಚಂದ್ರ ಸಮಿತಿ ಸ್ಥಾಪಿಸಿತು. ಬರಗೂರು ರಾಮಚಂದ್ರಪ್ಪರವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು.

ಆದರೆ ಈ ನಾಡಿಗೆ ಅವರ ಅಕ್ಷರ ಸೇವೆಯನ್ನು ನಾನು ಗೌರವಿಸುತ್ತೇನೆ. ಆದರೆ ಅಂದಿನ ಸರ್ಕಾರವನ್ನು ಮೆಚ್ಚಿಸಲಿಕ್ಕಾಗಿ ಅವರು ಕೈಗೊಂಡಿರುವ ತೀರ್ಮಾನಗಳು ದೇಶದ ಅಸ್ಮಿತೆಗೆ ಹೊಡೆತವನ್ನು ಕೊಟ್ಟಿವೆ ಎಂದು ಹೇಳದೇ ವಿಧಿಯಿಲ್ಲ. ರೋಹಿತ್ ಚಕ್ರತೀರ್ಥ ಸಮಿತಿ ಕುವೆಂಪು ರವರನ್ನು ಅವಮಾನಿಸಿದೆ ಎಂದು ಆರೋಪಿಸಲಾಗುತ್ತಿದೆ.

ಆದರೆ ಬರಗೂರು ರಾಮಚಂದ್ರಪ್ಪ ಸಮಿತಿ ರಾಷ್ಟ್ರಕವಿ ಕುವೆಂಪು ರವರ ಎಂಟು ಕೃತಿಗಳನ್ನು ಏಳಕ್ಕೆ ಇಳಿಸಿತ್ತು. ರೋಹಿತ್ ಚಕ್ರತೀರ್ಥರವರು ಕುವೆಂಪುರವರ ಹತ್ತು ಕೃತಿಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿದ್ದಾರೆ. ಭಗತ್ ಸಿಂಗ್‌ರವರ ಪಠ್ಯವನ್ನು ಕೈಬಿಡಲಾಗಿದೆಯೆಂದು ಸುಳ್ಳನ್ನು ಹರಡಲಾಗುತ್ತಿದೆ.

ಆದರ ಭಗತ್‌ಸಿಂಗ್‌ರವರೊಂದಿಗೆ ನೇಣಿಗೆ ಶರಣಾದ ರಾಜ್‌ಗುರು ಮತ್ತು ಸುಖದೇವ್‌ರವರ ವಿವರವನ್ನೂ ಸೇರಿಸಲಾಗಿದೆ. ಬಸವಣ್ಣನವರಿಗೆ ಅವಮಾನಿಸಲಾಗಿದೆಯೆಂದು ಸಾಮಾಜಿಕ ಶಾಂತಿ ಕದಡುವ ಕಾಂಗ್ರೆಸ್ಸಿನ ಟೂಲ್‌ಕಿಟ್ ಟೆರರಿಸಂ ಹೇಳಿಕೆಯ ಹಿಂದೆ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಅಶಾಂತಿಯನ್ನು ಹುಟ್ಟು ಹಾಕುವ ಹುನ್ನಾರವಿದೆ. ಇದು ಸಂಪೂರ್ಣ ಸತ್ಯಕ್ಕೆ ದೂರವಾಗಿದೆ. ಬಸವಣ್ಣವರ ವಚನಗಳಿಗೆ ಪಠ್ಯಕ್ರಮದಲ್ಲಿ ಆದ್ಯತೆ ನೀಡಲಾಗಿದೆ.

10 ನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ ಕರ್ನಾಟಕದಲ್ಲಿ ಬ್ರಿಟೀಷ್ ಆಳ್ವಿಕೆಗೆ ವಿರೋಧಗಳು ಅಧ್ಯಾಯದಲ್ಲಿ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಇವರಿಬ್ಬರನ್ನೇ ವೈಭವಿಕರಿಸಲಾಗಿದೆ.

ಸಂಗೋಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ವೀರ ಮದಕರಿ ನಾಯಕ ಹಾಗೂ 1947 ಕ್ಕೆ ಮುಂಚೆಯೆ ಸ್ವಾತಂತ್ರ ಪಡೆಯಲು ಹವಣಿಸಿದ್ದ ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮ ಇವುಗಳ ಬಗ್ಗೆ ಯಾವ ಉಲ್ಲೇಖವೂ ಇರುವುದಿಲ್ಲ.

