Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕಟೀಲ್ ಹೇಳಿದ್ದು ಎಲ್ಲಾ ನಂಬಬೇಕಾ: ಸಿದ್ದರಾಮಯ್ಯ ಪ್ರಶ್ನೆ

localview news

ಬೆಳಗಾವಿ: ನಳಿನಕುಮಾರ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷನಾಗಲು ಲಾಯಕ್ಕಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಂಗಳವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಳಿನಕುಮಾರ ಕಟೀಲ್ ಬುದ್ದಿ ಕಡಿಮೆ ಇದೆ. ಅವನ ಹೇಳಿಕೆಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಪ್ರತಿಕ್ರಯಿಸಿದ ಅವರು, ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಎಲ್ಲ ಮುಖಂಡರು ಸೇರಿ ನಿರ್ಣಯ ಮಾಡಿದ್ದು, ನಳಿನಕುಮಾರ ಕಟೀಲ್ ಎಲ್ಲ ಹೇಳಿದ್ದು ನಂಬಬೇಕಾ ? ಯಾರಿ ಅವರು ನಮಗೆ ಎಂದು ಮಾಧ್ಯಮದವರಿಗೆ ಪ್ರಶ್ನಿಸಿದರು. ರಾಜಕೀಯವಾಗಿ ನಾವು, ಅವರು ವಿರೋಧಿಗಳು ಅವರು ಹೇಳುವುದು ಎಲ್ಲ ಸತ್ಯ ಇರುತ್ತಾ ? ಕಟೀಲ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಅವರು ರಾಜಕೀಯಕ್ಕಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿಗೆ ಮತದಾರರು ಯಾಕೆ ಮತಹಾಕುತ್ತಾರೆ. ಅವರೇನು ದೇಶದ ಆರ್ಥಿಕತೆ ಸುಧಾರಣೆ ಮಾಡಿದ್ದಾರಾ ಎಂದು ಪ್ರಶ್ನಿಸಿದ ಅವರು, ನಿರುದ್ಯೋಗದ ಸಮಸ್ಯೆ, ಡಿಸೇಲ್, ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆಯಾಗಿದೆಯಲ್ಲ ಅದು ಒಳ್ಳೆಯದಾ ? ಯಾವದನ್ನು ಕಡಿಮೆ‌ ಮಾಡಿದ್ದಾರೆ ಬಿಜೆಪಿಯವರು ಎಂದ ಅವರು, ನೋಟ್ ಬ್ಯಾನ್, ಜಿಎಸ್ ಟಿ ಮಾಡಿದ ಮೇಲೆ ದೇಶದ ಆರ್ಥಿಕತೆ ದಿವಾಳಿಯಾಗಿದೆ ಇದನ್ನು ಮಾಡಿರುವುದು ಮೋದಿ ನಡೆ ಒಳ್ಳೆಯದಾ ಎಂದು ತಮ್ಮದೆಯಾದ ಶೈಲಿಯಲ್ಲಿ ಚಾಟಿ ಬಿಸಿದರು.

53 ಲಕ್ಷದ 11 ಸಾವಿರ ಕೋಟಿ ಇತ್ತು ದೇಶದ ಸಾಲ ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದಾಗ ಆದರೆ ಈಗ ಮಾಚ್೯ ಕೊನೆಗೆ 155 ಲಕ್ಷ ಕೋಟಿ ಒಂದು ಲಕ್ಷ ಕೋಟಿಗೂ ಅಧಿಕ ದೇಶದ ಸಾಲ ಹೆಚ್ಚಾಗಿವೆ.ಅದಕ್ಕಾಗಿ ಜನ ಬಿಜೆಪಿಗೆ ಮತ ಹಾಕುತ್ತಿರಾ ? ಅದಕ್ಕೆ ಯಡಿಯೂರಪ್ಪ ಮತ ಹಾಕಿ ಎಂದು ಹೇಳುತ್ತಾರಾ ಎಂದು ಪ್ರಶ್ನಿಸಿದರು.

ಪಠ್ಯಕ್ರಮದ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಒಂದು ವಿಷಯದಲ್ಲಿ ಸಮಸ್ಯೆ ಇದ್ದರೆ ಸರಿ. ಎಲ್ಲದರಲ್ಲೂ ಸಮಸ್ಯೆ ಇದೆ.ಇದನ್ನು ಬಿಜೆಪಿಯವರು ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ತಂದೆ,ತಾಯಿ, ಅವರ ಜನ್ಮ ದಿನವನ್ನು ಮಕ್ಕಳ‌ ತಿಳಿದುಕೊಳ್ಳಬೇಕು. ಸಂವಿಧಾನ ಬರೆದವರು ಯಾರು? ಸಂವಿಧಾನ ಶಿಲ್ಪಿ ಎನ್ನುವುದನ್ನು ತಗೆದು ಹಾಕಿಬಿಟ್ಟಿದ್ದಾರೆ.

ಅಲ್ಲದೆ ಕುವೆಂಪು ಅವರ ಫೋಟೋವನ್ನು ಸಹ ತಗೆದು ಹಾಕಿದ್ದಾರೆ. ಇದು ರಾಷ್ಟ್ರ ಕವಿ ಕುವೆಂಪು ಅವರಿಗೆ ಮಾಡಿದ ಅವಮಾನ. ನಾರಾಯಣ ಗುರು, ಬಸವಣ್ಣ, ಭಗತ್ ಸಿಂಗ್, ಅಂಬೇಡ್ಕರ್, ಸುರಪುರದ ನಾಯಕರನ್ನು ಅವಮಾನ ಮಾಡಿ ಕೇಸರಿಕರಣ ಮಾಡಲು ಹೋರಟಿದ್ದಾರೆ. ಇದನ್ನು ವಿದ್ಯಾರ್ಥಿಗಳ ತಲೆ ತುಂಬಲು ಹೋರಟಿದ್ದಾರೆ. ಇದು ಆಗಬಾರದು ಎಂದು ಹರಿಹಾಯ್ದರು.

ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು. ಅವರ ಮಗನಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗಲಿಲ್ಲ. ಮುಂಬರುವ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುತ್ತೇವೆ ಅಂತಾ ಹೇಳುತ್ತಾರೆ. ಅವರು ಮುಖ್ಯಮಂತ್ರಿ ಆಗತ್ತಾರಾ ಮತ್ತೆ ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿ ಬಹಳ ದಿನ ಆಗಿದೆ ಎಂದರು.

ವಾಯುವ್ಯ, ಪಶ್ಚಿಮ ಶಿಕ್ಷಕ ಮತ್ತು ಪದವೀಧರ ಮತಕ್ಷೇತ್ರದ ಚನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಸಂಪೂರ್ಣ ವಿಶ್ವಾಸ ಇದೆ.