Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕರ್ನಾಟಕ ಸ್ವರಾಜ್ಯ ಪಾರ್ಟಿ: 3 ವರ್ಷದ ಹಣಕಾಸು ವರದಿ ಸಲ್ಲಿಕೆಗೆ ಡಿಸಿ ಸೂಚನೆ

localview news

ಬೆಳಗಾವಿ: ಜಿಲ್ಲೆಯ ಕರ್ನಾಟಕ ಸ್ವರಾಜ್ಯ ಪಾರ್ಟಿ ಅಧ್ಯಕ್ಷರು ಅಥವ ಪಕ್ಷಕ್ಕೆ ಸಂಬಂಧಿಸಿದ ಯಾವುದೇ ಸದಸ್ಯರು, ಪದಾಧಿಕಾರಿಗಳು ತಮ್ಮ ಪಕ್ಷದ 2017-18, 2018-19 ಹಾಗೂ 2019-20 ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನಮೂನೆ 24-ಎ ಹಾಗೂ ಅಡಿಟ್ ವರದಿಗಳನ್ನು ಮುಖ್ಯ ಚುನಾವಣಾಧಿಕಾರಿ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದ್ದಾರೆ.

ರಾಯಬಾಗದಲ್ಲಿರುವ ಕರ್ನಾಟಕ ಸ್ವರಾಜ್ಯ ಪಾರ್ಟಿ ಕುರಿತು 2017-18, 2018-19 ಹಾಗೂ 2019-20 ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನಮೂನೆ 24-ಎ ಹಾಗೂ ಅಡಿಟ್ ವರದಿಗಳು ಸಲ್ಲಿಸದೇ ಇರುವ ಬಗ್ಗೆ ಅಧ್ಯಕ್ಷರಿಗೆ ನೋಟಿಸ್ ನೀಡಿ ವರದಿ ಸಲ್ಲಿಸುವಂತೆ ಕ್ರಮ ವಹಿಸಲು ರಾಯಬಾಗ ತಹಶೀಲದಾರರಿಗೆ ಸೂಚಿಸಿಲಾಗಿತ್ತು. ಆದರೆ ಸದ್ಯಕ್ಕೆ ರಾಯಬಾಗದ ಚಿದಂಬರ ಕೃಪಾ ಸಾಯಿ ನಗರದ ನಂಬರ್ 2082 ಈ ವಿಳಾಸದಲ್ಲಿ ಅಧ್ಯಕ್ಷರು ಇಲ್ಲ ಎಂದು ಕಾರ್ಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ಹೀಗಾಗಿ ತಕ್ಷಣವೇ ಕರ್ನಾಟಕ ಸ್ವರಾಜ್ಯ ಪಾರ್ಟಿ ಅಧ್ಯಕ್ಷರು ಅಥವ ಪಕ್ಷಕ್ಕೆ ಸಂಬಂಧಿಸಿದ ಯಾವುದೇ ಸದಸ್ಯರು, ಪದಾಧಿಕಾರಿಗಳು ತಮ್ಮ ಪಕ್ಷದ 2017-18, 2018-19 ಹಾಗೂ 2019-20 ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನಮೂನೆ 24-ಎ ಹಾಗೂ ಅಡಿಟ್ ವರದಿಗಳನ್ನು ಮುಖ್ಯ ಚುನಾವಣಾಧಿಕಾರಿಗಳು, ಹಾಗೂ ಪದನಿಮಿತ್ತ ಸರ್ಕಾರದ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಸುಧಾರಣೆ ಇಲಾಖೆ, ಶೇಷಾದ್ರಿ ರೋಡ ಬೆಂಗಳೂರು-560001 ಇವರಿಗೆ ಸಲ್ಲಿಸುಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.