Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಅಂತರಾಷ್ಟ್ರೀಯ ಕ್ರೀಡಾ ಪಟುವಾದ ಬಸವರಾಜ ಹೊರಡ್ಡಿಗೆ ಸಹಾಯ ಹಸ್ತ ಚಾಚಿದ ಚಂದರಗಿ ಕ್ರೀಡಾ ಶಾಲೆ

localview news

ರಾಮದುರ್ಗ: ಚಂದರಗಿ ಕ್ರೀಡಾ ಶಾಲೆಯ ಹಳೆಯ ವಿದ್ಯಾರ್ಥಿಯಾದ ಬಸವರಾಜ ಹೊರಡ್ಡಿ ಈತನು ಅಂತರಾಷ್ಟ್ರೀಯ ಮಟ್ಟದ ಹಲವಾರು ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಸಂಪಾದಿಸುವುದರ ಮೂಲಕ ಕರ್ನಾಟಕ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿಯನ್ನು ತಂದ ಹೆಮ್ಮೆಯ ಕ್ರೀಡಾಪಟುವಾಗಿದ್ದಾನೆ.

ಇದೇ ತಿಂಗಳು ದಿನಾಂಕ : 18 ರಿಂದ 22 ರ ವರೆಗೆ ದೆಹಲಿಯಲ್ಲಿ ಜರುಗಲಿರುವ, ಪ್ಯಾರಾ ಏಶಿಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾನೆ, ಅವನಿಗೆ ಅತ್ಯಾಧುನಿಕ ಕ್ರೀಡಾ ಸಾಮಗ್ರಿಗಳ ಕೊರತೆಯಿದೆ.

ಅವನು ಈ ವಿಷಯದ ಬಗ್ಗೆ ಸ್ಪೋಕೊ ಸಂಸ್ಥೆಯ ಗಮನಕ್ಕೆ ತಂದಾಗ ತಕ್ಷಣವೇ ಸ್ಪಂದಿಸಿದ ಸ್ಪೋಕೊ ಸಂಸ್ಥೆಯವರು ಶಾಲೆಯಲ್ಲಿ ತರಬೇತಿ ನೀಡುವುದರ ಜೊತೆಗೆ ಎಲ್ಲ ಕ್ರೀಡಾ ಸಾಮಗ್ರಿಗಳನ್ನು ಒದಗಿಸಲು ಒಪ್ಪಿಕೊಂಡಿದ್ದಾರೆ.

ಶಾಲೆಯ ಸೈಕ್ಲಿಂಗ್ ತರಬೇತುದಾರರಾದ ಶ್ರೀ ಭೀಮಶಿ ವಿಜಯನಗರ ಅವರು ಈ ಪ್ರತಿಭಾವಂತ ಕ್ರೀಡಾ ಪಟುವಿಗೆ ತರಬೇತಿಯನ್ನು ನೀಡುತ್ತಿದ್ದು, ಬರಲಿರುವ ಕ್ರೀಡಾ ಕೂಟದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಭಾರತ ದೇಶಕ್ಕೆ ಮತ್ತು ಕರ್ನಾಟಕ ರಾಜ್ಯಕ್ಕೆ ಕೀರ್ತಿಯನ್ನು ತರಲೆಂದು ಸ್ಪೋಕೊ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಎಸ್.ಎಮ್.ಕಲೂತಿ ಹಾಗೂ ಅಧ್ಯಕ್ಷರಾದ ಶ್ರೀ ಬಿ.ಆರ್.ಪಾಟೀಲ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಯಾದವಾಡ ಮತ್ತು ಎಲ್ಲ ನಿರ್ದೇಶಕ ಮಂಡಳಿಯವರು ಶುಭ ಹಾರೈಸಿದ್ದಾರೆ.