ಬರಗೂರು ರಾಮಚಂದ್ರಪ್ಪ ಸಮಿತಿ ಕೈಬಿಟ್ಟಿದ್ದ 10 ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯದಲ್ಲಿದ್ದ ಸ್ವಾಮಿ ವಿವೇಕಾನಂದ, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಕುರಿತ ಉದಾತ್ತ ಚಿಂತನೆಗಳು ಗದ್ಯವನ್ನು ರೋಹಿತ್ ಚಕ್ರತೀರ್ಥ ಸಮಿತಿ ಸೇರ್ಪಡೆ ಮಾಡಿದೆ.

ಬರಗೂರು ಸಮಿತಿ 8 ನೇ ತರಗತಿಯ ಸಂಧೂ ಸಂಸ್ಕೃತಿ ಅಧ್ಯಾಯವನ್ನು ಕೈಬಿಟ್ಟು ಕೈಬಿಟ್ಟು ಸಿದ್ದರಾಮಯ್ಯ ಸರ್ಕಾರವನ್ನು ಓಲೈಸಲು ನೆವರು ಗಳು ಪಾಠವನ್ನು ಸೇರಿಸಿದ್ದರು. ಮತ್ತು ಹಿಂದೂ ಸಂಸ್ಕೃತಿ ನಾಗರಿಕತೆ ಪಾಠವನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ತಿರ್ಮಾನಿಸಿರುವುದು ತಪ್ಪೇ? ಪ್ರಸಿದ್ಧ ದೇವಾಲಯಗಳು ಶಿರ್ಷಿಕೆಯಡಿಯಲ್ಲಿ ಕ್ರೈಸ್ತ ಮತ್ತು ಮುಸ್ಲಿಂ ಸ್ಥಳಗಳ ಚಿತ್ರಗಳನ್ನು ಮಾತ್ರ ಮುದ್ರಿಸಿ ಯಾವುದೇ ದೇವಾಲಯದ ಚಿತ್ರಗಳನ್ನು ಸೇರಿಸಿರುವುದಿಲ್ಲ.

ಈ ಪಠ್ಯದಲ್ಲಿ ಟಿಪ್ಪು ಮುದ್ರಿಸಿ ದೇವಾಲಯಗಳನ್ನು ಕೈಬಿಟ್ಟಿದ್ದು ಸರಿಯೇ? ಅರಮನೆಯ ಚಿತ್ರವನ್ನು 8 ನೇ ತರಗತಿಯಲ್ಲಿ ಧರ್ಮಗಳು ಎಂಬ ವಿಷಯದಲ್ಲಿ ಕ್ರಿಶ್ಚಿಯಾನಿಟಿ, ಇಸ್ಲಾಂ ಇವುಗಳಿಗೆ ಹೆಚ್ಚಿನ ಪದಗಳನ್ನು ಮೀಸಲಿರಿಸಿ ಇವುಗಳಿಗಿಂತ ನೂರಾರು ವರ್ಷ ಮೊದಲೇ ರೂಪಗೊಂಡಿದ್ದ ಜೈನ, ಬುದ್ಧ ಮತಗಳನ್ನು ಕೊನೆಯಲ್ಲಿ ಅಲ್ಪವಿವರಣೆಯಲ್ಲಿ ಮುಕ್ತಾಯಗೊಳಿಸಿದ್ದು, ಹಿಂದೂ ಧರ್ಮ ಎಂಬ ಉಲ್ಲೇಖ ಎಲ್ಲಿಯೂ ಇರಲಿಲ್ಲ ಹಾಗಾಗಿ ಅತ್ಯಂತ ಪುರಾತನವಾದ ಸಂಸ್ಕೃತಿಯನ್ನು ಕುರಿತ ಸನಾತನ ಧರ್ಮ ಎಂಬ ಪಾಠವನ್ನು ಸೇರಿಸಿರುವುದು ತಪ್ಪೇ? 7 ನೇ ತರಗತಿಯಲ್ಲಿದ್ದ ಏಣಗಿ ಬಾಳಪ್ಪ ಜೀವನ ಕುರಿತ ನನ್ನ ಬಾಲ್ಯ ಪಾಠವನ್ನು ಕೈಬಿಡಲಾಗಿತ್ತು. ಕಾಸರಗೂಡಿನ ಕಯ್ಯಾರ ಕಿಞ್ಞಣ್ಣ ರೈ ರವರ 'ಏರುತಿಹುದು, ಹಾರುತಿಹುದು ನೋಡು ನಮ್ಮ ಬಾವುಟ, ಕೆ.ಎಸ್.ನರಸಿಂಹಸ್ವಾಮಿಯವರ ಭಾರತಿಯತೆ ಕವನ ಕೈಬಿಡಲಾಗಿತ್ತು.

