Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಅಪರಾಧ ಪ್ರಕರಣದಲ್ಲಿ ಭಾಗಿಯಾದವರಿಗೆ ಆಪ್ ರತ್ನಗಂಬಳಿ

localview news

ಬೆಳಗಾವಿ: ರಾಷ್ಟ್ರೀಯ ಪಕ್ಷಗಳ ಭ್ರಷ್ಟಾಚಾರದ‌ ನಡೆಯಿಂದ ದೆಹಲಿಯ ಅರವಿಂದ ಕೆಜ್ರಿವಾಲ್ ಅವರ ಆಡಳಿಯ ವೈಖರಿಯನ್ನು ಮೆಚ್ವಿಕೊಂಡು ಆಮ್ ಆದ್ಮಿ ಸೇರ್ಪಡೆಗೊಳ್ಳುವವರಿಗೆ ಒಂದು ಇದೊಂದು ಓದುಗರಿಗೆ ಸಂದೇಶ.

ಅಪರಾಧ ಪ್ರಕರಣಗಳಲ್ಲಿ ಗುರುತಿಸಿಕೊಂಡವರನ್ನು ಬೆಳಗಾವಿ ಜಿಲ್ಲಾಧ್ಯಕ್ಷ ವಿಜಯ ಆಮ್ ಆದ್ಮಿ ಪಕ್ಷಕ್ಕೆ ಪಂಥಾಹ್ವನ ನೀಡಿ ಹುದ್ದೆ ನೀಡುತ್ತಿರುವುದು ಕಾರ್ಯಕರ್ತರು ಈಗ ಕಾಂಗ್ರೆಸ್ ನತ್ತ ಚಿತ್ತ ಹರಿಸಿದ್ದಾರೆ. ಬೆಳಗಾವಿ ಜಿಲ್ಲಾಧ್ಯಕ್ಷ ತಮ್ಮ ಸ್ವಂತ ಲಾಭಕ್ಕಾಗಿ ಪಕ್ಷದ ಸಿದ್ಧಾಂತವನ್ನು ಗಾಳಿತೂರಿ ಪಕ್ಷಕ್ಕೆ‌ದ್ರೋಹ ಎಸಗುತ್ತಿದ್ದಾರೆ‌‌. ತಮಗೆ ಬೇಕಾದವರನ್ನು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಆಪ್ ಕಾರ್ಯಕರ್ತರ ವಿರೋಧದ ನಡುವೆಯೂ ಅಪರಾಧ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದವರಿಗೆ ಆಪ್ ನಲ್ಲಿ ಜವಾಬ್ದಾರಿ ನೀಡಿದ್ದು ನಾನಾ ಅನುಮಾನಕ್ಕೆ ಕಾರಣವಾಗಿದೆ.

ತೆಲಗಿ ಚಾಪಾ ಹಗರಣದಲ್ಲಿ ಭಾಗಿಯಾಗಿದ್ದ ಆರೋಪಿ ಸುಲೇಮಾನ ಮುಲ್ಲಾ, ನಕಲಿ ನೋಟಿನ ಅಪರಾಧ ಹಿನ್ನೆಲೆ ಹೊಂದಿರುವ ಕಾಗವಾಡದ ಭಜಂತ್ರಿ ಜೈಲು ಶಿಕ್ಷೆ ಅನುಭವಿಸಿ ಬಂದವರಿಗೆ ಬೆಳಗಾವಿ ಆಪ್ ಜಿಲ್ಲಾಧ್ಯಕ್ಷ ವಿಜಯ ಪಾಟೀಲ ಆಪ್ ಕಾರ್ಯಕರ್ತರ ವಿರೋಧದ ನಡುವೆ ಬೆಳಗಾವಿ ನಗರದ 58ನೇ ವಾಡ್೯ನ ಜವಾಬ್ದಾರಿ ನೀಡಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಆಪ್ ವಿರುದ್ಧ ಹೋರಾಟಕ್ಕೆ‌ ಮುಂದಾದರೂ ಅಶ್ಚರಿಪಡಬೇಕಿಲ್ಲ.

ಪಕ್ಷದಿಂದ ವಿಜಯ ಪಾಟೀಲ ಅವರನ್ನು ವಜಾ ಮಾಡಿ ಎಂಬ ಅಭಿಯಾನವನ್ನು ಆಪ್ ಕಾರ್ಯಕರ್ತರೆ ಮಾಡಿಕೊಳ್ಳುತ್ತಿದ್ದಾರೆ. ಆಪ್ ರಾಜ್ಯ ನಾಯಕರು ಎಚ್ಚೆತ್ತುಕೊಂಡು ವಿಜಯ ಪಾಟೀಲ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಪ್ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ.