Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಜೂನ್‌ 26 ರಿಂದ ದೇಶಾದ್ಯಂತ ಕಾಂಗ್ರೆಸ್‌ ನಿಂದ ಯಂಗ್‌ ಇಂಡಿಯಾ ಕಿ ಬೋಲ್‌ ಕಾರ್ಯಕ್ರಮ: ಕಾರ್ತಿಕ ಪಾಟೀಲ

localview news

ಬೆಳಗಾವಿ: " ಯುವಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಷ್ಟ್ರೀಯ ಕಾಂಗ್ರೆಸ್‌ ವತಿಯಿಂದ "ಯಂಗ್‌ ಇಂಡಿಯಾ ಕಿ ಬೋಲ್‌ " ಸಪೋರ್ಟ್‌ ಕೊಟಾದಡಿಯಲ್ಲಿ ಜೂನ್‌ ಹಾಗೂ ಜುಲೈನಲ್ಲಿ ಯಂಗ್‌ ಇಂಡಿಯಾ ಅಭಿಯಾನ ಕಾರ್ಯಕ್ರಮವನ್ನು ರಾಷ್ಟ್ರಾದ್ಯಂತ ಆಯೋಜಿಸಲಾಗಿದೆ" ಎಂದು ಬೆಳಗಾವಿ ಜಿಲ್ಲಾ ಯುತ್‌ ಕಾಂಗ್ರೆಸ್‌ ಅಧ್ಯಕ್ಷ ಕಾರ್ತಿಕ ಪಾಟೀಲ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಭವನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳಿಂದ ಈ ಮಹತ್ತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೊರೊನಾ ಕಾರಣಗಳಿಂದ ಅಲ್ಪ ಹಿನ್ನೆಡೆಯಾಗಿದೆ. ಮತ್ತೆ 2022 ಜೂನ್‌ 26 ಕ್ಕೆ ಜಿಲ್ಲೆ ಮತ್ತು ಜುಲೈ 26 ರಂದು ರಾಜ್ಯ ಹಾಗೂ ರಾಷ್ಟ್ರಾದ್ಯಂತ "ಯಂಗ್‌ ಇಂಡಿಯಾ ಕೀ ಬೋಲ್‌ " ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲೆಗಳಲ್ಲಿ ಆಯ್ಕೆಯಾದ ಯುವಕರನ್ನು ದೆಹಲಿಗೆ ಕಳಿಸಲಾವುದು ಕಾಂಗ್ರೆಸ್‌ ನಿಂದ ಒಳ್ಳೆಯ ಹುದ್ದೆಯನ್ನು ನೀಡಲಾಗುವುದು ಎಂದರು.

ನಿರುದ್ಯೋಗ, ಬೆಲೆ ಏರಿಕೆ ಸೇರಿದಂತೆ ಜನಪರ ಸಮಸ್ಯೆಗಳ ಕುರಿತು ಭಾಷಣ ಸ್ಪರ್ಧೆ ಇದೆ ಎಂದರು. ಇದೇ ತಿಂಗಳ ಜೂನ್‌ 26 ಜಿಲ್ಲೆ ಹಾಗೂ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಹಂತದ ಸ್ಪರ್ಧೆಯಲ್ಲಿ ಈ 30 ಮಂದಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ’ ಎಂದು ಅವರು ಹೇಳಿದರು.

‘ಜನಪರ ಸಮಸ್ಯೆಗಳು, ಅದರಲ್ಲೂ ಪ್ರಮುಖವಾಗಿ ಯುವ ಸಮೂಹ ಎದುರಿಸುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ಪ್ರಜಾಪ್ರಭುತ್ವದ ಕಗ್ಗೊಲೆ, ಬೆನ್ನು ಮುರಿಯುವ ಹಣದುಬ್ಬರ ತಡೆಯುವಲ್ಲಿ ಬಿಜೆಪಿ ಸರ್ಕಾರದ ವಿಫಲತೆ, ಕೋವಿಡ್‌ ನಿರ್ವಹಣೆಯಲ್ಲಿನ ಲೋಪ ಕುರಿತು ಸ್ಪರ್ಧಿಗಳು ನಡೆಸಲಾಗುವುದು ಎಂದರು.

ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್‌ ಪಕ್ಷ ದೇಶಕ್ಕೆ ನೀಡಿದ ಕೊಡುಗೆಯನ್ನು ಜನರಲ್ಲಿ ಮನವರಿಕೆ ಮಾಡಿಕೊಟ್ಟು, ಮುಂಬರುವ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಗೆಲುವಿಗಾಗಿ ಶ್ರಮಿಸಲು ಮುಂದಾಗಿದ್ದೆವೆ ಎಂದರು.

'1885ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್‌ ಪಕ್ಷವು ನೆಹರು, ಇಂದಿರಾಗಾಂಧಿ, ರಾಜೀವ್‌ ಗಾಂಧಿ ಸೇರಿದಂತೆ ಮನಮೋಹನ್‌ ಸಿಂಗ್‌ ಅವಧಿಯವರೆಗೂ ದೇಶದ ಜನರ ಅಭಿವೃದ್ಧಿಗಾಗಿ ನೂರಾರು ಯೋಜನೆಗಳನ್ನು ರೂಪಿಸಿ ದೇಶ ಕಟ್ಟುವ ಕೆಲಸವನ್ನು ಪಕ್ಷ ಮಾಡಿದೆ. ಪಂಚವಾರ್ಷಿಕ ಯೋಜನೆ, ವಿದೇಶಾಂಗ ನೀತಿ, ಇಂದಿರಾ ಗಾಂಧಿ ಅವರು ದೇಶದ ಜನರು ಬಡತನದಿಂದ ಹೊರಬರಬೇಕೆಂದು ರೂಪಿಸಿದ 20 ಅಂಶಗಳ ಕಾರ‍್ಯಕ್ರಮ, ರಾಜೀವ್‌ ಗಾಂಧಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ,''ಎಂದರು.

''ರಾಜ್ಯ ದಲ್ಲಿ ಕಳೆದ ಬಾರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಜನತೆಗೆ ಪ್ರಣಾಳಿಕೆಯಲ್ಲಿ ನೀಡಿದ ಬಹುತೇಕ ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದ ಸರ್ಕಾರವಾಗಿದೆ. ಸಂಸದ ಆರ್‌. ಧ್ರುವನಾರಾಯಣ ಅವರು ಸಂಸದರಾಗಿ ಆಯ್ಕೆಯಾಗಿ 2 ಬಾರಿ ಉತ್ತಮ ಅಭಿವೃದ್ದಿ ಕೆಲಸಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದಾರೆ.ಈ ಬಾರಿಯೂ ಅವರ ಗೆಲುವಿಗೆ ಬೂತ್‌ ಮಟ್ಟದಿಂದ ಪಕ್ಷದ ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು,'' ಎಂದು ಕಾರ‍್ಯಕರ್ತರಲ್ಲಿ ಮನವಿ ಮಾಡಿದರು.

ಈ ವೇಳೆ ಯಲ್ಲಪ್ಪ ಶಿಂಗೆ, ರಾಹುಲ್‌, ಮಚ್ಚನವರ, ಸಿದ್ದಕಿ ಅಂಕಲಗಿ, ಉಮೇಶ ಹುಂಬಿ, ಈರಣ್ಣಾ ಪೂಜಾರಿ, ಸಂಗಮ ಹೊಸಮನಿ, ಮಂಜುನಾಥ ಕಾಂಬಳೆ, ಪವನ ರಾಥೋಢ ಇದ್ದರು.