ಅವುಗಳನ್ನು ಸೇರಿಸಲಾಗಿದೆ. ಲಿಂಗಾಯತ ಸಾಹಿತಿಗಳಾದ, ಸಂಗಮೇಶ ನಿಡಗುಂದ, ಕಾಶಿ ಮರುಳಯ್ಯ, ಸರ್ಪಭೂಷಣ ಶಿವಯೋಗಿ ಮುಂತಾದದವರ ರಚನೆಗಳನ್ನು ಕೈಬಿಟ್ಟಿದ್ದರು. ಅವುಗಳಿಗೆ ನ್ಯಾಯವನ್ನೊದಗಿಸುವ ಪ್ರಯತ್ನ ರೋಹಿತ್ಚಕ್ರತೀರ್ಥ ಎಂಬ ಸಮಿತಿಯಿಚಿದ ಸಾಗಿದೆ. ರಾಜಕೀಯ ಪ್ರೇರಿತವಾಗಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತ ಮಾಹಿತಿಯನ್ನು ಕೈಬಿಡಲಾಗಿತ್ತು.

2 ನೇ ತರಗತಿಯಲ್ಲಿ ಕೆಂಪೆಗೌಡರ ಕುರಿತು ಹೊಸ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ. 6 ನೇ ತರಗತಿಗೆ ಹುಬ್ಬಳ್ಳಿಯ ಸಿದ್ಧಾರೂಢ ಜಾತ್ರೆ 9 ನೇ ತರಗತಿಗೆ ಸಂಪೂರ್ಣವಾಗಿ ಕೈಬಿಟ್ಟಿದ್ದ ಡಾ.ಎಸ್.ಎಲ್.ಭೈರಪ್ಪ ಅವರ ಲೇಖನವನ್ನು ಸೇರ್ಪಡಿಸಿರುವುದು ತಪ್ಪೇ? ಪಚಜೇ ಮಂಗೇಶರಾಯರು, ಮಂಜೇಶ್ವರ ಗೋವಿಂದ ಪೈ ಇವರ ಲೇಖನಗಳನ್ನು ಬರಗೂರು ಸಮಿತಿ ನಿರ್ಲಕ್ಷಿಸಿತ್ತು ಅವುಗಳನ್ನು ಸೇರಿಸಲಾಗಿದೆ.

ದೇಶದಲ್ಲಿ ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿರುವ ಕಾಂಗ್ರೆಸ್ ವಾಮಮಾರ್ಗದಿಂದಾದರೂ ಸರಿ, ಅಧಿಕಾರವನ್ನು ಪಡೆಯುವ ಏಕೈಕ ಉದ್ದೇಶದಿಂದ ಲಿಂಗಾಯತ ಧರ್ಮವನ್ನು ಒಡೆಯುವ ಪ್ರಯತ್ನ ಮಾಡಿ ಜನರಿಂದ ತಿರಸ್ಕೃತಗೊಂಡಿದೆ. ಆರ್ಯ-ದ್ರಾವೀಡ ಎಂಬ ತಲೆಬುಡವಿಲ್ಲದ ಸಂಗತಿಯನ್ನು ಜನರೊಳಗೆ ತುರುಕಿ ಮತ್ತಷ್ಟು ಜನರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದೆ. ಸಾಹಿತಿಗಳಿಗೆ ತಪ್ಪು ಸಚಿದೇಶವನ್ನು ರವಾನಿಸುವುದರ ಮೂಲಕ ಸಾಹಿತಿಗಳನ್ನು ವಚಚಿಸುವ ಕುತಂತ್ರ ಬಯಲಾಗಿದೆ.

ಕಾಂಗ್ರೆಸ್ಸಿನ ಟೂಲ್‌ಕಿಟ್ ಟೆರರಿಸಂಗೆ ಈ ನಾಡಿನ ಜನತೆ ಬಲಿಪಶುಗಳಾಗಬಾರದೆಂದು ಎನಚಿತಿಸುತ್ತೇನೆ. ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಬೆಳಗಾವಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮುರುಗೇಂದ್ರಗೌಡ ಪಾಟೀಲ, ದಾದಾಗೌಡಾ ಬಿರಾದಾರ, ಮಾಧ್ಯಮ ವಕ್ತಾರ ಶರದ್ ಪಾಟೀಲ, ಪ್ರಭು ಹೂಗಾರ ಹಾಜರಿದ್ದರು.