ಕಾಂಗ್ರೆಸ್ ಭ್ರಮೆಯಲ್ಲಿದೆ: ಮಾಜಿ ಸಿಎಂ ಯಡಿಯೂರಪ್ಪ
ಬೆಳಗಾವಿ: ಕಾಂಗ್ರೆಸ್ ಬರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬುಧವಾರ ನಗರದ ದೇಸಾಯಿ ಹಾಲನಲ್ಲಿ ಮಾತನಾಡಿದ್ರು. ಹಣ, ತೊಳ್ವಲ, ಜಾತಿಯ ವಿಷ ಬೀಜ ಬಿತ್ತಿ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲವು ಸಾಧಿಸುತ್ತಿತ್ತು. ಆದರೆ ಈ ಮತದಾರರು ಬದಲಾಗಿದ್ದಾರೆ. ಆದ್ದರಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ.
ಬಿಜೆಪಿ ಭೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 140 ಕ್ಷೇತ್ರ ಗೆದ್ದು ಬಿಜೆಪಿ ಅಧಿಕಾರಕ್ಕೆ ತರುವ ಪ್ರಯತ್ನ ಮಾಡಬೇಕು ಎಂದರು. ಸಚಿವೆ ಶಶಿಕಲ್ಲಾ ಜೊಲ್ಲೆ ಮಾತನಾಡಿ, ಶಿಕ್ಷಕರು ಹಾಗೂ ಪದವೀಧರ ಸಮಸ್ಯೆಯನ್ನು ಬಗೆ ಹರಿಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡಲು ಬದ್ಧ ಎಂದರು.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಚಿಂತಕರ ಚಾವಡಿ ಹಿರಿಯ ಮನೆ ಎಂದು ಕರೆಯುವ ವಿಧಾನ ಪರಿಷತ್ ನಲ್ಲಿ ಈಗ ಯಾರ ಯಾರೋ ಬರತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಶಿಕ್ಷಕ ಮತಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿಗೆ ಟಾಂಗ್ ನೀಡಿದರು. ಕಾಂಗ್ರೆಸ್ ನ ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಸುನಿಲ್ ಸಂಕ ನಮ್ಮ ಅಥಣಿ ಕ್ಷೇತ್ರದವ. ನನ್ನ ಗೆಳೆಯಾ ಅವನು ಸಿಕ್ಕಾಗ ಕೇಳಿದೆ. ಯಾಕ ಈ ಚುನಾವಣೆಗೆ ಸ್ಪರ್ಧೆ ಮಾಡಿ ಅಂದರೆ ಅವಾ ಹೇಳಿದ ನನಗೆ ಗೊತ್ತಿರಲಿಲ್ಲ.
ಇದು ಮೂರು ಜಿಲ್ಲಾ ಬರುತ್ತದೆ ಎಂದು ನನಗೆ ತಿಳಿದಿರಲಿಲ್ಲ ಅಂದಾ. ಅಲ್ಲದೆ, ಹಣಮಂತ ನಿರಾಣಿ ಗೆಲ್ಲುತ್ತಾರೆ ಎಂದು ಆತನೆ ಹೇಳಿದ ಎಂದರು. ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಸಚಿವರಾದ ಮುರುಗೇಶ ನಿರಾಣಿ, ಗೋವಿಂದ್ ಕಾರಜೋಳ, ಸಂಸದೆ ಮಂಗಲಾ ಅಂಗಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.